White Hair: ಬಿಪಿ ಜಾಸ್ತಿ ಇರುವವರ ತಲೆ ಕೂದಲು ಬೇಗನೆ ಬೆಳ್ಳಗಾಗುತ್ತವೆಯೇ? ಏನಿದೆ ಇದರ ನಡುವಿನ ಕನೆಕ್ಷನ್
White Hair And High BP Connection: ಬಿಳಿ ಕೂದಲು ಹಾಗೂ ಅಧಿಕ ರಕ್ತದೊತ್ತದ ಕೇಳಲು ಎರಡೂ ಭಿನ್ನ ಭಿನ್ನವಾಗಿವೆ. ಆದರೆ, ಇವೆರಡರ ಮಧ್ಯೆ ಏನಾದರು ಕನೆಕ್ಷನ್ ಇದೆಯಾ? ಬನ್ನಿ ತಿಳಿದುಕೊಳ್ಳೋಣ,
White Hair And High Blood Pressure Relation: ಅಧಿಕ ರಕ್ತದೊತ್ತಡ ಹಾಗೂ ಯೌವನಾಸ್ಥೆಯಲ್ಲಿಯೇ ಕೂದಲು ಬಿಳಿಯಾಗುವಿಕೆ ಇವು ಪ್ರಸ್ತುತ ಸಮಯದಲ್ಲಿ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿವೆ. ಭಾರತವಷ್ಟೇ ಅಲ್ಲ ಇಡೀ ವಿಶ್ವದಲ್ಲಿಯೇ ಈ ಸಮಸ್ಯೆಯನ್ನು ಹಲವಾರು ಜನರು ಎದುರಿಸುತ್ತಿದ್ದಾರೆ. ಹೈ ಕೊಲೆಸ್ಟ್ರಾಲ್ ಬಿಪಿ ಹೆಚ್ಚಳಕ್ಕೆ ಕಾರಣವಾದರೆ, ಶರೀರದಲ್ಲಿ ಮೇಲೆನಿನ್ ಕೊರತೆ ಬಿಳಿಗೂದಲು ಸಮಸ್ಯೆಗೆ ಪ್ರಮುಖ ಕಾರಣ. ಆದರೆ, ಹಾಳಾದ ಜೀವನಶೈಲಿ ಹಾಗೂ ಹಾಳಾದ ಆಹಾರ ಪದ್ಧತಿಗಳ ಮೂಲಕ ನೀವು ಇವೆರಡರ ಸಂಬಂಧ ಕಲ್ಪಿಸಬಹುದು. ಬಿಪಿ ನಿಯಂತ್ರಣದಲ್ಲಿರಲು ನೀವು ವಿಫಲರಾದರೆ, ಹೃದಯಾಘಾತ, ಸ್ಟ್ರೋಕ್, ಕೊರೋನರಿ ಆರ್ಟರಿ ಡಿಸೀಸ್ ಅಥವಾ ಟ್ರಿಪಲ್ ವೆಸ್ಸೆಲ್ ಡಿಸೀಸ್ ನಂತಹ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಆದರೆ ಅಧಿಕ ರಕ್ತದೊತ್ತಡ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಸಮಸ್ಯೆಗೆ ಕಾರಣವಾಗುತ್ತದೆಯೇ? ಬನ್ನಿ ತಿಳಿದುಕೊಳ್ಳೋಣ,
ಸಾಮಾನ್ಯವಾಗಿ ರಕ್ತದೊತ್ತಡ ಎಷ್ಟಿರಬೇಕು?
BP ಯಂತ್ರದಲ್ಲಿ ಅಂಕಿ ಅಂಶವು 120/80 ಯಿಂದ 129/80 mm Hg ಗಿಂತ ಹೆಚ್ಚಾಗಿದ್ದರೆ, ಅಧಿಕ ರಕ್ತದೊತ್ತಡದ ಸಮಸ್ಯೆ ಉದ್ಭವಿಸುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಹೃದಯ ಕಾಯಿಲೆಗಳ ಸಮಸ್ಯೆ ಎದುರಾಗುತ್ತೆ, ಇದು ಪುರುಷರಲ್ಲಿ ಬೋಳು ತಲೆ ಮತ್ತು ಅಕಾಲಿಕವಾಗಿ ಬಿಳಿಗೂದಲು ಸಮಸ್ಯೆಗೆ ಕಾರಣವಾಗುತ್ತದೆ. ಅನೇಕ ಸಂದರ್ಭಗಳಲ್ಲಿ, ಬೂದು ಕೂದಲು ಕೂಡ ತಲೆಯ ಮೇಲೆ ಕಂಡುಬರುತ್ತದೆ.
