Food to eat after 30 age : ನಮಗೆ ವಯಸ್ಸಾದಂತೆ, ನಮ್ಮ ದೇಹದ ಅಗತ್ಯಗಳು ಬದಲಾಗಲು ಪ್ರಾರಂಭಿಸುತ್ತವೆ. ವಯಸ್ಸು 30 ದಾಟಿದ ನಂತರ ತಿನ್ನುವುದು ಮತ್ತು ಕುಡಿಯುವ ವಿಚಾರದಲ್ಲಿ ತುಂಬಾ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ರೋಗಗಳನ್ನು ಎದುರಿಸಲು ಪ್ರಾರಂಭಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಈ ವಯಸ್ಸಿನಲ್ಲಿ ನಮ್ಮ ದೇಹದಲ್ಲಿ ಆಗುವ ಹಲವು ಬದಲಾವಣೆಗಳಿಂದ ಸುಸ್ತು, ಕೀಲು ನೋವು, ದೇಹ ನೋವು ಹೀಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದ್ರೆ ನಮ್ಮ ದೇಹ ದುರ್ಬಲವಾಗಿರುವುದಿಲ್ಲ. ಅದಕ್ಕಾಗಿ ಮುಂಜಾಗೃತ ಕ್ರಮವಾಗಿ 30 ರ ನಂತರ ಉತ್ತಮ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳುವುದು ಬಹುಮುಖ್ಯ.


ಇದನ್ನೂ ಓದಿ: Oranges Benefits: ಕಿತ್ತಳೆ ಹಣ್ಣಿನ ಸೇವನೆ ಬಗ್ಗೆ ತಜ್ಞರು ಹೇಳೊದೇನು...? ಇಲ್ಲಿದೆ ನೋಡಿ ಮಾಹಿತಿ..!


30 ವರ್ಷಗಳ ನಂತರ ಇವುಗಳನ್ನು ತಪ್ಪಿಸಿ : ಭಾರತದ ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್, ನಾವು 30 ವರ್ಷ ದಾಟಿದಾಗ, ಜೀವನಶೈಲಿಯೊಂದಿಗೆ, ಆಹಾರದ ಅಭ್ಯಾಸವ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಅದು ಆರೋಗ್ಯಕ್ಕೆ ಹಾನಿ ಮತ್ತು ಭವಿಷ್ಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳುತ್ತಾರೆ. ಹಾಗಿದ್ರೆ ಯಾವ ಆಹಾರ ತಿನ್ನಬಾರದು ಎಂದು ಈಗ ತಿಳಿಯೋಣ..


ಆಲೂಗೆಡ್ಡೆ ಚಿಪ್ಸ್ : ಆಲೂಗೆಡ್ಡೆ ಚಿಪ್ಸ್ ರುಚಿಯಾಗಿರುತ್ತದೆ, ಎಲ್ಲಾ ವಯಸ್ಸಿನವರಿಗೂ ಇಷ್ಟವಾಗಿದೆ. ಪ್ರಪಂಚದಾದ್ಯಂತದ ಉದ್ಯಮಿಗಳು ಚಿಪ್ಸ್ ವ್ಯಾಪಾರದಿಂದ ಕೋಟಿ ರೂಪಾಯಿ ಗಳಿಸುತ್ತಾರೆ. ಈ ಆಹಾರವು ಎಷ್ಟೇ ಜನಪ್ರಿಯವಾಗಿದ್ದರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು 30 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಇದನ್ನು ತಿನ್ನುವುದನ್ನು ತಪ್ಪಿಸಿ. ಆಲೂ ರುಚಿಸಲು ಕೃತಕ ಪದಾರ್ಥಗಳನ್ನು ಬಳಸುತ್ತಾರೆ ಜೊತೆಗೆ ಸೋಡಿಯಂ ಅಂಶವು ತುಂಬಾ ಹೆಚ್ಚಾಗಿರುತ್ತದೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ: Weight Loss Fruits: ತೂಕ ನಷ್ಟಕ್ಕೆ ವರದಾನಕ್ಕಿಂತ ಕಡಿಮೆ ಇಲ್ಲ ಈ 4 ಹಣ್ಣುಗಳು


ಮೊಸರು : ಮೊಸರು ತಿನ್ನುವುದು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಇದು ದೇಹಕ್ಕೆ ತಂಪು ಪರಿಣಾಮವನ್ನು ನೀಡುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ನೀವು ನಿಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರೆ, ಸಕ್ಕರೆ ಮಿಶ್ರಿತ ಮೊಸರುಗಳಿಂದ ದೂರವಿರಿ. ಹೆಚ್ಚಿನ ಸಕ್ಕರೆ ಅಂಶದಿಂದಾಗಿ ಮಧುಮೇಹ ಮತ್ತು ಬೊಜ್ಜು ಹೆಚ್ಚಾಗುವ ಅಪಾಯ.


ಪಾಪ್ ಕಾರ್ನ್ : ನಾವು ಮಲ್ಟಿಪ್ಲೆಕ್ಸ್‌ಗಳಲ್ಲಿ ಅಥವಾ ಸಂಜೆ ಮನೆಯಲ್ಲಿ ಸಿನಿಮಾ ನೋಡುವಾಗ ಪಾಪ್‌ಕಾರ್ನ್ ತಿನ್ನಲು ಇಷ್ಟಪಡುತ್ತೇವೆ, ಆರೋಗ್ಯಕರ ರೀತಿಯಲ್ಲಿ ತಯಾರಿಸಿದರೆ ಅದು ಆರೋಗ್ಯಕರವಾಗಿರುತ್ತದೆ, ಆದರೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಇದನ್ನು ತಯಾರಿಸಲು ಸಾಕಷ್ಟು ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಬಳಸಲಾಗುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.