ಹರಿದ, ತೂತಾದ, ಅಂಡರ್ವೇರ್ ಹಾಕುತ್ತಿದ್ದೀರಾ..? ಈ ರೋಗಕ್ಕೆ ಗುರಿಯಾಗುವ ಮುನ್ನ ಎಚ್ಚರವಹಿಸಿ..
Underwear expiry : ಕೆಲವರು ತಮ್ಮ ಅಂಡರ್ವೇರ್ ಹಾಳಾಗಿ ತೂತಾಗಿದ್ದರು ಬಳಸುತ್ತಾರೆ.. ಇನ್ನೂ ಕೆಲವರಿಗೆ ಒಳಉಡುಪುಗಳನ್ನು ಎಷ್ಟು ದಿನಗಳವರೆಗೆ ಬಳಸಬೇಕು ಎಂದು ತಿಳಿದಿರಲ್ಲ. ನಿಮ್ಮ ಒಳಉಡುಪುಗಳನ್ನು ಎಷ್ಟು ತಿಂಗಳು ಬದಲಾಯಿಸಬೇಕು ಎಂಬ ಮಾಹಿತಿ ಇಲ್ಲಿದೆ... ಬದಲಾಯಿಸದಿದ್ದರೆ ಈ ರೋಗಗಳು ಗುರಿಯಾಗಬೇಕಾಗುತ್ತದೆ..
Undergarments tips : ನಾವು ನಮ್ಮ ದೈನಂದಿನ ಜೀವನದಲ್ಲಿ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಈ ವೇಳೆ ಒಳ ಉಡುಪುಗಳು ಸುರಕ್ಷಿತ ಮತ್ತು ಕಂಫರ್ಟ್ ಆಗಿರಲು ಸಹಾಯ ಮಾಡುತ್ತದೆ. ಒಳ ಉಡುಪು ಕೂಡ ಒಬ್ಬರ ಮಾನಸಿಕ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜನರು ಅನೇಕ ಕಾರಣಗಳಿಗಾಗಿ ಒಳ ಉಡುಪುಗಳನ್ನು ಧರಿಸುತ್ತಾರೆ.
ಅನೇಕ ಜನರು ತಮ್ಮ ದೇಹದ ಇಮೇಜ್ ಹೆಚ್ಚಿಸಲು ಒಳ ಉಡುಪುಗಳನ್ನು ಧರಿಸುತ್ತಾರೆ. ಬ್ರಾಗಳನ್ನು ಧರಿಸುವುದು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ನೈರ್ಮಲ್ಯದ ದೃಷ್ಟಿಯಿಂದ ಒಳಉಡುಪುಗಳು ನಮಗೆ ಬಹಳ ಅವಶ್ಯಕ. ಏಕೆಂದರೆ ಅವು ಬ್ಯಾಕ್ಟೀರಿಯಾದಿಂದ ನಮ್ಮನ್ನು ರಕ್ಷಿಸುತ್ತವೆ. ಇದು ಅತಿಯಾದ ಬೆವರುವಿಕೆಯನ್ನು ಸಹ ತಡೆಯುತ್ತದೆ.
ಶುದ್ಧ ಒಳ ಉಡುಪುಗಳು ಮೂತ್ರನಾಳದ ಸೋಂಕಿನ (UTIs) ಅಪಾಯದಿಂದ ನಮ್ಮನ್ನು ರಕ್ಷಿಸುತ್ತದೆ. ಒಳ ಉಡುಪುಗಳನ್ನು ಧರಿಸುವುದರಿಂದ ಜನನಾಂಗದ ಕಿರಿಕಿರಿ ಮತ್ತು ಬಿರಿಯುವಿಕೆಯಿಂದ ರಕ್ಷಿಸುತ್ತದೆ. ಒಳಉಡುಪುಗಳು ಮಹಿಳೆಯರ ಸೌಂದರ್ಯಕ್ಕೆ ಇನ್ನಷ್ಟು ಸೌಂದರ್ಯವನ್ನು ನೀಡುತ್ತವೆ.
ಬ್ರಾಗಳು ಕೆಲವು ಮಹಿಳೆಯರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಆದರೆ ಇವುಗಳನ್ನು ಎಷ್ಟು ದಿನ ಬಳಸಬೇಕು ಎಂಬ ವಿಚಾರ ಹಲವರಿಗೆ ತಿಳಿದಿಲ್ಲ. ಈ ವಿಚಾರ ಎಷ್ಟೋ ಜನಕ್ಕೆ ಗೊತ್ತಿಲ್ಲ. ಒಳ ಉಡುಪುಗಳು ತೂತಾದರೂ ಬಳಸುವ ಪುರುಷರು ಮತ್ತು ಮಹಿಳೆಯರು ನಮ್ಮ ನಡುವೆ ಇದ್ದಾರೆ..
ಇದನ್ನೂ ಓದಿ:ಯಾವುದೇ ವ್ಯಾಯಾಮ ಬೇಡ, 7 ದಿನ ಇದನ್ನು ಸೇವಿಸಿ! ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗಿ ಹೋಗುತ್ತದೆ!
ತಜ್ಞರ ಪ್ರಕಾರ, ಒಳ ಉಡುಪುಗಳ ಮುಕ್ತಾಯ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಆದರೆ ನಾವು ಅದನ್ನು ಎಷ್ಟು ಸಮಯದವರೆಗೆ ಬಳಸುತ್ತೇವೆ ಮತ್ತು ಅದನ್ನು ತೊಳೆಯಲು ನಾವು ಯಾವ ರೀತಿಯ ಡಿಟರ್ಜೆಂಟ್ಗಳನ್ನು ಬಳಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ತಜ್ಞರ ಪ್ರಕಾರ, ಪ್ಯಾಂಟಿಯನ್ನು ಎಷ್ಟು ಸಮಯದವರೆಗೆ ಬಳಸಬಹುದು ಎಂಬುದಕ್ಕೆ ಯಾವುದೇ ಸಮಯದ ಮಿತಿಯಿಲ್ಲ. ಆದರೆ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಒಳಉಡುಪು ಬದಲಾಯಿಸುವುದು ಉತ್ತಮ ಎನ್ನುತ್ತಾರೆ. ಈ ರೀತಿ ಒಳಉಡುಪುಗಳನ್ನು ಬದಲಾಯಿಸುವುದರಿಂದ ಅನೇಕ ರೀತಿಯ ಸೋಂಕುಗಳಿಂದ ಸುಲಭವಾಗಿ ಪಾರಾಗಬಹುದು. ಒಳಉಡುಪುಗಳನ್ನು ಬದಲಾಯಿಸದೆ ದೀರ್ಘಕಾಲದವರೆಗೆ ಬಳಸಿದರೆ, ಅಲರ್ಜಿಗಳು, ಚರ್ಮದ ಸಮಸ್ಯೆಗಳು ಮತ್ತು ಇತರ ಸೋಂಕುಗಳು ಅಪಾಯವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.