Blue Zone Diet: ಬ್ಲೂ ಝೋನ್ ಡಯಟ್ ಪಾಲಿಸುವ ಜನರು ಪ್ರಪಂಚದಲ್ಲಿ ಇತರ ಜನಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಬ್ಲೂ ಝೋನ್ ಡಯಟ್ ಪಾಲನೆಯಿಂದ ಜನರು ಹೃದ್ರೋಗ, ಕ್ಯಾನ್ಸರ್, ಮಧುಮೇಹ ಮತ್ತು ಅಧಿಕ ತೂಕದಂತಹ ಸಮಸ್ಯೆಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಪ್ರಪಂಚದಾದ್ಯಂತದ ಐದು ಪ್ರಮುಖ ಬ್ಲೂ ಝೋನ್ ಪ್ರದೇಶಗಳಿವೆ. ಅವುಗಳು ಇಕಾರಿಯಾ (ಗ್ರೀಸ್), ಓಕಿನಾವಾ (ಜಪಾನ್), ಓಗ್ಲಿಯಾಸ್ಟ್ರಾ ಪ್ರಾಂತ್ಯದ ಸಾರ್ಡಿನಿಯಾ (ಇಟಲಿ), ಲೋಮಾ ಲಿಂಡಾ (ಕ್ಯಾಲಿಫೋರ್ನಿಯಾ) ಮತ್ತು ನಿಕೋಯಾ ಪೆನಿನ್ಸುಲಾ (ಕೋಸ್ಟರಿಕಾ) ದಲ್ಲಿನ ಅಡ್ವೆಂಟಿಸ್ಟ್ ಸಮುದಾಯಗಳನ್ನು ಒಳಗೊಂಡಿದೆ.


ಇದನ್ನೂ ಓದಿ- ಬಾದಾಮಿಯನ್ನು ಈ ಸಮಯದಲ್ಲಿ ಹೀಗೆ ತಿಂದರಷ್ಟೇ ಲಾಭ ! ಇಲ್ಲವಾದರೆ ಅಪಾಯವೇ !


ಈ ಪ್ರದೇಶಗಳಲ್ಲಿ ವಾಸಿಸುವ ಜನರ ಆಹಾರ ಪದ್ಧತಿಯಿಂದ ಸ್ಫೂರ್ತಿ ಪಡೆದ ನ್ಯಾಷನಲ್ ಜಿಯಾಗ್ರಫಿಕ್ ಫೆಲೋ ಮತ್ತು ಲೇಖಕ ಡಾನ್ ಬೆಟ್ನರ್ ಅವರು ಬ್ಲೂ ಝೋನ್ಸ್ ಡಯಟ್ ಅನ್ನು ಜಗತ್ತಿಗೆ ಪರಿಚಯಿಸಿದರು. ಬ್ಲೂ ಝೋನ್ ಡಯಟ್ ಅಲ್ಲಿ ವಾಸಿಸುವ ಜನರ ಆಹಾರ ಪದ್ದತಿಯನ್ನು ಒಳಗೊಂಡಿರುತ್ತದೆ. ಈ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳುವುದರಿಂದ ದೀರ್ಘಕಾಲದವರೆಗೆ ಆರೋಗ್ಯವಂತರಾಗಿರಲು ಸಹಾಯಕವಾಗುತ್ತದೆ ಎಂದು ಹೇಳಲಾಗುತ್ತದೆ. 


ಬ್ಲೂ ಝೋನ್ ಆಹಾರ ಪದ್ದತಿ: 
ಬ್ಲೂ ಝೋನ್ ಆಹಾರವು ಸಸ್ಯ ಆಧಾರಿತ ಆಹಾರವಾಗಿದೆ. ಇದರಲ್ಲಿ ಹೆಚ್ಚಿನವರು ಹಸಿ ಆಹಾರಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಈ ಆಹಾರವು ಸುಮಾರು 95% ಹಸಿರು ಸೊಪ್ಪು-ತರಕಾರಿಗಳನ್ನು ಒಳಗೊಂಡಿರುತ್ತದೆ. ಕಡಿಮೆ ಕ್ಯಾಲೋರಿ ಹೆಚ್ಚು ನಾರಿನಾಂಶ ಭರಿತ ಈ ಆಹಾರವು ಅಗತ್ಯ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ. ಪೌಷ್ಟಿಕಾಂಶಯುಕ್ತ ಈ ಆಹಾರವು ತೂಕನಷ್ಟದ ಜೊತೆಗೆ ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುತ್ತದೆ. 


ಇದನ್ನೂ ಓದಿ- ಅನ್ನವನ್ನು ಈ ರೀತಿ ಸೇವಿಸಿದರೆ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ತಕ್ಷಣ ನಿಯಂತ್ರಣಕ್ಕೆ ಬರುತ್ತದೆ!


ಸಾಕಷ್ಟು ನೀರು: 
ಸಸ್ಯಾಧಾರಿತ ಆಹಾರದ ಜೊತೆಗೆ ಈ ಡಯಟ್ ನಲ್ಲಿ ಸಾಕಷ್ಟು ನೀರು ಕುಡಿಯುವುದು ಕೂಡ ತುಂಬಾ ಮುಖ್ಯ. ಬ್ಲೂ ಝೋನ್ ಡಯಟ್ ಆಹಾರವು ನೀರಿನ ಮೇಲೆ ಹೆಚ್ಚಿನ ಒತ್ತು ನೀಡುತ್ತದೆ. ಸಂಸ್ಕರಿಸಿದ ಜ್ಯೂಸ್ ಮತ್ತು ಕೂಲ್ ಡ್ರಿಂಕ್ಸ್ ಬದಲಿಗೆ ನೈಸರ್ಗಿಕ ಪಾನೀಯಗಳನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.