ನವದೆಹಲಿ: ತೂಕವನ್ನು ಕಳೆದುಕೊಳ್ಳಲು ಹೆಚ್ಚಿನ ಜನರು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನಿಂಬೆ ಪಾನಕ ಕುಡಿಯಲು ಇಷ್ಟಪಡುತ್ತಾರೆ. ಆದರೆ ಚಳಿಗಾಲದಲ್ಲಿ ನಿಂಬು ಪಾನಕ ಕುಡಿಯುವುದರಿಂದ ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆಗಳು ಬರಬಹುದು. ಹೀಗಾಗಿ ಚಳಿಗಾಲದಲ್ಲಿ ನಿಂಬೆ ಪಾನಕ ಸೇವಿಸುವುದನ್ನು ತಪ್ಪಿಸುವುದು ಉತ್ತಮ.


COMMERCIAL BREAK
SCROLL TO CONTINUE READING

ಇಂತಹ ಪರಿಸ್ಥಿತಿಯಲ್ಲಿ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ಚಳಿಗಾಲದಲ್ಲಿ ನೀವು ನಿಂಬೆ ಪಾನಕದ ಬದಲಿಗೆ ಇತರ ಕೆಲವು ಪಾನೀಯಗಳನ್ನು ಕುಡಿಯಬಹುದು. ಚಳಿಗಾಲದಲ್ಲಿ ನಿಂಬೆ ಪಾನಕದ ಬದಲು ಯಾವ ಪಾನೀಯಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳಿರಿ.


ಚಳಿಗಾಲದಲ್ಲಿ ತೂಕ ನಷ್ಟಕ್ಕೆ ಈ ಪಾನೀಯ ಸೇವಿಸಿರಿ


ಅಜವಾನ ನೀರು: ಚಳಿಗಾಲದಲ್ಲಿ ನಿಂಬೆ ಪಾನಕ ಕುಡಿಯಬಯಸದಿದ್ರೆ, ನೀವು ಅದರ ಬದಲು ಅಜವಾನದ ನೀರು ಕುಡಿಯಬಹುದು. ಇದಕ್ಕಾಗಿ ಒಂದು ಚಮಚ ಅಜವಾನವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಮತ್ತು ಚಹಾದಂತೆ ಸೇವಿಸಿ. ಹೀಗೆ ಮಾಡುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಅದೇ ರೀತಿ ಈ ನೀರನ್ನು ಕುಡಿಯುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.


ಇದನ್ನೂ ಓದಿ: High Cholesterol: ಕಣ್ಣಿನ ಸುತ್ತಲಿನ ಈ ಬದಲಾವಣೆಗಳು ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು


ಜೀರಿಗೆ ನೀರು: ಚಳಿಗಾಲದಲ್ಲಿ ಜೀರಿಗೆ ನೀರು ಕೂಡ ಉತ್ತಮ ಆಯ್ಕೆಯಾಗಿದೆ. ಇದನ್ನು ಕುಡಿಯಲು ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಕುದಿಸಿ. ಈಗ ಈ ನೀರನ್ನು ಸೇವಿಸಿ, ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ರೀತಿ ಇದನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ನಿಮಗೆ ಉತ್ತಮ ನಿದ್ರೆಯು ಸಹ ದೊರೆಯುತ್ತದೆ.   


ಮೆಂತ್ಯ ನೀರು: ಮೆಂತ್ಯ ನೀರನ್ನು ಸೇವಿಸುವುದು ತೂಕವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಇದರ ಜೊತೆಗೆ ಈ ಪಾನೀಯ ನಿಮಗೆ ಶೀತದಿಂದ ಪರಿಹಾರವನ್ನು ನೀಡುತ್ತದೆ. ಒಂದು ಚಮಚ ಮೆಂತ್ಯವನ್ನು ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಿ, ಬೆಳಗ್ಗೆ ಅದನ್ನು ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಈ ನೀರನ್ನು ಕುಡಿಯುವುದರಿಂದ ನೀವು ಶೀತದಿಂದ ಪರಿಹಾರ ಪಡೆಯುತ್ತೀರಿ ಮತ್ತು ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದಿಲ್ಲ.


ಇದನ್ನೂ ಓದಿ: ಈ ಆಹಾರಗಳ ಮೂಲಕ ಬ್ಲಡ್ ಪ್ರೆಶರ್ ಅನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು .! 


ಜೇನುತುಪ್ಪದ ನೀರು: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು. ಈ ಪಾನೀಯವು ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಸಹ ಕೆಲಸ ಮಾಡುತ್ತದೆ.


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆ ಪಾಲಿಸುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.