Fertility testing before trying to get pregnant: ಆರೋಗ್ಯ ಸಮಸ್ಯೆಗಳು ಅಥವಾ ತೊಡಕುಗಳನ್ನು ತಪ್ಪಿಸಲು, ಆರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಮಾಡಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಈ ಆರೋಗ್ಯ ತಪಾಸಣೆಗಳನ್ನು ನಡೆಸುವ ಸಂದರ್ಭದಲ್ಲಿ ಪುನರುತ್ಪಾದ ಆರೋಗ್ಯದಂತಹ ಅಂಶಗಳನ್ನು ನಿರ್ಲಕ್ಷಿಸಲಾಗುತ್ತದೆ. ಅಂದರೆ, ಈ ಅಂಶಗಳಿಗೆ ಹೆಚ್ಚಿನ ಮಹತ್ವವನ್ನು ನೀಡುವುದಿಲ್ಲ. ವಿಶ್ವದಾದ್ಯಂತ ಫಲವತ್ತತೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಪುರುಷರ ಆರೋಗ್ಯ ತಪಾಸಣೆ ವೇಳೆಯಲ್ಲಿ ಫಲವತ್ತತೆಯ ತಪಾಸಣೆಯನ್ನು ಮಾಡಲು ಪ್ರಾಮುಖ್ಯತೆ ನೀಡುವುದು ನಿರ್ಣಾಯಕವಾಗಿದೆ.


COMMERCIAL BREAK
SCROLL TO CONTINUE READING

ಪುರುಷರಿಗೆ ನಿಯಮಿತ ಫಲವತ್ತತೆ ತಪಾಸಣೆ ಮಾಡಿಸಿಕೊಳ್ಳಲು ಈ ಕೆಳಗಿನ ವಿಧಾನಗಳು ಉಪಯುಕ್ತವಾಗಬಹುದು:


ಸಂಭಾವ್ಯ ಸಮಸ್ಯೆಗಳ ಆರಂಭಿಕ ಪತ್ತೆ: ಪುರುಷರಿಗೆ ಫಲವತ್ತತೆ ಪರೀಕ್ಷೆ (ವೀರ್ಯ ವಿಶ್ಲೇಷಣೆ) ಮಾಡಿಸುವುದರಿಂದ ಅವರಲ್ಲಿ ಕಡಿಮೆ ವೀರ್ಯ ಪ್ರಮಾಣ, ಕಳಪೆ ವೀರ್ಯ ಚಲನಶಿಲತೆ ಅಥವಾ ಅಸಹಜ ವೀರ್ಯ ಪ್ರಮಾಣದಂತಹ ಸಂಭಾವ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಇದರ ಆಧಾರದಲ್ಲಿ ಅಂತಹ ವ್ಯಕ್ತಿಗಳಿಗೆ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಮತ್ತು ಅವರ ಭವಿಷ್ಯವನ್ನು ಯೋಜಿಸಲು ಸಮಯಾವಕಾಶವನ್ನು ನೀಡಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: ನಿಷ್ಪ್ರಯೋಜಕ ಎಂದು ಎಸೆಯುವ ಈ ನೀರನ್ನು ಕೂದಲಿಗೆ ಹಚ್ಚಿ ! ವಾರದಲ್ಲೇ ಸಿಗುವುದು ಕೂದಲು ಉದುರುವುದಕ್ಕೆ ಪರಿಹಾರ


ಒಟ್ಟಾರೆ ಆರೋಗ್ಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು: ಈ ಫಲವತ್ತತೆಯ ಆರೋಗ್ಯವು ವೀರ್ಯ ಪರೀಕ್ಷೆ ಮತ್ತು ಹಾರ್ಮೋನ್ ಮೌಲ್ಯಮಾಪನದಂತಹ ವಿಭಿನ್ನವಾದ ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳನ್ನು ಒಳಗೊಂಡಿರುತ್ತದೆ. ಇದು ಫಲವತ್ತತೆಯ ಆರೋಗ್ಯದ ಬಗ್ಗೆ ಮಾತ್ರವಲ್ಲದೇ ನಿಮ್ಮ ಸಾಮಾನ್ಯ ಆರೋಗ್ಯದ ಬಗ್ಗೆ ಸಮಗ್ರ ರೀತಿಯಲ್ಲಿ ಪ್ರತಿಕ್ರಿಯೆಯನ್ನು ನೀಡುತ್ತದೆ.


