Vegetable Soups For Weight Loss: ಉತ್ತಮ ಆರೋಗ್ಯಕ್ಕೆ ವೆಜಿಟೇಬಲ್ಸ್ ಎಂದರೆ ತರಕಾರಿಗಳು ಅತ್ಯಗತ್ಯ ಎಂಬುದು ನಮಗೆ ತಿಳಿದೇ ಇದೆ. ಅಂತೆಯೇ, ವೆಜಿಟೇಬಲ್ ಸೂಪ್ ಕುಡಿಯುವುದರಿಂದ ದೇಹವನ್ನು ಆರೋಗ್ಯವಾಗಿಡಲು ನೆರವಾಗುತ್ತದೆ. ಅಷ್ಟೇ ಅಲ್ಲ, ವೆಜಿಟೇಬಲ್  ಸೂಪ್‌ಗಳನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುವುದರೊಂದಿಗೆ ಜೀರ್ಣಾಂಗ ವ್ಯವಸ್ಥೆಯೂ ಬಲಗೊಳ್ಳುತ್ತದೆ ಎಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ಹೌದು, ನೀವು ಆಹಾರ ಸೇವಿಸುವ ಮೊದಲು ತರಕಾರಿ ಸೂಪ್‌ಗಳನ್ನು ಸೇವಿಸಿದರೆ, ಅದು ಆಹಾರವನ್ನು ಜೀರ್ಣಿಸಿಕೊಳ್ಳುವುದರ ಜೊತೆಗೆ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಸೂಪ್ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಯಾವ ತರಕಾರಿಗಳನ್ನು ಸೇವಿಸಬೇಕು ಎಂಬುದನ್ನು ತಿಳಿಯೋಣ...


ಬೊಜ್ಜನ್ನು ಬೆಣ್ಣೆಯಂತೆ ಕರಗಿಸಲು ನಿಮ್ಮ ಡಯಟ್ನಲ್ಲಿರಲಿ ಈ ವೆಜಿಟೇಬಲ್ ಸೂಪ್ಸ್:
* ಹೂಕೋಸಿನ ಸೂಪ್:

ಹೂಕೋಸಿನ ಸೂಪ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.  ಹೂಕೋಸಿನ ಸೂಪ್ ಕುಡಿಯುವುದರಿಂದ  ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. 


ಹೂಕೋಸಿನ ಸೂಪ್ ತಯಾರಿಸುವ ವಿಧಾನ-
ಹೂಕೋಸಿನ ಸೂಪ್ ಅನ್ನು ತಯಾರಿಸಲು ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಳ್ಳಿ. ಆ ಎಣ್ಣೆಗೆ ಈರುಳ್ಳಿ, ಹಸಿಮೆಣಸಿನಕಾಯಿ, ಕತ್ತರಿಸಿದ ಹೂಕೋಸು ಹಾಕಿ ಸ್ವಲ್ಪ ಬಾಡಿಸಿ. ನಂತರ ಎರಡು ಕಪ್ ನೀರು ಹಾಕಿ ಸ್ವಲ್ಪ ಹೊತ್ತು ಚೆನ್ನಾಗಿ ಕುಡಿಯಲು ಬಿಡಿ. ಚೆನ್ನಾಗಿ ಕುದ್ದ ಬಳಿಕ ಅದಕ್ಕೆ ಸ್ವಲ್ಪ ಉಪ್ಪು, ಕುಟ್ಟಿ ಪುಡಿ ಮಾಡಿದ ಕರಿ ಮೆಣಸಿನ ಪುಡಿಯನ್ನು ಸೇರಿಸಿ, ನಂತರ ಸ್ಟೌವ್ ಆಫ್ ಮಾಡಿ. ಇದು ತಣ್ಣಗಾದ ನಂತರ ಮಿಕ್ಸರ್ನಲ್ಲಿ ಲಘುವಾಗಿ ಮಿಶ್ರಣ ಮಾಡಿ.  ಈಗ ಈ ಸೂಪ್ ಅನ್ನು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬಡಿಸಿ.


