ಗರ್ಭಕಂಠದ ಕ್ಯಾನ್ಸರ್ ರೋಗದ ಲಕ್ಷಣಗಳು ಮತ್ತು ಕಾರಣಗಳು ಏನು ? ಇಲ್ಲಿದೆ ತಿಳಿದುಕೊಳ್ಳಿ
Cervical cancer : ಗರ್ಭಕೋಶದ ಕ್ಯಾನ್ಸರ್ ಗರ್ಭಕಂಠದ ಒಂದು ಕೋಶದ ಒಳಗೆ ತನ್ನ ಬೆಳವಣಿಯನ್ನು ಪ್ರಾರಂಭಿಸುವ ಮೂಲಕ ಗರ್ಭಕೋಶದ ಕ್ಯಾನ್ಸರ್ ದಾರಿ ಮಾಡಿಕೊಡುತ್ತದೆ. ಅದರ ಕಾರಣ ಮತ್ತು ಲಕ್ಷಣಗಳು ಇಲ್ಲಿವೆ ತಿಳಿಯಿರಿ
Symptoms of cervical cancer : ಗರ್ಭಕೋಶದ ಅತ್ಯಂತ ಕೆಳಗಿನ ಅಂಗವೇ ಗರ್ಭಕಂಠ. ಈ ಗರ್ಭಕಂಠವು ಗರ್ಭಕೋಶವನ್ನು ಸ್ತ್ರೀ ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ದೀರ್ಘಕಾಲದ ಲೈಂಗಿಕ ಚಟುವಟಿಕೆಯಿಂದ ಪ್ಯಾಪಿಲೋಮವೈರಸ್ (HPV) ಸೋಂಕು ತಗುಲುವುದರಿಂದ ಗರ್ಭಕಂಠದ ಕ್ಯಾನ್ಸರ್ ಬರುತ್ತದೆ.
ಗರ್ಭಕಂಠ ಕ್ಯಾನ್ಸರ್ ನ ಲಕ್ಷಣಗಳು :
ಈ ಕ್ಯಾನ್ಸರ್ ತಗುಲಿದಾಗ ಚಿಕಿತ್ಸೆಗೆ ಒಳಪಡದೆ ಹೆಚ್ಚಿನ ಸಮಯ ಇದ್ದಷ್ಟು ಇದರ ಲಕ್ಷಣಗಳು ಕಾಣತೊಡಗುತ್ತವೆ. ಆದ ಕಾರಣದಿಂದ 30 ರಿಂದ 65 ವರ್ಷ ವಯೋಮಾನದ ಪ್ರತಿ ಮಹಿಳೆಯು ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಮತ್ತು ಪ್ರತಿ ೫ ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಯೇ ಕೊಳ್ಳಬೇಕು. ಆರಂಭಿಕ ಹಂತದಲ್ಲಿಯಿಂದಲೇ ಸ್ಕ್ರೀನಿಂಗ್ ಪರೀಕ್ಷೆಗಳು ಮತ್ತು HPV ಸೋಂಕಿನಿಂದ ರಕ್ಷಿಸುವ ಲಸಿಕೆಯನ್ನುಪಡೆಯುವುದು ಉತ್ತಮ . ಅಸಾಧಾರಣ ರೀತಿಯಲ್ಲಿ ರಕ್ತ ಸ್ರಾವ, ತುರಿಕೆ, ಮೂತ್ರ ವಿಸರ್ಜನೆ ಮತ್ತು ಲೈಂಗಿಕ ಸಂಪರ್ಕದ ವೇಳೆಯಲ್ಲಿ ನೋವು, ಋತುಸ್ರಾವದ ಸಂದರ್ಭದಲ್ಲಿ ನೋವು ಈ ತರಹದ ಸಮಸ್ಯೆಗಳು ಕಂಡು ಬಂದರೆ ವೈದರ ಬಳಿ ತಪಾಸಣೆಗೆ ಒಳ ಪಡುವುದು ಉತ್ತಮ.
ಇದನ್ನು ಓದಿ : ಸುಮಾರು ದಶಕಗಳ ನಂತರ ಭಾರತದಲ್ಲಿ ನಡೆಯಲಿದೆ 71ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆ
ಕಾರಣಗಳು :
ಜನನ ನಿಯಂತ್ರಣ ಮಾತ್ರೆಗಳು ಹೆಚ್ಚಾಗಿ ಸೇವಿಸುವುದರಿಂದ
ಹೆಚ್ ಪಿ ವಿ ಸೋಂಕಿತರೊಂದಿಗೆ ಲೈಂಗಿಕ ಸಂಪರ್ಕಕ್ಕೆ ಒಳಪಡುವುದರಿಂದ
ಬಹು ಜನರೊಂದಿಗಿನ ಲೈಂಗಿಕತೆ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.
ಬೊಜ್ಜು ಹೊಂದಿರುವ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.
ಧೂಮಪಾನದಿಂದ ಗರ್ಭಕಂಠದ ಕ್ಯಾನ್ಸರ್ ಉಂಟಾಗುತ್ತದೆ.
ನಿಯಂತ್ರಣಗಳು :
30 ವರ್ಷಗಳ ನಂತರ ಮಹಿಳೆಯರು ನಿಯಮಿತ ಪ್ಯಾಪ್ ಸ್ಮಿಯರ್ ಮತ್ತು ದ್ರವ-ಆಧಾರಿತ ಸೈಟೋಲಜಿ ಪರೀಕ್ಷೆ ಮಾಡಿಸಿಕೊಳ್ಳುವಿದರಿಂದ
ದಿಪ್ಯಾಪ್ ಪರೀಕ್ಷೆ ಮತ್ತು HPV ಪರೀಕ್ಷೆಯು ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯ ಮಾಡುತ್ತದೆ
ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಲು ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಬೇಕು.
ದಿನನಿತ್ಯದ ವ್ಯಾಯಾಮವು ಕ್ಯಾನ್ಸರ್ ರೋಗಿಗಳಲ್ಲಿ ಒತ್ತಡ ಕಡಿಮೆ ಮಾಡಿ ಮತ್ತು ಚಿಕಿತ್ಸೆಗೆ ಸಹಾಯ ಮಾಡುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.