Kitchen hacks : ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಅಡುಗೆ ಮನೆಯಲ್ಲಿ ಈರುಳ್ಳಿ ಇದ್ದೇ ಇರುತ್ತೆ. ಈರುಳ್ಳಿ ಇಲ್ಲದೆ ಯಾವುದೇ ಅಡುಗೆ ಪೂರ್ಣಗೊಳ್ಳುವುದಿಲ್ಲ. ಬಹಳಷ್ಟು ಜನರು ಈ ತರಕಾರಿಯನ್ನು ಹಸಿಯಾಗಿ ತಿನ್ನುತ್ತಾರೆ. ಇತರರು ಇದನ್ನು ಸಲಾಡ್‌ಗಳಲ್ಲಿ ಬೆರೆಸಿ ಸೇವಿಸಲು ಇಷ್ಟಪಡುತ್ತಾರೆ. ಈರುಳ್ಳಿ ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ ಅಂತ ಈಗಾಗಲೇ ನಿಮಗೆ ತಿಳಿದಿದೆ. 


COMMERCIAL BREAK
SCROLL TO CONTINUE READING

ಆದರೆ ಈರುಳ್ಳಿಯನ್ನು ಕತ್ತರಿಸಿದಾಗ ಕಣ್ಣಲ್ಲಿ ನೀರು ಹರಿಯುತ್ತದೆ. ಇದಲ್ಲದೆ, ಇದು ಕಣ್ಣಿಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಹಾಗಿದ್ರೆ ಈರುಳ್ಳಿ ಕತ್ತರಿಸುವಾಗ ಕಣ್ಣಿನಿಂದ ನೀರು ಏಕೆ ಹರಿಯುತ್ತದೆ..? ಅಂತ ಎಂದಾದರೂ ನೀವು ಯೋಚಿಸಿದ್ದೀರಾ? ಇದಕ್ಕೆ ಉತ್ತರವನ್ನು ಈಗ ತಿಳಿಯೋಣ..


ಇದನ್ನೂ ಓದಿ:ನಿಮಗೆ ಗೊತ್ತೇ..? ಜಿಮ್ ಉಪಕರಣಗಳು ಟಾಯ್ಲೆಟ್ ಸೀಟ್‌ಗಳಿಗಿಂತ ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ..!


ವಾಸ್ತವವಾಗಿ, ತಜ್ಞರ ಪ್ರಕಾರ, ಈರುಳ್ಳಿಯನ್ನು ಕತ್ತರಿಸುವಾಗ ಕಣ್ಣೀರು ಬರಲು ರಾಸಾಯನಿಕ ಕಾರಣ. ಹೌದು, ಈರುಳ್ಳಿಯಲ್ಲಿ ಇರುವ ಸಿನ್-ಪ್ರೊಪನೆಥೈಲ್-ಎಸ್-ಆಕ್ಸೈಡ್ ಎಂಬ ರಾಸಾಯನಿಕವು ಈರುಳ್ಳಿಯನ್ನು ಕತ್ತರಿಸುವಾಗ ಕಣ್ಣುಗಳಲ್ಲಿ ನೀರು ಬರಲು ಪ್ರಮುಖ ಕಾರಣ. ಏಕೆಂದರೆ ಇದು ಕಣ್ಣುಗಳ ಲ್ಯಾಕ್ರಿಮಲ್ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಕಣ್ಣುಗಳಿಂದ ಕಣ್ಣೀರು ಬರಲು ಪ್ರಾರಂಭಿಸುತ್ತದೆ.


ತಜ್ಞರ ಪ್ರಕಾರ, ಕೆಲವೊಮ್ಮೆ ಇದು ಮಂದ ದೃಷ್ಟಿಗೆ ಕಾರಣವಾಗಬಹುದು. ಆದರೆ ಇದು ತಾತ್ಕಾಲಿಕ ಮಾತ್ರ.. ಕಣ್ಣುಗಳಿಗೆ ಯಾವುದೇ ಗಂಭೀರ ಹಾನಿಯನ್ನುಂಟುಮಾಡುವುದಿಲ್ಲ, ಆದರೆ ನೀವು ದೊಡ್ಡ ಪ್ರಮಾಣದಲ್ಲಿ ಈರುಳ್ಳಿಯನ್ನು ಕತ್ತರಿಸುವ ಮೊದಲು ನಿಮ್ಮ ಕಣ್ಣುಗಳನ್ನು ರಕ್ಷಿಸಲು ವಿಶೇಷ ಕನ್ನಡಕವನ್ನು ಬಳಸುವುದು ಉತ್ತಮ. ಒಂದು ವೇಳೆ ನೀವು ದೀರ್ಘಕಾಲದವರೆಗೆ ಕಣ್ಣಿನ ಕಿರಿಕಿರಿ ಅಥವಾ ಇನ್ನಾವುದೇ ಸಮಸ್ಯೆ ಅನುಭವಿಸಿದರೆ, ನೇತ್ರ ವೈದ್ಯರನ್ನು ಭೇಟಿ ಮಾಡಿ.


ಇದನ್ನೂ ಓದಿ:ಸಕ್ಕರೆ ಕಾಯಿಲೆ ಇರುವವರು ಯೂರಿಕ್‌ ಆಸಿಡ್‌ ಸಮಸ್ಯೆ ಬರದಂತೆ ತಡೆಯುವುದು ಹೇಗೆ..?


ಈರುಳ್ಳಿ ಕತ್ತರಿಸುವ ಮೊದಲು ಸ್ವಲ್ಪ ತಣ್ಣಗಾಗಲು ಬಿಡಿ ಮತ್ತು ನಂತರ ಅದನ್ನು ಕತ್ತರಿಸಿ. ಹೀಗೆ ಮಾಡುವುದರಿಂದ ಈರುಳ್ಳಿಯಲ್ಲಿರುವ ರಾಸಾಯನಿಕವು ಗಾಳಿಗೆ ಸೇರದಂತೆ ತಡೆಯುತ್ತದೆ ಮತ್ತು ನಿಮ್ಮ ಕಣ್ಣುಗಳಿಂದ ಕಣ್ಣೀರು ಬರುವುದಿಲ್ಲ. ಹಾಗೆಯೇ, ಈರುಳ್ಳಿ ಕತ್ತರಿಸುವಾಗ ಕಿಟಕಿಗಳನ್ನು ತೆರೆದಿಡುವುದು ಒಳ್ಳೆಯದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