Video: ನಿಪಾ ವೈರಸ್ ಬಗ್ಗೆ ವೈದ್ಯರ ಸಲಹೆಯೇನು?
ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಕೆಮ್ಮು, ಶೀತಗಳು, ಜ್ವರ, ತಲೆನೋವು ಮತ್ತು ಮೈ-ಕೈ ನೋವುಳ್ಳ ಜನರು ಕೂಡ ವೈದ್ಯರ ಬಳಿ ಹೋಗಿ, ಅವರ ಅನಾರೋಗ್ಯದ ಕಾರಣ ನಿಪಾ ವೈರಸ್ ಅಲ್ಲ ತಾನೇ ಎಂದು ಕೇಳುತ್ತಾರೆ.
ನವದೆಹಲಿ: ನಿಪಾ ವೈರಸ್ನ ಭಯ ಈ ದಿನಗಳಲ್ಲಿ ದೇಶದಾದ್ಯಂತ ಹರಡುತ್ತಿದೆ. ಸಾಮಾನ್ಯ ಕೆಮ್ಮು, ಶೀತಗಳು, ಜ್ವರ, ತಲೆನೋವು ಮತ್ತು ಮೈ-ಕೈ ನೋವುಳ್ಳ ಜನರು ಕೂಡ ವೈದ್ಯರ ಬಳಿ ಹೋಗಿ, ಅವರ ಅನಾರೋಗ್ಯದ ಕಾರಣ ನಿಪಾ ವೈರಸ್ ಅಲ್ಲ ತಾನೇ ಎಂದು ಕೇಳುತ್ತಾರೆ. ನಿಪಾ ವೈರಸ್ ಕಾರಣದಿಂದ ಉಂಟಾಗುವ ರೋಗಗಳು ಅಪಾಯಕಾರಿ ಎಂದು ಎಲ್ಲಾ ವೈದ್ಯರು ಒಪ್ಪಿಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ವೈರಸ್ ಪತ್ತೆ ಹಚ್ಚುವಿಕೆ ಮತ್ತು ಸರಿಯಾದ ಚಿಕಿತ್ಸೆಯ ಕೊರತೆಯಿಂದಾಗಿ ಜನರು ನಿಪಾ ವೈರಸ್ ಬಗ್ಗೆ ಹೆದರುತ್ತಿದ್ದಾರೆ. ಅದೇ ಸಮಯದಲ್ಲಿ ದೇಶದ ಕೆಲವು ಭಾಗಗಳಲ್ಲಿ ನಿಪಾ ವೈರಸ್ ನಿಂದಾಗಿ ಜನರು ಸಾವನ್ನಪ್ಪಿರುವುದು ಸಹ ಜನರ ಹೃದಯದಲ್ಲಿ ನಿಪಾ ವೈರಸ್ ಭಯವನ್ನು ಹೆಚ್ಚಿಸಿದೆ. ನಿಪಾ ವೈರಸ್ ನಿಂದ ಉಂಟಾಗುವ ಕಾಯಿಲೆ ಬಗ್ಗೆ ನಾವು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಆಂತರಿಕ ಮೆಡಿಸಿನ್ ಇಲಾಖೆಯ ಡಾ. ಸುರಾನ್ಜೀತ್ ಚಟರ್ಜಿ ಅವರನ್ನು ಮಾತನಾಡಿಸಿದೆವು. ನಿಪಾ ವೈರಸ್ ಬಗ್ಗೆ ಡಾ. ಸುರಾನ್ಜೀತ್ ಏನ್ ಹೇಳಿದ್ದಾರೆ ಎಂದು ತಿಳಿಯೋಣ...
