ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಅನಗತ್ಯ ಆಸ್ಪತ್ರೆ ಭೇಟಿ ತಪ್ಪಿಸಲು ಕೇಂದ್ರ ಆರೋಗ್ಯ ಇಲಾಖೆಯು ಹೊಸದಾಗಿ ಇ-ಸಂಜೀವಿನಿ ಆರೋಗ್ಯ ಆ್ಯಪ್‍ ಮುಖಾಂತರ ಆರೋಗ್ಯ ಸೇವೆಯನ್ನು ನೀಡಲು ಮುಂದಾಗಿದೆ.


COMMERCIAL BREAK
SCROLL TO CONTINUE READING

ಸಾರ್ವಜನಿಕರು ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಮತ್ತು ಇತರೆ ರೋಗಗಳಿಂದ ಬಳಲುತ್ತಿದ್ದಲ್ಲಿ ಹಾಗೂ ಆಸ್ಪತ್ರೆಗೆ ತೆರಳಲು ಸಾಧ್ಯವಾಗದಿದ್ದರೆ ಚಿಂತಿಸದೇ ಟೆಲಿ‌ ಮೆಡಿಸಿನ್ ಸೇವೆ ಪಡೆಯಬೇಕು. ತಜ್ಞ ವೈದ್ಯರು ಆನ್ ಲೈನ್ ನಲ್ಲಿ ಲಭ್ಯವಿದ್ದು ಚಿಕಿತ್ಸೆ‌ ವಿವರಿಸಲಿದ್ದಾರೆ.


ಆ್ಯಪ್ ಡೌನ್‍ಲೋಡ್ ಮಾಡುವುದು ವಿಧಾನ: 


ವೈದ್ಯರನ್ನು ಸಂಪರ್ಕಿಸಲು ಸ್ಮಾರ್ಟ್ ಫೋನ್ ಹೊಂದಿದವರು ಗೂಗಲ್ ಪ್ಲೇ-ಸ್ಟೋರ್ ನಲ್ಲಿ ಇ-ಸಂಜೀವಿನಿ ಓಪಿಡಿ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಅಥವಾ ಗೂಗಲ್‍ದಲ್ಲಿನ ಇ-ಸಂಜೀವಿನಿಯಲ್ಲಿ ಓಪಿಡಿ ನಮೂದಿಸಿ ರಿಜಿಸ್ಟರ್ ಆಗಬೇಕು. ನಂತರ ವೆಬ್ ವಿಡಿಯೋ ಮೂಲಕ ಸಂಪರ್ಕಕ್ಕೆ ಬರುವ ವೈದ್ಯರು ತಮ್ಮ ಕಾಯಿಲೆ ಕುರಿತು ವಿವರವಾಗಿ ವಿಚಾರಣೆ ನಡೆಸಿ ಕಾಯಿಲೆಗೆ ಚಿಕಿತ್ಸೆ ಬರೆದುಕೊಡಲಿದ್ದಾರೆ. ಆ ಮೂಲಕ ಆಸ್ಪತ್ರೆಯ ಕದ ತಟ್ಟದೇ, ಮನೆಯಿಂದಲೇ ರೋಗಕ್ಕೆ ಚಿಕಿತ್ಸೆ ಪಡೆಯಬಹುದಾಗಿದೆ. 


ಇದನ್ನೂ ಓದಿ: ನೀವು ಕೂಡ ತಡರಾತ್ರಿ ಆಹಾರ ಸೇವಿಸುತ್ತೀರಾ? ಮಾರಣಾಂತಿಕ ಕಾಯಿಲೆಗೆ ಕಾರಣವಾದೀತು ಎಚ್ಚರ!


