ಹೆಚ್ಚಿನ ಲೈಂಗಿಕ ಕ್ರಿಯೆಗಾಗಿ ಯುವತಿಯರು ʼವಯಾಗ್ರʼ ಸೇವಿಸಬಹುದೆ...? : ಇಲ್ಲಿದೆ ನೋಡಿ ಉತ್ತರ
Viagra impact on women : ಹೆಚ್ಚಿನ ಲೈಂಗಿಕ ಉತ್ತೇಜನಕ್ಕಾಗಿ ಇಂದಿನ ಯುವ ಜನತೆ ವಯಾಗ್ರದಂತಹ ಲೈಂಗಿಕ ಪ್ರಚೋದನೆಯನ್ನು ಔಷಧಿಗಳ ಮೊರೆ ಹೋಗುತ್ತಿದ್ದಾರೆ. ಇದನ್ನು ಹೆಚ್ಚಾಗಿ ಪುರುಷರು ಸೇವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಒಂದು ವೇಳೆ ಮಹಿಳೆಯರು ಈ ಔಷಧವನ್ನು ತೆಗೆದುಕೊಂಡರೆ ಅವರ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕ್ಯೂರಿಯಾಸಿಟಿ ಎಲ್ಲರಿಗೂ ಇದ್ದೇ ಇರುತ್ತದೆ.
Viagra for Female : ಹೆಚ್ಚಿನ ಸಮಯ ಲೈಂಗಿಕ ಕ್ರಿಯೆ ನಡೆಸುವ ಉದ್ದೇಶದಿಂದ ಇಂದಿನ ಯುವಜನತೆಗೆ ಲೈಂಗಿಕ ಉತ್ತೇಜನ ಔಷಧಿಗಳ ಮೊರೆ ಹೋಗುತ್ತಾರೆ. ವಯಾಗ್ರವನ್ನು ಹೆಚ್ಚಾಗಿ ಯುವಕರು ಶೃಂಗಾರ ಕ್ರೀಡೆಗೂ ಮುನ್ನ ಬಳಸುತ್ತಾರೆ. ಆದ್ರೆ, ಯುವತಿಯರು ಈ ಔಷಧಿಯನ್ನು ಬಳಸಿದರೆ ಅವರ ದೇಹದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಇದೀಗ ವಯಾಗ್ರ ಯುವತಿಯರ ದೇಹದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿದುಕೊಳ್ಳೋಣ.
ನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸುವುದು ಉತ್ತಮ. ಈ ರೀತಿಯ ವಯಾಗ್ರಗಳನ್ನು ಬಳಸುವುದರಿಂದ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೂ ಇಂದಿನ ಯುವಕರು ಹೆಚ್ಚಾಗಿ ಲೈಂಗಿಕ ಕ್ರಿಯೆ ನಡೆಸುವ ಉದ್ದೇಶದಿಂದ ವಯಾಗ್ರಗಳ ಮೊರೆ ಹೋಗುತ್ತಿದ್ದಾರೆ. ಒಂದು ವೇಳೆ ಮಹಿಳೆಯರು ಈ ಔಷಧಿಯನ್ನು ತೆಗೆದುಕೊಂಡರೆ ಅವರ ದೇಹದ ಮೇಲೂ ಅಪಾರ ಪರಿಣಾಮಗಳನ್ನು ಬೀರುತ್ತದೆ. ಈ ಕುರಿತು ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..
ಇದನ್ನೂ ಓದಿ: ಪೈಲ್ಸ್ ಹಾಗೂ ಜೀರ್ಣಕಾರಿ ಸಮಸ್ಯೆಗೆ ʼಬಾಳೆಹಣ್ಣುʼ ಪರಿಣಾಮಕಾರಿ..! ಹೇಗೆ ಗೊತ್ತೇ..