ಡಾ. ಸುರಾನ್ಜಿತ್ ಚಟರ್ಜಿ ಅವರ ಪ್ರಕಾರ, ನಿಪಾ ವೈರಸ್ನಿಂದ ಹರಡುವ ರೋಗಗಳು ಚಿಕಿತ್ಸೆಯ ಕೊರತೆಯಿಂದಾಗಿ ಬಹಳ ಅಪಾಯಕಾರಿಯಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ವೈರಸ್ ಹರಡಿರುವುದು ಕಂಡುಬಂದಿದೆ. ಇದಕ್ಕೆ ಮೊದಲು ಅಸ್ಸಾಂ ಮತ್ತು ಬಂಗಾಳದಲ್ಲಿ ಈ ವೈರಸ್ ಕಂಡುಬಂದಿತ್ತು. ನಂತರ ನಾವು ಈ ವೈರಸ್ನಿಂದ ಉಂಟಾಗುವ ಕಾಯಿಲೆಗಳನ್ನು ನಿಯಂತ್ರಿಸಲಾಗಿತ್ತು. ಇಂದು ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವೇಗವಾಗಿ ಪ್ರಯಾಣಿಸುತ್ತಿರುವುದರಿಂದ ಸ್ವಲ್ಪ ತೊಂದರೆ ಇದೆ. ಆದ್ದರಿಂದ, ಕೇರಳದಿಂದ ಬೇರೆ ರಾಜ್ಯಗಳು ಅಥವಾ ನಗರಗಳಿಗೆ ಸಾಮಾನ್ಯವಾಗಿ ಪ್ರಯಾಣಿಸುವ ಜನರಿಂದ ಕೂಡ ದೇಶದ ಇತರ ರಾಜ್ಯಗಳಿಗೆ ಈ ವೈರಸ್ ಹರಡುವ ಸಂಭವನೀಯತೆ ಇದೆ. ಈ ತೊಂದರೆಯಿಂದಾಗಿ, ಸೋಂಕನ್ನು ಒಂದೇ ಸ್ಥಳದಲ್ಲಿ ನಿಯಂತ್ರಿಸುವುದು ಕಷ್ಟವಾಗುತ್ತದೆ. ಆದರೆ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆಗಳು ಹಿಂದೆಂದಿಗಿಂತಲೂ ಉತ್ತಮವಾದ ಸೌಲಭ್ಯಗಳನ್ನು ಹೊಂದಿವೆ. ಅದರಿಂದಾಗಿ ಈ ವೈರಸ್ ಹರಡುವಿಕೆಯ ಮೇಲೆ ನಿಯಂತ್ರಣವನ್ನು ಪಡೆಯಬಹುದು.
ನಿಪಾ ವೈರಸ್ ಒಂದು ಸೋಂಕು ಎಂದು ನಾವು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತೇವೆ ಎಂದು ಡಾ. ಸುರಾನ್ಜಿತ್ ಚಟರ್ಜಿ ಹೇಳಿದರು. ಈ ಡಿಸೀಸ್ ಪ್ರಾಣಿಗಳಿಂದ ಮಾನವರಿಗೆ ಹರಡಬಲ್ಲದು. ಆದರೆ, ಈ ಸೋಂಕು ಮನುಷ್ಯನಿಂದ ಮನುಷ್ಯನಿಗೆ ವರ್ಗಾವಣೆಯಾಗುತ್ತಿರುವುದು ಕಂಡುಬಂದಿದೆ. ಆದ್ದರಿಂದ, ಸೋಂಕಿತ ವ್ಯಕ್ತಿಯು ವೈಫಲ್ಯದಿಂದ ಈ ಸೋಂಕು ಇನ್ನೊಬ್ಬ ವ್ಯಕ್ತಿಗೆ ತ್ವರಿತವಾಗಿ ಹರಡಬಹುದು. ಹಂದಿಗಳು ಮತ್ತು ಬಾವಲಿಗಳಂತಹ ಪ್ರಾಣಿಗಳ ಮೂಲಕ ಈ ಸೋಂಕು ವೇಗವಾಗಿ ಹರಡಬಹುದೆಂದು ಅವರು ಹೇಳಿದರು. ಹಂದಿಗಳೊಂದಿಗೆ ಸಂಪರ್ಕ ಹೊಂದಿರುವ ಜನರಲ್ಲಿ ಈ ಸೋಂಕು ಕಂಡು ಬರುತ್ತದೆ. ಅದೇ ಸಮಯದಲ್ಲಿ, ಹಂದಿ ತಿನ್ನುವ ಜನರು ಈ ವೈರಸ್ ಗೆ ತುತ್ತಾಗುವ ಸಂಭವನೀಯತೆ ಹೆಚ್ಚಾಗಿದೆ. ಅಂತೆಯೇ, ಬಾವಲಿಗಳು ಈ ಸೋಂಕನ್ನು ಸ್ರವಿವಿಕೆಯ ಮೂಲಕ ವೇಗವಾಗಿ ಹರಡುತ್ತವೆ. ಒಂದು ಬಾವಲಿ ಮರದಲ್ಲಿರುವ ಹಣ್ಣನ್ನು ತಿಂದಿದ್ದರೆ, ಆ ಹಣ್ಣಿಗೆ ಈ ವೈರಸ್ ತಗುಲುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ತೊಂದರೆಗೊಳಗಾದ ಹಣ್ಣನ್ನು ಸೇವಿಸುವ ವ್ಯಕ್ತಿಯು ಸಹ ನಿಪಾ ವೈರಸ್ನಿಂದ ಪ್ರಭಾವಿತರಾಗುತ್ತಾರೆ. ಈ ರೀತಿಯಾಗಿ, ನಿಪಾ ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಯು ಈ ವೈರಸ್ ಅನ್ನು ಸ್ರವಿಸುವಿಕೆಯ ಮೂಲಕ ಇತರ ಜನರಿಗೆ ರವಾನಿಸಬಹುದು.
