ರಾತ್ರಿ ಈ ಸಮಯಕ್ಕೆ ಸರಿಯಾಗಿ ಊಟ ಮಾಡಿದ್ರೆ ಮಾತ್ರ ತಿಂದ ಅನ್ನ ಮೈಗೆ ಹತ್ತೋದು..! ಇಲ್ಲ ತಿಂದೂ ವೇಸ್ಟ್
Dinner time : ತಿನ್ನುವುದನ್ನು ಮಾತ್ರವಲ್ಲ, ಯಾವಾಗ ತಿನ್ನುತ್ತೇವೆ ಎನ್ನುವ ವಿಚಾರ ಬಹಳ ಮುಖ್ಯ.. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯವು ಪ್ರತಿದಿನ ಒಂದೇ ಆಗಿರಬೇಕು.. ಅದರಲ್ಲೂ ರಾತ್ರಿಯ ಊಟವನ್ನು ಆದಷ್ಟು ಬೇಗ ಮಾಡುವುದು ತುಂಬಾ ಒಳ್ಳೆಯದು... ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Late night meals side effects : ವಿಶೇಷವಾಗಿ ಸೂರ್ಯಾಸ್ತದ ನಂತರ ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಇತ್ತೀಚಿನ ಸಂಶೋಧನೆಯು ಇದನ್ನು ಸ್ಪಷ್ಟಪಡಿಸುತ್ತದೆ. ಸಂಜೆ ಸಾಧ್ಯವಾದಷ್ಟು ಬೇಗ ಊಟ ಮಾಡಲು ವೈದ್ಯರು ಹೇಳುತ್ತಾರೆ. ಇಲ್ಲವಾದರೆ ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ಸಂಶೋಧಕರು 50 ರಿಂದ 75 ವರ್ಷದೊಳಗಿನ 26 ಜನರನ್ನು ಅಧ್ಯಯನ ಮಾಡಿದರು. ಅವರೆಲ್ಲವರೂ ಅಧಿಕ ತೂಕ ಅಥವಾ ಪ್ರಿಡಯಾಬಿಟಿಸ್ ಇಲ್ಲವೇ ಟೈಪ್ 2 ಮಧುಮೇಹದಿಂದ ಬಳಲುತ್ತಿದ್ದರು. ಅವರನ್ನು ಬೇಗ ತಿನ್ನುವವರು ಮತ್ತು ತಡವಾಗಿ ತಿನ್ನುವರು ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ಅವರಿಗೆ ವಿವಿಧ ಸಮಯಗಳಲ್ಲಿ ಒಂದೇ ರೀತಿಯ ಊಟ ಮತ್ತು ಅದೇ ಪ್ರಮಾಣದ ಕ್ಯಾಲೊರಿಗಳನ್ನು ನೀಡಲಾಯಿತು. ತಡವಾಗಿ ತಿನ್ನುವವರಲ್ಲಿ ಪರೀಕ್ಷೆಯ ನಂತರ ಗ್ಲೂಕೋಸ್ ಮಟ್ಟವು ಹೆಚ್ಚಿರುವುದು ಕಂಡುಬಂದಿದೆ. ಇದು ಗ್ಲೂಕೋಸ್ ಸಹಿಷ್ಣುತೆಯನ್ನು ಸೂಚಿಸುತ್ತದೆ.
ಇದನ್ನೂ ಓದಿ:ಊಟದ ಬಳಿಕ ನಿಂಬೆ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವೇ!?
ತಡವಾಗಿ ತಿಂದರೆ ತೂಕ ಹೆಚ್ಚುತ್ತದೆಯೇ? : ತಡರಾತ್ರಿ ತಿನ್ನುವ ಆಹಾರ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಅವು ದೇಹದ ತೂಕವನ್ನು ಹೆಚ್ಚಿಸುತ್ತವೆ. ಇದು ದೇಹದಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತವೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನವು ಮಧ್ಯರಾತ್ರಿಯ ಆಹಾರ ಸೇವತೆ ಚಯಾಪಚಯ ಕ್ರಿಯೇ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನ ಎತ್ತಿ ತೋರಿಸಿದೆ.
ಈ ಅಧ್ಯಯನದಲ್ಲಿ, 16 ಅಧಿಕ ತೂಕದ ಜನರು ಭಾಗವಹಿಸಿದರು. ಅವರ ನಿದ್ದೆ ಮತ್ತು ಆಹಾರ ಪದ್ಧತಿಯ ಮೇಲೆ ನಿಗಾ ಇಡಲಾಯಿತು. ಬೇಗ ತಿನ್ನುವುದು ಮತ್ತು ತಡವಾಗಿ ತಿನ್ನುವುದು ಮುಂತಾದ ಊಟದ ಸಮಯಗಳನ್ನು ದಾಖಲಿಸಲಾಯಿತು. ತಡವಾದ ಊಟದ ಸಮಯದಲ್ಲಿ ಲೆಪ್ಟಿನ್ ಮಟ್ಟವು ಕುಸಿದಿದೆ ಎಂದು ಫಲಿತಾಂಶಗಳು ತೋರಿಸಿವೆ. ಲೆಪ್ಟಿನ್ ಒಂದು ಹಾರ್ಮೋನ್ ಆಗಿದ್ದು ಅದು ಹೊಟ್ಟೆ ತುಂಬಿದಾಗ ಸಂಕೇತಿಸುತ್ತದೆ. ಹಸಿವು ನಿಯಂತ್ರಣದಲ್ಲಿ ಈ ಅಡಚಣೆಯೊಂದಿಗೆ ಅತಿಯಾಗಿ ತಿನ್ನುವ ಅಪಾಯ ಬರುತ್ತದೆ, ಇದರಿಂದಾಗಿ ಸ್ಥೂಲಕಾಯತೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.