ಇ-ಸಂಜೀವಿನಿ:


ಕೊರೋನಾ ತಡೆಗಟ್ಟಲು ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಬೇಕೆಂಬ ಸರ್ಕಾರದ‌ ನಿರ್ದೇಶನ‌ದ ಹಿನ್ನೆಲೆಯಲ್ಲಿ  ಆರೋಗ್ಯದ ತೊಂದರೆಗಳಿಗೆ ಸಾರ್ವಜನಿಕರು ತಮ್ಮ ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು ಕೇಂದ್ರ ಆರೋಗ್ಯ ಮಂತ್ರಾಲಯ, ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ (ನ್ಯಾಷನಲ್ ಟೆಲಿ ಕನ್ಸಲ್‍ಟೇಷನ್ ಸರ್ವಿಸ್) ಎಂಬ ಹೆಸರಿನಲ್ಲಿ (ಇ-ಸಂಜೀವಿನಿ) ಲಿಂಕ್  ಆ್ಯಪ್‍ನ್ನು ಸಿದ್ಧಪಡಿಸಿದೆ. 


ರಿಜಿಸ್ಟರ್ ಮಾಡುವ ವಿಧಾನ: 


ಟೆಲಿ ಸಮಾಲೋಚನಾ ಸೇವೆ ಪಡೆಯಲು ಸಾರ್ವಜನಿಕರು ಮೊಬೈಲ್‍ನ ಪ್ಲೇ-ಸ್ಟೋರ್ ಅಥವಾ ಕಂಪ್ಯೂಟರ್‌ನ ಗೂಗಲ್‍ನಲ್ಲಿ ಇ-ಸಂಜೀವಿನಿ ಆ್ಯಪ್ ತೆರೆದು ಓಪಿಡಿ ಎಂಬುದಾಗಿ ನಮೂದಿಸಿದಾಗ ಕೇಂದ್ರ ಆರೋಗ್ಯ ಸಚಿವಾಲಯದ ಮುಖ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ಪೇಷೆಂಟ್ ರಿಜಿಸ್ಟ್ರೇಷನ್‍ನಲ್ಲಿ ತಮ್ಮ ಮೊಬೈಲ್ ನಂಬರ್ ನಮೂದಿಸಿದ್ದಲ್ಲಿ ಓ.ಟಿ.ಪಿ ಸಂಖ್ಯೆ ಬರುತ್ತದೆ. ಈ ಓ.ಟಿ.ಪಿ. ಸಂಖ್ಯೆಯನ್ನು ನಮೂದಿಸಿದ್ದಲ್ಲಿ ರಿಜಿಸ್ಟ್ರೇಷನ್ ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ. ಇದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು ಮೊಬೈಲ್ ನಂಬರ್, ವಿಳಾಸವನ್ನು ನಮೂದಿಸಿ ಲಾಗಿನ್ ಆಗಬೇಕು. ಈ ವೇಳೆ ಟೋಕನ್ ನಂಬರ್ ಬರಲಿದೆ.


ಇದನ್ನೂ ಓದಿ: Budget 2022 : ಜನವರಿ 31 ರಂದು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ!
 
ವಿಡಿಯೋ ಕಾಲ್ ಮೂಲಕ ಸಂಪರ್ಕ:
 
ಟೋಕನ್ ನಂಬರ್ ಪಡೆದ ನಂತರ, ವೈದ್ಯರನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಬಹುದು. ಈ ಸೇವೆಯೂ ಪ್ರತಿದಿನ ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ಲಭ್ಯವಿರುತ್ತದೆ. ಒಮ್ಮೆ ರಿಜಿಸ್ಟರ್ ಆದರೆ ಮತ್ತೆ ಆಗುವ ಅಗತ್ಯವಿರುವುದಿಲ್ಲ. ವಿಡಿಯೋ ಕಾಲ್ ಮೂಲಕವೇ, ವೈದ್ಯರು ರೋಗಿಗಳೊಂದಿಗೆ ಸಮಾಲೋಚಿಸಿ ಚಿಕಿತ್ಸೆಗೆ ಔಷಧ ಬರೆದುಕೊಡಲಿದ್ದಾರೆ.ಸಾರ್ವಜನಿಕರು ಇ-ಸಂಜೀವಿನಿ ಸೇವೆಯನ್ನು ಉಪಯೋಗಿಸಬೇಕು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.