ನವದೆಹಲಿ:ಚಳಿಗಾಲದಲ್ಲಿ ವಿಪರೀತ ಚಳಿಯಿಂದ ಪಾರಾಗಲು, ಸ್ವಲ್ಪ ಬ್ರಾಂಡಿ ಅಥವಾ ರಮ್ ಕುಡಿಯಬೇಕು ಎಂದು ನಾವು ಹಲವು ವರ್ಷಗಳಿಂದ ಕೇಳುತ್ತಲೇ ಇದ್ದೇವೆ. ಇದು ದೇಹದಲ್ಲಿನ ಉಷ್ಣತೆಯನ್ನು ಹೆಚ್ಚಿಸಿ, ಚಳಿ ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ. ಆದರೆ ಇದು ನಿಜವೇ? ಹಲವು ಸಂಶೋಧನೆಗಳು ಇದಕ್ಕೆ ಸೈ ಎಂದಿವೆ. ಆದರೆ, ಸ್ವಲ್ಪ ಪ್ರಮಾಣದ ಬ್ರಾಂಡಿ ಅಥವಾ ರಮ್ ಸೇವನೆ ಮಾತ್ರ ಮಾಡಬೇಕು ಎಂದಿವೆ. ಅಷ್ಟೇ ಅಲ್ಲ ಸ್ವಲ್ಪ ಪ್ರಮಾಣದ ಬ್ರಾಂಡಿ / ರಮ್ ಸೇವನೆ ಕೀಲು ನೋವನ್ನು ಸಹ ನಿವಾರಿಸುತ್ತದೆ ಎಂದೂ ಸಹ ಹೇಳಲಾಗಿದೆ. ಅದರಲ್ಲೂ ವಿಶೇಷವಾಗಿ ಕೀಲು ನೋವಿನಿಂದ ಬಳಲುತ್ತಿರುವ ಜನರಲ್ಲಿ ಇದು ತುಂಬಾ ಸಹಕಾರಿಯಾಗಿದೆ ಎಂದು ಸಂಶೋಧನೆ ಹೇಳಿದೆ.


COMMERCIAL BREAK
SCROLL TO CONTINUE READING

ಚಳಿಗಾಲದಲ್ಲಿ ಹಾರ್ಟ್ ಅಟ್ಯಾಕ್ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ರಮ್ ಮತ್ತು ಬ್ರಾಂಡಿ ಸೇವನೆ ಚಳಿಗಾಲದಲ್ಲಿ  ಹೃದಯವನ್ನು ಕಾಪಾಡುವಲ್ಲಿ ತುಂಬಾ ಸಹಕಾರಿಯಾಗಿದೆ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. ರಮ್ ಸೇವನೆಯಿಂದ ರಕ್ತನಾಳಗಳಲ್ಲಿ  ಬ್ಲಾಕೇಜ್ ಸಾಧ್ಯತೆ ಕಡಿಮೆಯಾಗುತ್ತದೆ ಎನ್ನಲಾಗಿದೆ.


ಹೌದು, ