ನಿಮ್ಮ ನಾಲಿಗೆ ಸ್ವಚ್ಛವಾಗಿಲ್ಲ ಅಂದ್ರೆ ಏನಾಗುತ್ತೆ ಗೊತ್ತಾ?
ಹಲವರು ಹಲ್ಲುಗಳನ್ನು ಉಚ್ಚಿ ನಾಲಿಗೆ ಸ್ವಚ್ಛ ಮಾಡದೆ ಕಡೆಗಣಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಉಂಟಾಗುವ ಸಮಸ್ಯೆಗಳು ಬಹಳ.
ಬೆಂಗಳೂರು: ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಹೇಗೆ ಹಲ್ಲು ಉಜ್ಜಿ ಬಾಯಿ ಸ್ವಚ್ಛ ಮಾಡಿಕೊಳ್ಳುತ್ತೀರೋ ಹಾಗೆಯೇ ನಾಲಿಗೆಯ ಸ್ವಚ್ಚತೆಯೂ ಅಷ್ಟೇ ಮುಖ್ಯ. ಕೆಲವರು ಹಲ್ಲುಗಳನ್ನು ಉಚ್ಚಿ ನಾಲಿಗೆ ಸ್ವಚ್ಛ ಮಾಡದೆ ಕಡೆಗಣಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಉಂಟಾಗುವ ಸಮಸ್ಯೆಗಳು ಬಹಳ. ಅವುಗಳ ಪಟ್ಟಿ ಇಲ್ಲಿದೆ...
* ನಾಲಿಗೆ ಸ್ವಚ್ಚಗೊಳಿಸದಿದ್ದರೆ ಆಪಾಯಕಾರಿ ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಕಾರಣವಾಗುತ್ತದೆ.
* ಬಾಯಿ ದುರ್ಗಂಧ ಬೀರುವುದರಿಂದ ಮುಕ್ತವಾಗಿ ಮಾತನಾಡುವುದು ಕಷ್ಟ.
* ನಾಲಿಗೆ ಸ್ವಚ್ಛ ಮಾಡದೇ ಇದ್ದರೆ, ಬಿಳಿಯ ಪದರ ನಿರ್ಮಾಣವಾಗಿ ಆಹಾರ ಪದಾರ್ಥಗಳ ರುಚಿ ತಿಳಿಯುವುದಿಲ್ಲ.
* ದೇಹದ ಸಂಪೂರ್ಣ ಆರೋಗ್ಯ ಹೇಗೆದೆ ಎಂಬುದನ್ನು ವೈದ್ಯರು ನಾಲಿಗೆಯನ್ನು ಪರೀಕ್ಷಿಸಿಯೇ ಹೇಳುತ್ತಾರೆ. ಹಾಗಾಗಿ ನಾಲಿಗೆ ಸ್ವಚ್ಚವಾಗಿರದಿದ್ದರೆ ದೇಹದ ಹಲವು ಸಮಸ್ಯೆಗಳಿಗೆ ನಾಂದಿಯಾದಂತೆ.
* ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.
* ನಾಲಿಗೆ ಅಸ್ವಚ್ಚತೆಯಿಂದ ಅಜೀರ್ಣ, ಶ್ವಾಸಕೋಶ ಸಮಸ್ಯೆಗಳೂ ಸಹ ಉಲ್ಬಣವಾಗುತ್ತದೆ.
ಹಾಗಾಗಿ ಹಲ್ಲಿನ ಸ್ವಚ್ಚತೆಯ ಜೊತೆಗೆ ನಾಲಿಗೆಯ ಸ್ವಚ್ಚತೆಯೂ ಸಹ ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.