ಈ ರೋಗಲಕ್ಷಣವನ್ನು ಹೊಂದಿದ್ದೀರಿ, ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ
ನಿಪಾ ವೈರಸ್ನ ರೋಗಲಕ್ಷಣಗಳು ಇತರ ವೈರಸ್ ಗಳಿಗೆ ಹೋಲುತ್ತವೆ ಎಂದು ಡಾ. ಸುರಾನ್ಜಿತ್ ಚಟರ್ಜಿ ಹೇಳಿದರು. ಈ ವೈರಸ್ ಗೆ ತುತ್ತಾದ ಜನರಲ್ಲಿ ಕೆಮ್ಮು, ಶೀತಗಳು, ಜ್ವರ, ತಲೆನೋವು ಮತ್ತು ಮೈ-ಕೈ ನೋವು ಇರುತ್ತದೆ. ಈ ವೈರಸ್ ಹಲವು ಬಾರಿ ಉಸಿರಾಟದ ಸೋಂಕುಗಳಿಗೆ ಕಾರಣವಾಗಬಹುದು. ರೋಗಿಯು ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆಯದಿದ್ದರೆ, ಈ ವೈರಸ್ ಮೆದುಳಿನ ಮೇಲೆ ಪರಿಣಾಮ ಬೀರಬಹುದು. ಇದು ಮೂರ್ಛೆ ಅಥವಾ ಕೋಮಾಗೆ ಕಾರಣವಾಗಬಹುದು. ಆದ್ದರಿಂದ, ಈ ರೋಗಲಕ್ಷಣಗಳ ಬಗ್ಗೆ ಜನರು ಜಾಗರೂಕರಾಗಿರಬೇಕು. ಈ ವೈರಸ್ ಪತ್ತೆ ಹಚ್ಚುವ ಪರೀಕ್ಷೆಯು ಬಹಳ ಸಾಮಾನ್ಯವಾಗಿಲ್ಲ. ದೇಶದ ಎಲ್ಲಾ ಸಂಸ್ಥೆಗಳು ಪ್ರಸ್ತುತ ಈ ವೈರಸ್ ಪರೀಕ್ಷಿಸಲು ಸಜ್ಜಾಗಿಲ್ಲ ಎಂದು ಅವರು ಹೇಳಿದರು. ಆದ್ದರಿಂದ, ಈ ವೈರಸ್ ಪತ್ತೆಹಚ್ಚಲು, ರಕ್ತ ಮಾದರಿಗಳನ್ನು ಪುಣೆ ಮೂಲದ ಇನ್ಸ್ಟಿಟ್ಯೂಟ್ಗೆ ಕಳುಹಿಸಬೇಕು. ಕೆಲವೊಮ್ಮೆ ವರದಿಗಳಲ್ಲಿ ವಿಳಂಬ ಸಹ ಉಂಟಾಗುತ್ತದೆ. ಇದು ನಿಪಾ ವೈರಸ್ನ ಸಮಸ್ಯೆ ಕೂಡಾ ಆಗಿದೆ.