ಹೈ ಬಿಪಿ ಹಾಗೂ ಬಿಳಿ ಕೂದಲು ನಡುವಿನ ಸಂಬಂಧ
ನಾವು ಈ ಮೊದಲೇ ಹೇಳಿದಂತೆ ಅಧಿಕ ರಕ್ತದೊತ್ತದ ಇತರ ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಕಾರಣದಿಂದ ಚಿಕ್ಕ ವಯಸ್ಸಿನಲ್ಲಿಯೇ ಮಹಿಳೆಯರಿಗಿಂತ ಹೆಚ್ಚು ಪುರುಷರು ಬಿಳಿಗೂದಲು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಬಿಳಿಗೂದಲು ನಿಮ್ಮ ಅನಾರೋಗ್ಯದ ಸೂಚಕವು ಹೌದು. ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ ಬಿಳಿಕೂದಲುಗಳು ಕೂಡ ಕಾಣಿಸಿಕೊಳ್ಳುತ್ತವೆ ಮತ್ತು ಇದೆ ಕಾರಣದಿಂದ ಹೃದ್ರೋಗಗಳ ಅಪಾಯ ಕೂಡ ಹೆಚ್ಚಾಗುತ್ತದೆ.
ಹೃದ್ರೋಗಗಳನ್ನು ಬೆಳೆಯಲು ಬಿಡಬೇಡಿ
ಹೃದಯ ನಮ್ಮ ದೇಹದ ಒಂದು ಬಹುಮುಖ್ಯ ಅಂಗವಾಗಿದೆ. ನಾವು ಹುಟ್ಟಿದಾಗಿಂದ ನಮ್ಮ ಕೊನೆಯ ಉಸಿರು ಇರುವವರೆಗೂ ಕೂಡ ಅದು ಬಡಿದುಕೊಳ್ಳುತ್ತಲೇ ಇರುತ್ತದೆ. ಹೀಗಾಗಿ ಹೃದಯದ ಬಗ್ಗೆ ಕಾಳಜಿವಹಿಸುವುದು ತುಂಬಾ ಮುಖ್ಯವಾಗಿದೆ. ಎಣ್ಣೆಯುಕ್ತ ಆಹಾರವನ್ನು ತ್ಯಜಿಸಿ, ಆರೋಗ್ಯಕರ ಆಹಾರ ಆಯ್ದುಕೊಳ್ಳಿ. ದೈಹಿಕ ಚಟುವಟಿಕೆಗಳತ್ತ ಹೆಚ್ಚು ಗಮನ ಹರಿಸಿ.
ಹೃದ್ರೋಗದ ಲಕ್ಷಣಗಳು
>> ಎದೆಯಲ್ಲಿ ನೋವು
>> ಉಸಿರಾಟದಲ್ಲಿ ತೊಂದರೆ
>> ಹೃದಯ ಬಡಿತದಲ್ಲಿ ಏರಿಳಿತ
>> ಕಡಿಮೆ ರೂಮ್ ಟೆಂಪರೆಚರ್ ನಲ್ಲಿಯೂ ಬೆವರುವಿಕೆ
>> ಅಸ್ವಸ್ಥತೆ, ತಲೆ ಸುತ್ತುವಿಕೆ, ಆಯಾಸ ಇತ್ಯಾದಿಗಳು
ಇದನ್ನೂ ಓದಿ-Dangerous Cooking Oils: ಈ ಎಣ್ಣೆಗಳ ಸೇವನೆಯಿಂದ ಕ್ಯಾನ್ಸರ್ ಬರುತ್ತೆ... ಇಂದೇ ಅಂತರ ಕಾಯ್ದುಕೊಳ್ಳಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.