ಕೇವಲ ಒಂದು ತಿಂಗಳಲ್ಲಿ ʼಬಿಳಿ ಕೂದಲʼನ್ನು ಶಾಶ್ವತವಾಗಿ, ನೈಸರ್ಗಿಕವಾಗಿ ಕಪ್ಪಾಗಿಸುತ್ತೆ ʼಈ ಮನೆಮದ್ದುʼ
Natural black hair tips : ಹಲವರು ಆರೋಗ್ಯಕರ, ದಪ್ಪ ಕೂದಲು ಹೊಂದಲು ದಿನನಿತ್ಯ ಒಂದಲ್ಲ ಒಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ... ಆರೋಗ್ಯಕರ ಕೂದಲಿಗೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ದುಬಾರಿ ಉತ್ಪನ್ನಗಳನ್ನು ಜನರು ಖರೀದಿಸಿ ಬಳಸುತ್ತಾರೆ. ಆದರೆ ಅವುಗಳ ಬಳಕೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಹೊರತು ಕಡಿಮೆ ಮಾಡುವುದಿಲ್ಲ.. ಬನ್ನಿ ಇಂದು ನ್ಯಾಚುರಲ್ ಆಗಿ ಕೂದಲನ್ನು ಕಪ್ಪು ಮಾಡುವ ಟಿಪ್ಸ್ ತಿಳಿಯೋಣ..
Hair growth tips : ಉದ್ದ, ದಪ್ಪ ಕೂದಲು ಪ್ರತಿಯೊಬ್ಬರ ಕನಸು. ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ಹೆಚ್ಚಿನ ರಾಸಾಯನಿಕಗಳಿರುವ ವಿವಿಧ ಬಗೆಯ ಶಾಂಪೂ, ಕ್ರೀಮ್, ಹೇರ್ ಕಂಡೀಷನರ್ ಬಳಕೆ ಮಾಡ್ತಾರೆ.. ಆದರೆ ಇದರಿಂದ ಕೂದಲಿನ ಸಮಸ್ಯೆ ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗಲ್ಲ ಎನ್ನುತ್ತಾರೆ ತಜ್ಞರು. ಕೆಲವರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ.
ಕೂದಲು ಬೆಳೆಯದಿರಲು ಕಾರಣಗಳು:
ಆಹಾರ: ಕೂದಲು ಬೆಳವಣಿಗೆಗೆ ಪ್ರೋಟೀನ್‌ಗಳು, ವಿಟಮಿನ್ಗಳು (ಎ, ಬಿ, ಸಿ, ಡಿ, ಇ) ಖನಿಜಗಳು ಬಹಳ ಮುಖ್ಯ. ಹಣ್ಣುಗಳು, ತರಕಾರಿಗಳು, ಬೀಜಗಳು, ಗೋಧಿ, ಹಾಲು, ಮೊಟ್ಟೆಗಳಂತಹ ಆಹಾರವನ್ನು ಸೇವಿಸದಿರುವುದು ಕೂದಲಿನ ಸಮಸ್ಯೆಗೆ ಕಾರಣವಾಗಬಹುದು.
ಒತ್ತಡ: ಅತಿಯಾದ ಒತ್ತಡ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ. ಯೋಗ ಮತ್ತು ಧ್ಯಾನದ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.
ನಿದ್ರೆ: ಸಾಕಷ್ಟು ನಿದ್ರೆಯ ಕೊರತೆಯು ಕೂದಲಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ದಿನಕ್ಕೆ 7-8 ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಮುಖ್ಯ.
ಹಾರ್ಮೋನುಗಳು: ಹಾರ್ಮೋನ್ ಅಸಮತೋಲನ ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು.
ಶ್ಯಾಂಪೂಗಳು: ಎಲ್ಲಾ ಶ್ಯಾಂಪೂಗಳು ಎಲ್ಲಾ ರೀತಿಯ ಕೂದಲುಗಳಿಗೆ ಸೂಕ್ತವಲ್ಲ. ಇದರಿಂದ ಕೂದಲು ದುರ್ಬಲವಾಗುತ್ತದೆ. ನಿಮಗೆ ಸೂಕ್ತವಾಗುವ ಶಾಂಪೂ ಬಳಕೆ ಮಾಡಿ..
ಈ ಸಮಸ್ಯೆಯನ್ನು ಕಡಿಮೆ ಮಾಡಲು ಈ ಕೆಳಗೆ ಟಿಪ್ಸ್ ನೀಡಲಾಗಿದೆ. ಇದನ್ನು ನೈಸರ್ಗಿಕವಾಗಿ ಮನೆಯಲ್ಲಿಯೇ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು. ಅಲ್ಲದೆ, ಯಾವುದೇ ಅಡ್ಡಪರಿಣಾಮಗಳು ಸಹ ಜರುಗುವುದಿಲ್ಲ.. ಹಾಗಿದ್ರೆ ಈ ಹೇರ್ ಮಾಸ್ಕ್ ತಯಾರಿಸುವುದು ಹೇಗೆ..? ಬನ್ನಿ ನೋಡೋಣ.. ಕಾಫಿ ಪುಡಿ, ದಾಲ್ಚಿನ್ನಿ, ಜೇನುತುಪ್ಪದಂತಹ ಮನೆಮದ್ದುಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಹೇರ್ ಮಾಸ್ಕ್ ತಯಾರಿಸುವುದು ತುಂಬಾ ಸುಲಭ.
ಅಗತ್ಯವಿರುವ ವಸ್ತುಗಳು
2 ಚಮಚ ಕಾಫಿ ಪುಡಿ
1 ಚಮಚ ದಾಲ್ಚಿನ್ನಿ ಪುಡಿ
2 ಚಮಚ ಜೇನುತುಪ್ಪ
ಸ್ವಲ್ಪ ನೀರು
ಮಾಡುವ ವಿಧಾನ : ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರಿನೊಂದಿಗೆ ಕಾಫಿ ಪುಡಿ, ದಾಲ್ಚಿನ್ನಿ ಪುಡಿ, ಜೇನುತುಪ್ಪವನ್ನು ಬೆರೆಸಿ ನಯವಾಗಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿ ಮತ್ತು ಕೂದಲಿನ ಮೇಲೆ ಮಸಾಜ್ ಮಾಡಿ. 30 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಕಾಫಿಯಲ್ಲಿರುವ ಕೆಫೀನ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ದಾಲ್ಚಿನ್ನಿ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ಕೂದಲಿನ ಆರೋಗ್ಯಕ್ಕೆ ಮುಖ್ಯ. ಜೇನುತುಪ್ಪವು ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.