Farting is good or bad: ಸಾರ್ವಜನಿಕ ಸ್ಥಳದಲ್ಲಿ ಅಥವಾ ಸ್ನೇಹಿತರ ನಡುವೆ ಜೋರಾಗಿ ಹೂಸು ಬಿಟ್ಟರೆ, ಅದು ಮುಜುಗರಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಅದನ್ನು ನಿಯಂತ್ರಿಸಲು ಸಹ ಕಷ್ಟವಾಗುತ್ತದೆ. ಹಲವು ಬಾರಿ ನಿಧಾನವಾಗಿ ಹೂಸು ಬಿಡಲು ಪ್ರಯತ್ನಿಸಿದರೂ ಸಹ ಅದು ಸಾಧ್ಯವಾಗೋದಿಲ್ಲ. ಇನ್ನೂ ಕೆಲವರು, ಅವೆಲ್ಲಾ ದೇಹದ ಪ್ರಕ್ರಿಯೆ ಎಂದು ಮುಜುಗರವಿಲ್ಲದೆ, ಎಲ್ಲರ ಮುಂದೆಯೇ ಹೂಸು ಬಿಡುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಜಗದೀಶ್ ಬೆಟ್ಟಹಳ್ಳಿ ಅವರ ಅಕಾಲಿಕ ನಿಧನಕ್ಕೆ ಛಲವಾದಿ ನಾರಾಯಣಸ್ವಾಮಿ ಸಂತಾಪ


ಆದರೆ ಹೂಸು ತಡೆದುಕೊಳ್ಳುವುದರಿಂದ ಯಾವ ರೀತಿಯ ಅಡ್ಡ ಪರಿಣಾಮಗಳಿವೆ ಗೊತ್ತಾ? ಈ ಬಗ್ಗೆ ವೈದ್ಯರು ಹೇಳೋದೇನು? ಇಷ್ಟೆಲ್ಲಾ ವಿಚಾರಗಳ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.


ಡಾ. ಮನನ್ ವೋಹ್ರಾ ತಮ್ಮ ಇನ್‌’ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊ ಶೇರ್ ಮಾಡುವ ಮೂಲಕ, "ಫಾರ್ಟಿಂಗ್ ಅಥವಾ ಹೂಸು ಬಿಡುವುದು ಸಂಪೂರ್ಣವಾಗಿ ಸಾಮಾನ್ಯ ಮತ್ತು ಆರೋಗ್ಯಕರ ಪ್ರಕ್ರಿಯೆ. ಇದು ಜೀರ್ಣಕ್ರಿಯೆಯ ಸಮಯದಲ್ಲಿ ರೂಪುಗೊಳ್ಳುವ ನೈಸರ್ಗಿಕ ಅನಿಲವನ್ನು ತೆಗೆದುಹಾಕಲು ದೇಹದ ಒಂದು ಮಾರ್ಗವಾಗಿದೆ. ದಿನಕ್ಕೆ 25 ಬಾರಿ ಹೂಸು ಹೊರಹಾಕಬೇಕು” ಎಂದಿದ್ದಾರೆ.


ನಿಮ್ಮ ಹೊಟ್ಟೆಯಲ್ಲಿ ಅತಿಯಾದ ಗ್ಯಾಸ್ ಉತ್ಪತ್ತಿಯಾಗುತ್ತಿದ್ದರೆ ಕೆಲವು ವಿಧಾನಗಳನ್ನು ಅಳವಡಿಸಿಕೊಂಡು ಅದನ್ನು ನಿಯಂತ್ರಿಸಬಹುದು ಎಂದು ಡಾ.ಮನನ್ ವೋಹ್ರಾ ಹೇಳಿದ್ದಾರೆ.


1. ಆಗಾಗ್ಗೆ ಸಣ್ಣ ಪ್ರಮಾಣದಲ್ಲಿ ತಿನ್ನಿರಿ


ಒಂದೇ ಸಮಯದಲ್ಲಿ ಹೆಚ್ಚು ತಿನ್ನುವುದು ಹೊಟ್ಟೆಯ ಮೇಲೆ ಹೊರೆಯನ್ನು ಉಂಟುಮಾಡುತ್ತದೆ. ಇದು ಹೆಚ್ಚು ಅನಿಲ ರಚನೆಗೆ ಕಾರಣವಾಗಬಹುದು. ಆದ್ದರಿಂದ ಸಣ್ಣ ಪ್ರಮಾಣದಲ್ಲಿ ಆಗಾಗ್ಗೆ ತಿನ್ನುವುದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಕಡಿಮೆ ಅನಿಲವನ್ನು ಉತ್ಪಾದಿಸುತ್ತದೆ.


2. ನಿಧಾನವಾಗಿ ಅಗಿಯಿರಿ ಮತ್ತು ನೀರನ್ನು ಕುಡಿಯಿರಿ


ಬೇಗನೆ ತಿನ್ನುವುದು ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಗಾಳಿ ತುಂಬುತ್ತದೆ. ಆಗ ಹೊಟ್ಟೆ ಉಬ್ಬುವುದು ಮತ್ತು ಅನಿಲ ರಚನೆಗೆ ಕಾರಣವಾಗುತ್ತದೆ. ನಿಧಾನವಾಗಿ ಅಗಿಯುವುದು ಮತ್ತು ನೀರು ಕುಡಿಯುವುದು ಗಾಳಿಯನ್ನು ಒಳಗೆ ಹೋಗದಂತೆ ತಡೆಯುತ್ತದೆ. ಇದು ಅನಿಲ ರಚನೆಯನ್ನು ಕಡಿಮೆ ಮಾಡುತ್ತದೆ.


3. ವೈದ್ಯಕೀಯ ಸಲಹೆಯಿಲ್ಲದೆ ಔಷಧಿ ತೆಗೆದುಕೊಳ್ಳಬೇಡಿ


ವೈದ್ಯಕೀಯ ಸಲಹೆಯಿಲ್ಲದೆ ಪ್ರತಿಜೀವಕಗಳಂತಹ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಹಾನಿಯಾಗುತ್ತದೆ. ಈ ಬ್ಯಾಕ್ಟೀರಿಯಾಗಳ ಸಮತೋಲನವು ತೊಂದರೆಗೊಳಗಾದಾಗ, ಹೊಟ್ಟೆಯಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು, ಇದರಲ್ಲಿ ಗ್ಯಾಸ್ ಸಮಸ್ಯೆಗಳು ಸಹ ಸೇರಿವೆ.


ಹೊಟ್ಟೆ ನೋವು, ಹೊಟ್ಟೆ ಸೆಳೆತ ಅಥವಾ ಅತಿಸಾರದಂತಹ ಇತರ ಸಮಸ್ಯೆಗಳ ಜೊತೆಗೆ ಅತಿಯಾದ ಗ್ಯಾಸ್ ಇದ್ದರೆ, ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.


ಇದನ್ನೂ ಓದಿ: Bigg Boss: ಮತ್ತೆ ಬರ್ತಿದೆ ಬಿಗ್ ಬಾಸ್ ಹೊಸ ಸೀಸನ್… ಈ ದಿನದಂದು ಆರಂಭ: ದಕ್ಷಿಣ ಭಾರತದ ಈ ಪ್ರಖ್ಯಾತ ನಟನೇ ನಿರೂಪಕ!


ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