ಮಾನಸಿಕ ಯೋಗಕ್ಷೇಮ: ತಂದೆಯಾಗಲು ಬಯಸುವ ಪುರುಷರಿಗೆ ಮಾನಸಿಕ ಯೋಗಕ್ಷೇಮದಲ್ಲಿನ ವ್ಯತ್ಯಯವು ಗರ್ಭಧಾರಣೆಯ ಅಸಮರ್ಥತೆಯು ನಕಾರಾತ್ಮಕ ಭಾವನಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಹಿನ್ನೆಲೆಯಲ್ಲಿ ಫಲವತ್ತತೆಯ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಈ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ರೀತಿ ಅವರಲ್ಲಿ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಭರವಸೆ ಮೂಡುವಂತೆ ಮಾಡುತ್ತದೆ. ಇದು ಅವರ ಕುಟುಂಬವನ್ನು ವಿಸ್ತರಣೆ ಮಾಡಿಕೊಳ್ಳಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸುತ್ತದೆ.


ಮಹಿಳೆಯರಿಗೆ ನಿಯಮಿತ ಫಲವತ್ತತೆ ತಪಾಸಣೆ ಮಾಡಿಸಿಕೊಳ್ಳಲು ಈ ಕೆಳಗಿನ ವಿಧಾನಗಳು ಉಪಯುಕ್ತವಾಗಬಹುದು


ಸಂಭಾವ್ಯ ಫಲವತ್ತತೆ ಸಮಸ್ಯೆಗಳನ್ನು ಗುರುತಿಸುವುದು: ಮಹಿಳೆಯರಲ್ಲಿ ಹಾರ್ಮೋನ್ ಗಳ ಮಟ್ಟದ ಪ್ರಮಾಣವನ್ನು ಪರಿಶೀಲಿಸುವುದು, ಅಂಡಾಶಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವುದು ಮತ್ತು ಸಂತಾನೋತ್ಪತ್ತಿ ಅಂಗಗಳನ್ನು ಪರೀಕ್ಷೆ ಮಾಡುವುದು ಸೇರಿದಂತೆ ಇನ್ನಿತರೆ ತಪಾಸಣೆಗಳು ಮಹಿಳೆಯರಿಗೆ ನಡೆಸುವ ಫಲವತ್ತತೆಯ ಪರೀಕ್ಷೆಯಲ್ಲಿ ಸೇರಿರುತ್ತವೆ. ಪಾಲಿಸ್ಟಿಕ್ ಓವರಿ ಸಿಂಡ್ರೋಂ (PCOS) ನಂತಹ ಹಾರ್ಮೋನ್ ಗಳ ಅಸಮತೋಲನದಂತಹ ಸಮಸ್ಯೆಗಳನ್ನು ಪತ್ತೆ ಮಾಡಲು ಈ ಪರೀಕ್ಷೆ ಸಹಾಯ ಮಾಡುತ್ತದೆ. ಬಹುಮುಖ್ಯವಾಗಿ, ಋತುಚಕ್ರದ ಯಾವುದೇ ದಿನದಲ್ಲಿ ನಡೆಸಬಹುದಾದ ಆ್ಯಂಟಿ ಮುಲೇರಿಯನ್ ಹಾರ್ಮೋನ್ (AMH) ಪರೀಕ್ಷೆಯು ಮಹಿಳೆಯಲ್ಲಿನ ಮೊಟ್ಟೆಯ ರೂಪುರೇಶೆ ಪ್ರಮಾಣವನ್ನು ನಿರ್ಣಯ ಮಾಡಲು ಸಹಕಾರಿಯಾಗುತ್ತದೆ. 2.5 ರಿಂದ 4 ರಷ್ಟು ಎಎಂಎಚ್ ಅನ್ನು ಹೊಂದಿರುವ ಮಹಿಳೆಯರು ಸ್ವಲ್ಪ ಸಮಯದ ನಂತರದಲ್ಲಿ ಅನಗತ್ಯವಾಗಿ ಒತ್ತಡವನ್ನು ತೆಗೆದುಕೊಳ್ಳದೇ ತಮ್ಮ ಗರ್ಭಧಾರಣೆಯನ್ನು ನಿರೀಕ್ಷಿಸಬಹುದಾಗಿದೆ ಅಥವಾ ಗರ್ಭಧಾರಣೆಗೆ ಯೋಜನೆಯನ್ನು ರೂಪಿಸಬಹುದಾಗಿದೆ. ಇನ್ನು ನಿಗದಿತ ಅಂದರೆ 2.5 ಕ್ಕಿಂತ ಕಡಿಮೆ ಎಎಂಎಚ್ ಹೊಂದಿರುವ ಮಹಿಳೆಯರು ತಕ್ಷಣವೇ ಗರ್ಭಧಾರಣೆ ಬಗ್ಗೆ ಯೋಜನೆ ರೂಪಿಸಬೇಕು ಅಥವಾ ನಂತರದಲ್ಲಿ ಗರ್ಭಧಾರಣೆಗೆ ಯೋಜನೆ ರೂಪಿಸುತ್ತಿದ್ದರೆ ತಕ್ಷಣವೇ ತಮ್ಮ ಮೊಟ್ಟೆಗಳನ್ನು ಫ್ರೀಜ್ ಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ.