ಇದನ್ನೂ ಓದಿ- Morning Tea Side Effects: ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸ ನಿಮಗೂ ಇದೆಯೇ? ಇದನ್ನೊಮ್ಮೆ ಓದಿ


* ಬೀಟ್ರೂಟ್ ಸೂಪ್:
ಬೀಟ್ರೂಟ್ ಸೂಪ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ ಮತ್ತು ದೇಹದ ದೌರ್ಬಲ್ಯ ದೂರವಾಗುತ್ತದೆ.


ಬೀಟ್ರೂಟ್ ಸೂಪ್ ತಯಾರಿಸುವ ವಿಧಾನ; 
ಬೀಟ್ರೂಟ್ ಸೂಪ್ ಮಾಡಲು, ಕುಕ್ಕರ್ನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಎಣ್ಣೆ ಬಿಸಿಯಾದ ನಂತರ ಈರುಳ್ಳಿ, ಟೊಮೆಟೊ ಮತ್ತು ಬೀಟ್ರೂಟ್ ಸೇರಿಸಿ ಮತ್ತು ಸ್ವಲ್ಪ ಫ್ರೈ ಮಾಡಿ. ಅದರ ನಂತರ ಎರಡು ಕಪ್ ನೀರು ಹಾಕಿ. ಕುಕ್ಕರ್ ಮುಚ್ಚಳ ಮುಚ್ಚಿ. ಕುಕ್ಕರ್ ಒಂದು ಸೀಟಿ ಕೂಗಿದ ನಂತರ ಅದನ್ನು ಆಫ್ ಮಾಡಿ. ಕುಕ್ಕರ್ ತಣ್ಣಗಾದ ಬಳಿಕ ಮುಚ್ಚಳ ತೆಗೆದು ಮ್ಯಾಶರ್ನೊಂದಿಗೆ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದನ್ನು ಬಾಣಲೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಮಾತು ಕುಟ್ಟಿ ಪುಡಿಮಾಡಿದ ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಿ.


ಇದನ್ನೂ ಓದಿ- ಮುಂಜಾನೆ ತಲೆನೋವಿಗೆ ಮನೆಮದ್ದು


* ಸೋರೆಕಾಯಿ ಸೂಪ್:
ಬಾಟಲ್ ಸೋರೆಕಾಯಿ ಸೂಪ್ ಕುಡಿಯಲು ತುಂಬಾ ರುಚಿಯಾಗಿರುತ್ತದೆ. ಅಷ್ಟೇ ಅಲ್ಲ ಇದು ತೂಕ ಇಳಿಕೆಗೆ ವರದಾನಕ್ಕಿಂತ ಕಡಿಮೆ ಇಲ್ಲ. 


ಸೋರೆಕಾಯಿ ಸೂಪ್ ತಯಾರಿಸುವ ವಿಧಾನ: 
ಸೋರೆಕಾಯಿ ಸೂಪ್ ತಯಾರಿಸಲು ಬಾಣಲೆಯಲ್ಲಿ ಎಣ್ಣೆ ಹಾಕಿ ಈರುಳ್ಳಿ ಮತ್ತು ಟೊಮೆಟೊಗಳನ್ನು ಫ್ರೈ ಮಾಡಿ. ಅದರ ನಂತರ ಅದಕ್ಕೆ ಕತ್ತರಿಸಿದ ಸೋರೆಕಾಯಿಯನ್ನು ಹಾಕಿ ಮತ್ತು ನೀರನ್ನು ಮಿಶ್ರಣ ಮಾಡಿ, ಸ್ವಲ್ಪ ಸಮಯದವರೆಗೆ ಎಲ್ಲವನ್ನೂ ಬೇಯಿಸಿ, ಅದಕ್ಕೆ ಉಪ್ಪು ಮತ್ತು ಕರಿಮೆಣಸು ಸೇರಿಸಿ. ಈ ಸೂಪ್ ತಣ್ಣಗಾದ ಬಳಿಕ ಚೆನ್ನಾಗಿ ಮಿಶ್ರಣ ಮಾಡಿ, ಅದಕ್ಕೆ ನಿಂಬೆ ರಸವನ್ನು ಸೇರಿಸಿ ಬಳಿಕ ಈ ಸೂಪ್ ಸೇವಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.