ಕುಕ್ಕರ್‌ನಲ್ಲಿ ಈ ಆಹಾರಗಳನ್ನು ಮಾತ್ರ ಎಂದಿಗೂ ಬೇಯಿಸಬೇಡಿ..! ಇವು ದೇಹಕ್ಕೆ ತುಂಬಾ ಹಾನಿಕಾರಕ
Freshercooker side effects : ಇಂದಿನ ಒತ್ತಡದ ಜೀವನಶೈಲಿಯಲ್ಲಿ ಗೃಹಿಣಿಯರಿಗೆ ಪ್ರೆಶರ್ ಕುಕ್ಕರ್ಗಳು ತುಂಬಾ ಸಹಾಯಕವಾಗಿವೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಕುಕ್ಕರ್ ನಲ್ಲಿ ಎಲ್ಲಾ ರೀತಿಯ ಅಡುಗೆ ಮಾಡಬಾರದು ಅಂತ ಎಲ್ಲರಿಗೂ ಗೊತ್ತಿಲ್ಲ.. ಕುಕ್ಕರ್‌ನಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಬೇಯಿಸುವುದನ್ನು ತಪ್ಪಿಸುವುದು ಉತ್ತಮ.. ಹೆಚ್ಚಿನ ಮಾಹಿತಿ ಇಲ್ಲಿದೆ..
Cooking tips : ಇಂದು ಎಲ್ಲರ ಮನೆಯಲ್ಲಿ ಪ್ರಶರ್ ಕುಕ್ಕರ್‌ಗಳಿವೆ. ಅಕ್ಕಿಯಿಂದ ಹಿಡಿದು ಎಲ್ಲವನ್ನೂ ಅದರಲ್ಲಿಯೇ ಬೇಯಿಸುತ್ತಾರೆ. ಆದರೆ ಕುಕ್ಕರ್‌ನಲ್ಲಿ ಕೆಲವೊಂದಿಷ್ಟು ಆಹಾರ ಪದಾರ್ಥಗಳನ್ನು ಬೇಯಿಸಬಾರದು ಎನ್ನುವ ವಿಚಾರ ಕೆಲವರಿಗೆ ತಿಳಿದಿಲ್ಲ.. ಇಂದು ಯಾವ ಆಹಾರ ಪದಾರ್ಥಗಳನ್ನು ಕುಕ್ಕರ್‌ನಲ್ಲಿ ಬೇಯಿಸಬಾರದು ಅಂತ ತಿಳಿಯೋಣ ಬನ್ನಿ..
ಅಕ್ಕಿ : ಸಾಮಾನ್ಯವಾಗಿ, ಪಾತ್ರೆಯಲ್ಲಿ ಬೇಯಿಸಿದ ಅನ್ನವು ಪಿಷ್ಟದಲ್ಲಿ 30 ರಿಂದ 40 ಪ್ರತಿಶತದಷ್ಟು ಕಡಿಮೆಯಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಕ್ಷಣವೇ ಹೆಚ್ಚಿಸುವುದಿಲ್ಲ. ಆದರೆ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನದಲ್ಲಿ ಕ್ಯಾಲೋರಿ ಮತ್ತು ಗ್ಲೂಕೋಸ್ ಅಧಿಕವಾಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ ಏರುವ ಸಾಧ್ಯತೆಯಿದೆ. ಕುಕ್ಕರ್‌ನಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಮಧುಮೇಹದ ಅಪಾಯ ಹೆಚ್ಚಾಗುತ್ತದೆ.
ಇದನ್ನೂ ಓದಿ:ಖಾಲಿ ಹೊಟ್ಟೆಯಲ್ಲಿ 2 ದಿನ ಬೆಳಗ್ಗೆ ʼಈʼ ನೀರನ್ನ ಕುಡಿಯಿರಿ; ಹೊಟ್ಟೆಯ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತೆ!
ತರಕಾರಿಗಳು: ತರಕಾರಿಗಳು ಖನಿಜಗಳು ಮತ್ತು ಜೀವಸತ್ವಗಳು ಸೇರಿದಂತೆ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಕುಕ್ಕರ್‌ನಲ್ಲಿ ಬೇಯಿಸಿದಾಗ ಪೋಷಕಾಂಶಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಆದ್ದರಿಂದ ಹೆಚ್ಚಿನ ತರಕಾರಿಗಳನ್ನು ವಿಶೇಷವಾಗಿ ಹಸಿರು ಎಲೆಗಳ ತರಕಾರಿಗಳನ್ನು ಮಡಕೆ ಅಥವಾ ಬಾಣಲೆಯಲ್ಲಿ ಬೇಯಿಸುವುದು ಉತ್ತಮ.
ಆಲೂಗಡ್ಡೆ: ಪ್ರೆಶರ್ ಕುಕ್ಕರ್‌ನಲ್ಲಿ ಆಲೂಗಡ್ಡೆ ಬೇಯಿಸುವುದು ಸೂಕ್ತವಲ್ಲ. ಕುಕ್ಕರ್‌ನಲ್ಲಿನ ಹೆಚ್ಚಿನ ತಾಪಮಾನವು ಆಲೂಗಡ್ಡೆಯ ಪಿಷ್ಟದ ಅಂಶವನ್ನು ಕಡಿಮೆ ಮಾಡುತ್ತದೆ. ಇದಲ್ಲದೇ ಬೇಯಿಸಿದ ಆಲೂಗಡ್ಡೆಯಲ್ಲಿ ಆ್ಯಂಟಿ ಪೋಷಕಾಂಶಗಳು ಅಧಿಕವಾಗಿದ್ದು, ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ:ಈ 5 ಹಣ್ಣುಗಳ ಸಿಪ್ಪೆ ಸುಲಿಯದೇ ತಿನ್ನುವುದರಿಂದ ಸಿಗಲಿವೆ ಅದ್ಬುತ ಪ್ರಯೋಜನಗಳು..!
ಮೀನು : ಮೀನನ್ನು ಕುಕ್ಕರ್ ನಲ್ಲಿ ಬೇಯಿಸಿದಾಗ ಅದರಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಹೆಚ್ಚಿನ ಶಾಖದಿಂದ ನಾಶವಾಗುತ್ತವೆ. ಅಲ್ಲದೇ ಮೀನಿನ ರುಚಿಯೂ ಕಡಿಮೆಯಾಗುತ್ತದೆ. ಸಾಮಾನ್ಯ ಬಾಣಲೆಯಲ್ಲಿ ಮೀನು ಬೇಯಿಸುವುದು ಅದರ ಪೋಷಕಾಂಶಗಳು ಮತ್ತು ಪರಿಮಳವನ್ನು ತರುತ್ತದೆ.
ಪಾಲಕ್ : ಪಾಲಕ್ ಸೊಪ್ಪನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಬೇಡಿ. ಪಾಲಕ್‌ದಿಂದ ಅಡುಗೆ ಮಾಡುವಾಗ ಶಾಖದ ಮಟ್ಟವು ಕಡಿಮೆ ಇರಬೇಕು. ಆಗ ಮಾತ್ರ ಅದರಲ್ಲಿರುವ ಪೋಷಕಾಂಶಗಳು ಉಳಿಯುತ್ತವೆ. ಆದರೆ ಕುಕ್ಕರ್‌ನಲ್ಲಿ ಹೆಚ್ಚಿನ ತಾಪಮಾನ ಪಾಲಕದಲ್ಲಿರುವ ಪೋಷಕಾಂಶಗಳನ್ನು ನಾಶ ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