ಪ್ರತಿದಿನ ಮದ್ಯ ಸೇವಿಸುತ್ತೀರಾ..? ಹಾಗಿದ್ರೆ ಈ ಹಣ್ಣು ತಿನ್ನಿ ʼಲಿವರ್ ಡ್ಯಾಮೇಜ್ʼ ಆಗಲ್ಲ.!
Alcohol liver damage : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಮದ್ಯ ಸೇವಿಸುವವರಲ್ಲಿ ಹೆಚ್ಚಿನವರು ಯುವಕರೇ ಹೆಚ್ಚು ಎಂಬುದು ಗಮನಾರ್ಹ. ಇದರಿಂದ ಅವರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ, ಅಲ್ಲದೆ, ಕೆಲವರು ಸಾಯುತ್ತಿದ್ದಾರೆ. ಆದರೆ ಕೆಲವು ಸಂಶೋಧನೆಗಳ ಪ್ರಕಾರ ಈ ಕೆಳಗೆ ನೀಡಿರುವ ಹಣ್ಣನ್ನು ತಿಂದರೆ, ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳುತ್ತಾರೆ.. ಹಾಗಿದ್ರೆ ಆ ಹಣ್ಣು ಯಾವುದು..? ಹೇಗೆ ತಿನ್ನಬೇಕು ಅಂತ ತಿಳಿಯೋಣ..
Alcohol liver damage remedies : ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆಧುನಿಕ ಕಾಲದಲ್ಲಿ ಜನರು ವಾರಾಂತ್ಯ ಮತ್ತು ಹಬ್ಬ ಹರಿದಿನಗಳಲ್ಲಿ ಅತಿಯಾಗಿ ಮದ್ಯಪಾನ ಮಾಡುತ್ತಾರೆ. ಕೆಲವರು ಪ್ರತಿದಿನ ಸಾಕಷ್ಟು ಮದ್ಯವನ್ನು ಸೇವಿಸುತ್ತಾರೆ.
ಹೀಗೆ ಮಾಡುವುದರಿಂದ, ಯಕೃತ್ತು ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಳಗಾಗುತ್ತದೆ. ಅಲ್ಲದೆ, ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಆದರೆ, ಎಷ್ಟೇ ಮದ್ಯ ಸೇವಿಸಿದರೂ ಲಿವರ್ ಡ್ಯಾಮೇಜ್ ಆಗುವುದನ್ನು ತಪ್ಪಿಸಲು ಪ್ರತಿದಿನ ಈ ಒಂದು ಹಣ್ಣನ್ನು ಸೇವಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು.
ಇದನ್ನೂ ಓದಿ: Cloves Benefits: ಪುರುಷರ ಆರೋಗ್ಯಕ್ಕೆ ವರದಾನ ಲವಂಗ
ಅಂಜೂರ ಹಣ್ಣನ್ನು ಸೇವಿಸುವುದರಿಂದ ಯಕೃತ್ತಿನ ಜೀವಕೋಶಗಳು ಸಂಪೂರ್ಣವಾಗಿ ಶುದ್ಧವಾಗುತ್ತವೆ ಎಂದು ಹೇಳಲಾಗುತ್ತದೆ. ಆಲ್ಕೋಹಾಲ್ ಸೇವನೆಯಿಂದ ಯಕೃತ್ತಿನ ಜೀವಕೋಶಗಳಿಗೆ ಸೇರುವ ರಾಸಾಯನಿಕಗಳು ಸಂಪೂರ್ಣವಾಗಿ ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಯಕೃತ್ತಿನ ಆರೋಗ್ಯವನ್ನು ಸುಧಾರಿಸಲು ಅಂಜೂರದ ಹಣ್ಣು ಅತ್ಯುತ್ತಮ ಹಣ್ಣುಗಳಲ್ಲಿ ಒಂದಾಗಿದೆ.
ಪ್ರತಿದಿನ 10 ಅಂಜೂರದ ಹಣ್ಣುಗಳನ್ನು ಸೇವಿಸುವುದರಿಂದ ಆಲ್ಕೊಹಾಲ್ಯುಕ್ತರು ಯಕೃತ್ತಿನ ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯಬಹುದು ಎಂದು ವೈದ್ಯಕೀಯ ಪರೀಕ್ಷೆಗಳು ತೋರಿಸಿವೆ. ಅಂಜೂರದಲ್ಲಿ ಬೀಟಾ-ಡಿ ಗ್ಲೈಕೋಸಿಲ್ ಎಂಬ ರಾಸಾಯನಿಕವಿದ್ದು, ಇದು ಯಕೃತ್ ಕೋಶಗಳಲ್ಲಿರುವ ರಾಸಾಯನಿಕಗಳನ್ನು ಹೊರಹಾಕಿ ಸಹಜ ಸ್ಥಿತಿಗೆ ತರಲು ನೆರವಾಗುತ್ತದೆ ಎನ್ನುತ್ತಾರೆ ತಜ್ಞರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.