ವಯಸ್ಸಾದಂತೆ ತೂಕ ಇಳಿಸಿಕೊಳ್ಳಲು ಮಹಿಳೆಯರಿಗೆ ಕಷ್ಟ...! ಇಲ್ಲಿದೆ ಕಾರಣ
Menopause weight gain : ವಯಸ್ಸಾದಂತೆ ತೂಕ ಕಡಿಮೆ ಮಾಡಿಕೊಳ್ಳುವುದು ವಿಶೇಷವಾಗಿ ಮಹಿಳೆಯರಿಗೆ ಸವಾಲಾಗುತ್ತದೆ. ನಿಮಗೆ ವಯಸ್ಸಾದಂತೆ, ದೇಹದ ಕಾರ್ಯಕ್ಷಮತೆ, ಆಹಾರ, ಅಭ್ಯಾಸಗಳು ಮತ್ತು ನಿದ್ರೆಯ ಸಮಯ ಸಾಮಾನ್ಯವಾಗಿ ಬದಲಾಗುತ್ತವೆ. ಅಲ್ಲದೆ, ಅವುಗಳೇ ನಿಮ್ಮ ತೂಕವನ್ನು ಹೆಚ್ಚಿಸಲು ಕಾರಣವಾಗುತ್ತವೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ.
Menopause symptoms : ಸ್ಥೂಲಕಾಯತೆಯು ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ವಯಸ್ಸಾದಂತೆ ತೂಕ ಇಳಿಸುವುದು ಮಹಿಳೆಯರಿಗೆ ಸವಾಲಾಗಿ ಪರಿಣಮಿಸುತ್ತದೆ. ಇದಕ್ಕೆ ಕಾರಣಗಳೇನು ಎಂಬುದನ್ನು ವಿವರವಾಗಿ ತಿಳಿಯೋಣ.
ಹೌದು.. ಮಹಿಳೆ 40 ಮತ್ತು 50 ರ ಹರೆಯವನ್ನು ತಲುಪಿದಾಗ ನಿರ್ಣಾಯಕ ಹಂತದ ಮೂಲಕ ಹೋಗುತ್ತಾಳೆ. ಋತುಬಂಧವು ಸಾಮಾನ್ಯ ಜೈವಿಕ ಹಂತವಾಗಿದೆ. ಇದು ಮಹಿಳೆಯ ದೇಹ, ಹಸಿವು ಮತ್ತು ಹಾರ್ಮೋನುಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುತ್ತದೆ. ಋತುಬಂಧದ ಸಮಯದಲ್ಲಿ, ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವು ಕಡಿಮೆಯಾಗುತ್ತದೆ. ಇದು ಕೊಬ್ಬಿನ ಹೆಚ್ಚಳಕ್ಕೆ ಕಾರಣವಾಗಬಹುದು.
ಇದನ್ನೂ ಓದಿ: ವಿಜಯದಶಮಿಯಂದು ʼಬನ್ನಿ ಮರʼದ ಪೂಜೆ ಮಾಡ್ತಾರೆ ಏಕೆ ಗೊತ್ತಾ..? ರೋಚಕ ಕತೆ ಇಲ್ಲಿದೆ
ನಿಮಗೆ ವಯಸ್ಸಾದಂತೆ ನಿಮ್ಮ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. 30 ವಯಸ್ಸನ್ನು ದಾಟಿದ ನಂತರ ಜಯಾಪಚಯ ಕ್ರಿಯೆ ನಿಧಾನವಾಗುತ್ತದೆ. ನೀವು ಸರಿಯಾದ ಆಹಾರವನ್ನು ಸೇವಿಸದಿದ್ದರೆ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡದಿದ್ದರೆ, ಅದು ತೂಕ ಹೆಚ್ಚಾಗಲು ಕಾರಣವಾಗಬಹುದು. ಈ ತೂಕವನ್ನು ಕಳೆದುಕೊಳ್ಳಲು ಕಷ್ಟವಾಗುತ್ತದೆ.
ವಯಸ್ಸಾದಂತೆ ರಾತ್ರಿಯಲ್ಲಿ ಮಲಗಲು ಕಷ್ಟವಾಗುತ್ತದೆ. ಇದು ವಯಸ್ಸಿನ ವಿಷಯ. 5 ಅಥವಾ 6 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಲು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಕಳಪೆ ನಿದ್ರೆ ಕೂಡ ತೂಕ ಹೆಚ್ಚಾಗಲು ಕಾರಣವಾಗಬಹುದು.
ಇದನ್ನೂ ಓದಿ: ಬಿಳಿ ಕೂದಲು ಇರುವವರು ಹೀಗೆ ಮಾಡಿದರೆ 20 ದಿನದಲ್ಲಿ ಕಪ್ಪು ಕೂದಲು ಬರುವುದು ಖಚಿತ!
ಅಲ್ಲದೆ ನಿಮಗೆ ವಯಸ್ಸಾದಂತೆ, ನಿಮ್ಮ ಜೀವನಶೈಲಿ ಬದಲಾವಣೆಯಾಗುತ್ತದೆ, ನಿಮ್ಮ ಶಕ್ತಿಯ ಮಟ್ಟವು ಕಡಿಮೆಯಾಗಬಹುದು, ದಿನವಿಡೀ ಕೆಲಸ ಮಾಡಲು ಸಾಧ್ಯವಾಗದಿರಬಹುದು. ಆದರೆ ವ್ಯಾಯಾಮದ ಮೂಲಕ ನೀವು ಸಕ್ರಿಯವಾಗಿರಬಹುದು. ತೂಕ ಇಳಿಸಿಕೊಳ್ಳಲು ಬಯಸಿದರೆ, ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಅಂದರೆ ವಾರದಲ್ಲಿ ಕನಿಷ್ಠ ಮೂರು ದಿನ ವ್ಯಾಯಾಮ ಅಥವಾ ವಾಕಿಂಗ್ ಮಾಡಲೇಬೇಕು.
ವಯಸ್ಸಾದಂತೆ ಸ್ನಾಯುಗಳ ನಷ್ಟಕ್ಕೆ ಕಾರಣವಾಗುತ್ತದೆ. ಇದು ಕೊಬ್ಬಿನ ಹೆಚ್ಚಳಕ್ಕೂ ಕಾರಣವಾಗುತ್ತದೆ. ಕ್ಯಾಲೊರಿಗಳನ್ನು ಸುಡುವಲ್ಲಿ ಸ್ನಾಯುಗಳು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ಇದನ್ನು ತಪ್ಪಿಸಲು, ದೈಹಿಕ ತರಬೇತಿಯನ್ನು ನಿಯಮಿತವಾಗಿ ಮಾಡುತ್ತೀರಿ. ವ್ಯಾಯಾಮವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.