ನಮ್ಮ ಸೌಂದರ್ಯಕ್ಕೆ ಹಲ್ಲುಗಳು ಮತ್ತಷ್ಟು ಮೆರಗು ನೀಡುತ್ತವೆ. ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೈನಂದಿನ ಜೀವನದಲ್ಲಿ ಅಗತ್ಯವಾಗಿದೆ. ಬಾಯಿಯನ್ನು ಶುಚಿಯಾಗಿಟ್ಟುಕೊಂಡರೆ ಅರ್ಧ ಹಲ್ಲಿನ ರಕ್ಷಣೆ ಮಾಡಿದಂತೆ. ಅತಿಯಾದ  ತಂಪು ಪದಾರ್ಥ, ಸಿಹಿ ತಿಂದ ಕೂಡಲೇ ಹಲ್ಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಕ್ಯಾವಿಟೀಸ್‌ ಸಮಸ್ಯೆ ಹಾಗೂ ಎನಾಮೆಲ್‌ ಅಂಶ ಕಡಿಮೆಯಾದಾಗ ಇಂತಹ ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Blood Pressure: ನೀರು ಕುಡಿದೇ ಬಿಪಿ ಕಂಟ್ರೋಲ್‌ಗೆ ತರಬಹುದು! ಈ ವಿಧಾನ ಅನುಸರಿಸಬೇಕಷ್ಟೆ


ಬಾಯಿಯ ಸ್ವಚ್ಛತೆಗಾಗಿ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮುಖ್ಯ ಎಂದು ಅನೇಕ ತಜ್ಷರು ಶಿಫಾರಸು ಮಾಡುತ್ತಾರೆ. ಒಂದೇ ಹಲ್ಲುಜ್ಜುವ ಬ್ರಷ್‌ನ್ನು ವರ್ಷಗಟ್ಟಲೇ ಬಳಸಬಾರದು. ಇದು ಸಹ ಹಲ್ಲಿನ ಸಮಸ್ಯೆಗೆ ಕಾರಣವಾಗಬಹುದು. 


ಅನೇಕ ದಂತ ವೃತ್ತಿಪರರು ಪ್ರತಿ ಮೂರು ತಿಂಗಳಿಗೊಮ್ಮೆ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಲು ಶಿಫಾರಸು ಮಾಡುತ್ತಾರೆ. ಅಮೇರಿಕನ್ ಡೆಂಟಲ್ ಅಸೋಸಿಯೇಷನ್ ​​(ADA) ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಸರಿಸುಮಾರು ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಅಥವಾ ಅದಕ್ಕೂ ಮುನ್ನ ಬದಲಾಯಿಸುವಂತೆ ಶಿಫಾರಸು ಮಾಡುತ್ತದೆ.


ಒಂದೇ ಟೂತ್‌ ಬ್ರಷ್‌ ಅನ್ನು ಹೆಚ್ಚು ಕಾಲ ಬಳಸುವುದರಿಂದ ಬ್ರಷ್‌ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇದು ಹಲ್ಲಿನ ಹುಳುಕಿಗೆ ಕಾರಣವಾಗಬಹುದು. ಹೀಗಾಗಿ ಹಲ್ಲುಜ್ಜುವ ಬ್ರಷ್‌ ಅನ್ನು ಕಾಲಕಾಲಕ್ಕೆ ಬದಲಾಯಿಸುವ ಅಗತ್ಯವಿರುತ್ತದೆ. ಕೆಲವು ಬಾರಿ ಹಲ್ಲುಜ್ಜಿದ ನಂತರ ಕೂಡ ಹಲ್ಲು ಕ್ಲೀನ್‌ ಆಗುವುದಿಲ್ಲ. ಇದಕ್ಕೆ ಕಾರಣ ಬ್ರಷ್‌ಗಳ ಎಳೆಗಳು ಸರಿಯಾಗಿ ಸ್ವಚ್ಛಗೊಳಿಸದೇ ಇರುವುದು. ಆ ಸಂದರ್ಭದಲ್ಲಿ ಅವಶ್ಯವಾಗಿ ಟೂತ್‌ ಬ್ರಷ್‌ನ್ನು ಬದಲಿಸಿ ಬಿಡಿ. 


ಇದಲ್ಲದೇ, ಜ್ವರ ಅಥವಾ ಯಾವುದೇ ರೀತಿಯ ಅನಾರೋಗ್ಯಕ್ಕೆ ಒಳಗಾಗಿ ಗುಣಮುಖರಾದ ಮೇಲೆ ಬ್ರಷ್‌ನ್ನು ಬದಲಾಯಿಸಬೇಕು. ಏಕೆಂದರೆ ಅನಾರೋಗ್ಯದ ವೇಳೆ ಹಲ್ಲುಜ್ಜಿದಾಗ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. 


ಇದನ್ನೂ ಓದಿ: ಈ ಸಮಸ್ಯೆ ಇರುವವರು ತಪ್ಪಿಯೂ ಹೆಸರು ಬೇಳೆ ಸೇವಿಸಬಾರದು


ಅಲ್ಲದೇ ಕೆಲವರು ಹಲ್ಲು ಕ್ಲೀನ್‌ ಆಗಲೆಂದು ಹಾರ್ಡ್‌ ಆಗಿರುವ ಬ್ರಷ್‌ ಅನ್ನು ಬಳಸುತ್ತಾರೆ. ಹಾರ್ಡ್‌ ಬ್ರಷ್‌ಗಳ ಬಳಕೆ ಹಲ್ಲಿಗೆ ನೋವುಂಟು ಮಾಡಬಹುದು. ಹೀಗಾಗಿ ಮೃದು ಎಳೆಗಳ ಬ್ರಷ್‌ ಬಳಸಿ. ಇದರಿಂದ ಹಲ್ಲುಗಳಿಗೆ ಹಾನಿ ಆಗುವುದನ್ನು ತಪ್ಪಿಸಬಹುದು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.