Blood Sugar Control Tips: ಬದಲಾಗುತ್ತಿರುವ ಜೀವನಶೈಲಿಯ ಕಾರಣ ಹೆಚ್ಚಿನ ಜನರು ಮಧುಮೇಹಕ್ಕೆ ಗುರಿಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದರೆ,  ಕೆಲವೊಮ್ಮೆ ಕೆಲ ಜನರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಆಗ ಅವರು ವಿಪರೀತ ಭಯಭೀತರಾಗುತ್ತಾರೆ ಮತ್ತು ಜಾಣ್ಮೆಯಿಂದ ಅದನ್ನು ನಿರ್ವಹಿಸುವುದಿಲ್ಲ, ಇದರಿಂದಾಗಿ ಅವರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದು ಅವರಿಗೆ ತಿಳಿದಿರುವುದಿಲ್ಲ. ಹೀಗಾಗಿ ಅಂತಹ ಸಂದರ್ಭದಲ್ಲಿ ಮಧುಮೇಹಿ ರೋಗಿಗಳು ಯಾವ ಕ್ರಮ ಅನುಸರಿಸಬೇಕು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಆದಷ್ಟು ಹೆಚ್ಚು ನೀರನ್ನು ಸೇವಿಸಿ
ರಕ್ತದಲ್ಲಿನ ಸಕ್ಕರೆಯು ಇದ್ದಕ್ಕಿದ್ದಂತೆ ಏರಿದಾಗ, ಆದಷ್ಟು ಹೆಚ್ಚು ನೀರನ್ನು ಕುಡಿಯಿರಿ, ಇದರಿಂದ ನಿಮ್ಮ ದೇಹವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ.  ಹೆಚ್ಚು ನೀರು ಕುಡಿಯುವುದರಿಂದ, ರಕ್ತದಿಂದ ಹೆಚ್ಚುವರಿ ದ್ರವವು ಮೂತ್ರದ ರೂಪದಲ್ಲಿ ಹೊರಬರುತ್ತದೆ. ಅಂದರೆ, ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ.


ಹೆಚ್ಚು ವ್ಯಾಯಾಮ ಮಾಡಿ.
ದೇಹವನ್ನು ಸದೃಢವಾಗಿಡಲು ವ್ಯಾಯಾಮ ಮಾಡುವುದು ಬಹಳ ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ, ಏಕೆಂದರೆ ಅದು ನಿಮ್ಮ ದೇಹವನ್ನು ಫಿಟ್ ಆಗಿ ಇರಿಸುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ನಿಯಮಿತ ವ್ಯಾಯಾಮ ಸಹಾಯ ಮಾಡುತ್ತದೆ.


ಇದನ್ನೂ ಓದಿ-Jamun Fact: ಜಾಮೂನ್ ಸೇವನೆಯ ಬಳಿಕ ನೀರನ್ನು ಕುಡಿಯಬಹುದೇ? ಇಲ್ಲಿದೆ ನಿಜಾಂಶ


ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿ
ಕೆಲವರಿಗೆ ನಿಗದಿತ ಊಟದ ಸಮಯ ಇರುವುದಿಲ್ಲ, ಇದರಿಂದಾಗಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇವುಗಳಲ್ಲಿ ಹೆಚ್ಚಿನ ಸಕ್ಕರೆ ಅಂಶವೂ ಸೇರಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರದ ಸಮಯವನ್ನು ನೀವು ನಿಗದಿಪಡಿಸಬೇಕು, ಇದರಿಂದ ನಿಮಗೆ ಈ ರೀತಿಯ ಸಮಸ್ಯೆ ಎದುರಾಗುವುದಿಲ್ಲ.


ಇದನ್ನೂ ಓದಿ-ದೇಹದ ಬೊಜ್ಜು ಕರಗಿಸಲು ಟೀಯಲ್ಲಿ ಈ ವಸ್ತು ಬೆರೆಸಿ: ಕೆಲವೇ ದಿನದಲ್ಲಿ ಪರಿಣಾಮ ನೋಡಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.