ಪ್ರಶ್ನೆ: ಮಹಿಳೆಯರು ವಯಾಗ್ರವನ್ನು ತೆಗೆದುಕೊಳ್ಳಬಹುದೇ, ಅದು ಅವರ ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ..?
ಉತ್ತರ: ವಯಾಗ್ರವು ಪುರುಷರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಹೆಚ್ಚಿಸುವ ಒಂದು ಔಷಧವಾಗಿದೆ. ಆದರೆ ಮಹಿಳೆಯರಿಗೆ ಈ ಔಷಧದ ಯಾವುದೇ ವಿಶೇಷ ಪರಿಣಾಮವನ್ನು ಬೀರಿರುವುದಾಗಿ ತಿಳಿದು ಬಂದಿಲ್ಲ.
ಪುರುಷರ ಮೇಲೆ ವಯಾಗ್ರ ಪರಿಣಾಮಗಳು : ವಯಾಗ್ರವು ಪುರುಷರಲ್ಲಿ ಲೈಂಗಿಕ ಬಯಕೆ ಮತ್ತು ನಿಮಿರುವಿಕೆಯನ್ನು ಹೆಚ್ಚಿಸುತ್ತದೆ. ದೀರ್ಘ ಕಾಲದವರೆಗೆ ಪುರುಷ ಜನನಾಂಗ ನಿಮಿರಿರುತ್ತದೆ. ಅಲ್ಲದೆ, ಶೀರ್ಘ ಸ್ಕಲನವಾಗುವುದಿಲ್ಲ. ಇದು ತೃಪ್ತಿದಾಯಕ ಸಂಭೋಗದ ಅವಧಿಯನ್ನು ಹೆಚ್ಚಿಸಲು ಮಾತ್ರ ಸಹಾಯ ಮಾಡುತ್ತದೆ.
ಇದನ್ನೂ ಓದಿ: Diabetes: ಮಧುಮೇಹಿಗಳಿಗೆ ಔಷಧೀಯ ಕೆಲಸ ಮಾಡುತ್ತದೆ ಹಸಿ ಶುಂಠಿ!
ಮಹಿಳೆಯರ ಮೇಲೆ ವಯಾಗ್ರದ ಪ್ರಭಾವ: ಮಹಿಳೆಯರಲ್ಲಿ ನಿಮಿರುವಿಕೆ ಅಥವಾ ಲೈಂಗಿಕ ಪ್ರಚೋದನೆಯ ಮೇಲೆ ವಯಾಗ್ರ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಕೆಲವು ವರದಿಗಳು ಋತುಬಂಧದ ನಂತರ ವಯಾಗ್ರವನ್ನು ತೆಗೆದುಕೊಳ್ಳುವುದು ಲೈಂಗಿಕ ಪ್ರಚೋದನೆಯನ್ನು ಉತ್ಪಾದಿಸುವಲ್ಲಿ ಸ್ವಲ್ಪ ಕಡಿಮೆ ಪರಿಣಾಮಕಾರಿ ಎಂದು ಹೇಳುತ್ತವೆ.
ವಯಾಗ್ರದ ಅಡ್ಡ ಪರಿಣಾಮ : ವಯಾಗ್ರ ಸೇವಿಸುವುದರಿಂದ ಲೈಂಗಿಕ ಕ್ರಿಯೆ ನಂತರ ತಲೆನೋವು, ತಲೆತಿರುಗುವಿಕೆ, ಆಯಾಸ ಮತ್ತು ಬಾಯಾರಿಕೆ ಉಂಟಾಗುತ್ತದೆ. ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಈ ರೋಗಲಕ್ಷಣಗಳು ಹೆಚ್ಚು ತೀವ್ರವಾಗಿರುತ್ತವೆ. ಡೋಸ್ ಹೆಚ್ಚಾದ್ರೆ ರಕ್ತದೊತ್ತಡ ಉಂಟಾಗುವ ಸಾಧ್ಯತೆ ಇರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.