ಬೆಂಗಳೂರು : ಪೇರಳೆ ಬಹಳ ರುಚಿಕರವಾದ ಹಣ್ಣು. ಪೇರಳೆಯಲ್ಲಿ ಎರಡು ವಿಧ. ಬಿಳಿ ಪೇರಳೆ ಮತ್ತು ಕೆಂಪು ಪೇರಳೆ. ಪೇರಳೆ ಹಣ್ಣನ್ನು ಕತ್ತರಿಸಿ ಅದಕ್ಕೆ  ಬ್ಲಾಕ್ ಸಾಲ್ಟ್ ಅಥವಾ ಅಥವಾ ಚಾಟ್ ಮಸಾಲಾ ಹಾಕಿ ಸವಿಯುವುದೆಂದರೆ ಅನೇಕರಿಗೆ ಬಹಳ ಇಷ್ಟ. ಪೇರಳೆ ಹಣ್ಣು ಉದರದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆಹಾರ ಸೇವಿಸಿದ ನಂತರ ಪೇರಳೆ ಸೇವಿಸಬೇಕು. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಿಯಾಗಿಡುತ್ತದೆ. ಹೆಚ್ಚಾಗಿ ಮಾರುಕಟ್ಟೆಯಲ್ಲಿ ಬಿಳಿ ಪೇರಳೆ ಸಿಗುವುದರಿಂದ ಅದನ್ನೇ ಜನ ತಿನ್ನುತ್ತಾರೆ. ಆದರೆ ಕೆಂಪು ಪೇರಳೆ ತಿಂದರೆ ದೇಹಕ್ಕೆ ಸಿಗುವ ಪ್ರಯೋಜನ ಗೊತ್ತಾ? 


COMMERCIAL BREAK
SCROLL TO CONTINUE READING

ಹೆಚ್ಚಾಗಿ ಕೆಂಪು ಪೇರಳೆ ಮಳೆಗಾಲದಲ್ಲಿ ಬರಲು ಪ್ರಾರಂಭಿಸುತ್ತದೆ. ಬಿಳಿ ಪೇರಳೆಗೆ ಹೋಲಿಸಿದರೆ ಕೆಂಪು ಪೇರಳೆ ತುಂಬಾ ಪ್ರಯೋಜನಕಾರಿಯಾಗಿದೆ. 


1. ಕೆಂಪು ಪೇರಳೆಯಲ್ಲಿ ಹೇರಳವಾದ ವಿಟಮಿನ್ ಸಿ ಕಂಡುಬರುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಗಳಿಂದ ಕೂಡ ಸಮೃದ್ಧವಾಗಿದೆ. ಮಧುಮೇಹ ರೋಗಿಗಳಿಗೆ ಕೆಂಪು ಪೇರಳೆ ತುಂಬಾ ಪ್ರಯೋಜನಕಾರಿಯಾಗಿದೆ. ಕೆಂಪು ಪೇರಳೆಯಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆಯಿರುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. 


ಇದನ್ನೂ ಓದಿ : ಈ ಎರಡು ವಸ್ತುಗಳನ್ನು ಬಳಸಿದರೆ ಒಂದೇ ಗಂಟೆಯಲ್ಲಿ ಬಿಳಿ ಕೂದಲು ಕಪ್ಪಾಗುವುದು ! ಒಮ್ಮೆ ಟ್ರೈ ಮಾಡಿ


2. ಕೆಂಪು ಪೇರಳೆ ತಿನ್ನುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆ ದೂರವಾಗುತ್ತದೆ. ಕೆಂಪು ಪೇರಳೆಯಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ. ಕೆಂಪು ಪೇರಳೆ ತಿನ್ನುವುದರಿಂದ  ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಗಡ್ಡೆಯ ರಚನೆಯ ಪ್ರಕ್ರಿಯೆಯನ್ನು ನಿಲ್ಲಿಸಲು ಕೆಂಪು ಪೇರಳೆ ಸಹಾಯ ಮಾಡುತ್ತದೆ. 


3. ಕೆಂಪು ಪೇರಳೆಯಲ್ಲಿ ಪೊಟ್ಯಾಸಿಯಮ್ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಅದಕ್ಕಾಗಿಯೇ ಬಿಪಿ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.


4. ಕೆಂಪು ಪೇರಳೆಯಲ್ಲಿ ಫೈಬರ್ ಸಾಕಷ್ಟು ಪ್ರಮಾಣದಲ್ಲಿದೆ. ಕೆಂಪು ಪೇರಳೆಯಲ್ಲಿ ನೀರಿನ ಅಂಶ ಕೂಡಾ ಕಡಿಮೆ. ಇದನ್ನು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡಾ  ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 


ಇದನ್ನೂ ಓದಿ : ಸೆಕ್ಸ್‌ಗೂ ಮೊದಲು ಮಾಡಲೇಬೇಕಾದ 'ಆ' 7 ಕೆಲಸಗಳು..! ಯಾವುವು ಗೊತ್ತೆ..?


5. ಬಿಳಿ ಪೇರಳೆಗಿಂತ ಕೆಂಪು ಪೇರಳೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದನ್ನು ತಿಂದರೆ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳು ದೂರವಾಗುತ್ತವೆ. ಕೆಂಪು ಪೇರಲವು ಚರ್ಮದ ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.