ʼಮೊದಲ ರಾತ್ರಿʼ ನವದಂಪತಿಗೆ ಕುಡಿಯಲು ಕೇಸರಿ ಹಾಲನ್ನೇ ಏಕೆ ಕೊಡ್ತಾರೆ..! ʼಕಾಮಸೂತ್ರʼದಲ್ಲಿದೆ ಕಾರಣ..
Kesari Milk health Benefits : ಭಾರತದಲ್ಲಿ ವಿವಾಹದ ಸಮಯದಲ್ಲಿ ವಿವಿಧ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಅದೇ ರೀತಿ ಮದುವೆಯಾದ ಮೊದಲ ರಾತ್ರಿ ಕೇಸರಿ ಮಿಶ್ರಿತ ಹಾಲನ್ನು ನವ ದಂಪತಿಗೆ ಕುಡಿಯಲು ಕೊಡುವುದು ಸಂಪ್ರದಾಯ. ಹಿಂದಿನಿಂದಲೂ ಈ ಸಂಪ್ರದಾಯವನ್ನು ಜನರು ಅನುಸರಿಸುತ್ತಿದ್ದಾರೆ. ಆದರೆ ಇದರ ಹಿಂದಿರುವ ಕಾರಣದ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿಲ್ಲ.
First night rituals : ಮದುವೆಯಾದ ಮೊದಲ ರಾತ್ರಿ ವಧುವರರಿಗೆ ಕುಡಿಯಲು ಹಾಲು ನೀಡುವುದು ಸಂಪ್ರದಾಯ. ಈ ಪದ್ಧತಿಯ ಹಿಂದಿನ ನಿಜವಾದ ಕಾರಣ ಹಲವಾರು ಜನರಿಗೆ ಇಂದಿಗೂ ತಿಳಿದಿಲ್ಲ. ಭಾರತದಲ್ಲಿ ವಿವಾಹದ ಸಂದರ್ಭದಲ್ಲಿ ವಿವಿಧ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ ಮತ್ತು ಆಚರಿಸಲಾಗುತ್ತದೆ. ಅದೇ ರೀತಿ ಮದುವೆಯಾದ ಮೊದಲ ರಾತ್ರಿ ಕೇಸರಿ ಮಿಶ್ರಿತ ಹಾಲನ್ನು ನವ ದಂಪತಿಗೆ ಕುಡಿಯಲು ನೀಡಲಾಗುತ್ತದೆ. ಬನ್ನಿ ಇದರ ಹಿಂದಿರುವ ನಿಜವಾದ ಕಾರಣವನ್ನು ಅರಿಯೋಣ.
ಮದುವೆಯಾದ ಮೊದಲ ರಾತ್ರಿಯಿಂದಲೇ ವಧು-ವರರು ಪತಿ-ಪತ್ನಿಯಾಗಿ ತಮ್ಮ ಸಂಸಾರಿಕ ಜೀವನವನ್ನು ಪ್ರಾರಂಭಿಸುತ್ತಾರೆ. ಮದುವೆಯ ನಂತರ ಮಾತ್ರ ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ. ವರ ಮತ್ತು ವಧುವಿನ ಜೀವನದ ಮಾಧುರ್ಯವನ್ನು ಕಾಪಾಡಲು, ಮದುವೆಯ ಮೊದಲ ರಾತ್ರಿ, ಕೇಸರಿಯೊಂದಿಗೆ ಸಿಹಿ ಹಾಲನ್ನು ನವದಂಪತಿಗೆ ನೀಡಲಾಗುತ್ತದೆ. ಹಿಂದೂ ಧರ್ಮದಲ್ಲಿ, ಕೇಸರಿ ಮತ್ತು ಹಾಲನ್ನು ಮಂಗಳಕರ ಸಂದರ್ಭಗಳಲ್ಲಿ ಬಳಸಲಾಗುತ್ತದೆ.
ಇದನ್ನೂ ಓದಿ: ಕಾಫಿಗೆ ತೆಂಗಿನೆಣ್ಣೆ ಸೇರಿಸಿ ಕುಡಿದರೆ ಈ ಎಲ್ಲಾ ಕಾಯಿಲೆಗಳು ಮಾಯವಾಗುತ್ತವೆ!
ಕೇಸರಿಯನ್ನು ಶತಮಾನಗಳಿಂದಲೂ ಕಾಮೋತ್ತೇಜಕವಾಗಿಯೂ ಬಳಸಲಾಗುತ್ತಿದೆ. ಹಾಲಿಗೆ ಕೇಸರಿ ಸೇರಿಸಿ ಕುಡಿಯುವುದರಿಂದ ನವ ದಂಪತಿಗಳಿಗೆ ಆಯಾಸ ಮತ್ತು ಒತ್ತಡ ನಿವಾರಣೆಯಾಗುತ್ತದೆ. ಅಲ್ಲದೆ, ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿ ಸುಧಾರಿಸುತ್ತದೆ. ಅದೇ ಸಮಯದಲ್ಲಿ, ದೇಹದಲ್ಲಿ ಹೆಚ್ಚಿನ ಈಸ್ಟ್ರೊಜೆನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ, ಇದರಿಂದಾಗಿ ದೇಹದಲ್ಲಿ ಶಕ್ತಿ ಉತ್ಪತ್ತಿಯಾಗುತ್ತದೆ.
ಪ್ರಾಚೀನ ಗ್ರಂಥಗಳ ಪ್ರಕಾರ ಕಾಮಸೂತ್ರದಲ್ಲಿ ಹಾಲು ಕುಡಿಯುವುದನ್ನು ಉಲ್ಲೇಖಿಸಲಾಗಿದೆ. ಹಾಲು ಕುಡಿಯುವುದರಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಕಾಮಸೂತ್ರವು ಹಾಲಿಗೆ ಕೇಸರಿ, ಜೇನುತುಪ್ಪ ಮತ್ತು ಅರಿಶಿನವನ್ನು ಸೇರಿಸುವುದನ್ನು ಉಲ್ಲೇಖಿಸುತ್ತದೆ. ಈ ಎಲ್ಲಾ ಆರೋಗ್ಯ ದೃಷ್ಟಿಯಿಂದಾಗಿ ಮದುವೆಯ ಮೊದಲ ರಾತ್ರಿ ನವ ಜೋಡಿಗೆ ಕೇಸರಿ ಹಾಲು ಕುಡಿಯಲು ನೀಡುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.