ಈ ಪರಿಸ್ಥಿತಿಗಳ ಆರಂಭಿಕ ಪತ್ತೆಯು ಸಕಾಲಿಕವಾಗಿ ಚಿಕಿತ್ಸೆ ಮತ್ತು ಪರಿಸ್ಥಿತಿಯನ್ನು ಸುಧಾರಣೆ ಮಾಡಿಕೊಳ್ಳಲು ಅವಕಾಶಗಳನ್ನು ಕಲ್ಪಿಸುತ್ತದೆ.


ನಿರ್ಧಾರ ಕೈಗೊಳ್ಳಲು ಬಲ ನೀಡುತ್ತದೆ: ಭವಿಷ್ಯದ ಕುಟುಂಬ ನಿರ್ಮಾಣದ ಬಗ್ಗೆ ಯೋಜನೆಗಳನ್ನು ಹೊಂದಿರುವ ಮಹಿಳೆಯರಿಗೆ ಈ ಪರೀಕ್ಷೆಯ ಮೂಲಕ ಅವರಲ್ಲಿ ಫಲವತ್ತತೆಯ ಪರಿಸ್ಥಿತಿಯನ್ನು ತಿಳಿದುಕೊಂಡು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಅವರಿಗೆ ಅನುವು ಮಾಡಿಕೊಡುತ್ತದೆ.


ಮನಸಿಗೆ ಶಾಂತಿ: ಈ ಫಲವತ್ತತೆಯ ಪರೀಕ್ಷೆ ಮಾಡಿಸುವುದರಿಂದ ಮಹಿಳೆಯರಿಗೆ ಮನಸಿಗೆ ಶಾಂತಿ ಮತ್ತು ನಿರಾಳತೆ ಉಂಟಾಗುತ್ತದೆ. ಅವರಲ್ಲಿನ ಸಂತಾನೋತ್ಪತ್ತಿ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದ ಬಗ್ಗೆ ಭರವಸೆ ಮೂಡುವಂತೆ ಮಾಡುತ್ತದೆ. ಭಾವನಾತ್ಮಕತೆಯ ಬೆಂಬಲವು ನಿಯಮಿತ ಫಲವತ್ತತೆ ತಪಾಸಣೆಯ ಬಹು ದೊಡ್ಡ ಪ್ರಯೋಜನವಾಗಿರುತ್ತದೆ.


ಇದನ್ನೂ ಓದಿ: ಕೇವಲ 15 ದಿನಗಳಲ್ಲಿ ಬಾಡಿ ಫ್ಯಾಟ್ ಕರಗಿಸಿ ದೇಹವನ್ನು ತೆಳ್ಳಗಾಗಿಸುತ್ತದೆ ಈ ಪಾನೀಯಗಳು


ಯಾವುದೇ ಆರೋಗ್ಯ ಸಮಸ್ಯೆಯ ಆರಂಭಿಕ ಪತ್ತೆ ಮತ್ತು ಆರೋಗ್ಯಕರವಾದ ಸಂತಾನೋತ್ಪತ್ತಿ ಉಂಟಾಗಲು ಚಿಕಿತ್ಸೆ ಮೂಲಕ ಫಲವತ್ತತೆ (ಫರ್ಟಿಲಿಟಿ) ತಜ್ಞರು ಸಹಾಯ ಮಾಡಬಹುದು. ನಿಮ್ಮ ಫಲವತ್ತತೆಯ ಆರೋಗ್ಯವನ್ನು ಪರೀಕ್ಷೆ ಮಾಡಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಸಂದರ್ಭದಲ್ಲಿ ಇತರ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಲು ನೆರವಾಗುತ್ತದೆ. ಅಲ್ಲದೇ ಜನರು ತಮ್ಮ ಕುಟುಂಬದ ಭವಿಷ್ಯವನ್ನು ರೂಪಿಸುವ ಅಥವಾ ಯೋಜನೆ ರೂಪಿಸುವ ಸಂದರ್ಭದಲ್ಲಿ ಜವಾಬ್ದಾರಿಯುತವಾದ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಫಲವತ್ತತೆ ಆರೋಗ್ಯ ತಪಾಸಣೆ ಮತ್ತು ಅದರ ಬಗೆಗಿನ ಅರಿವು ಇಂದಿನ ಅಗತ್ಯವಾಗಿದೆ.


ಲೇಖಕರು: ಡಾ.ರುಬಿನಾ ಪಂಡಿತ್, ಫರ್ಟಿಲಿಟಿ ಕನ್ಸಲ್ಟೆಂಟ್, ನೊವಾ ಐವಿಎಫ್ ಫರ್ಟಿಲಿಟಿ, ಬಸವೇಶ್ವರ ನಗರ, ಬೆಂಗಳೂರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.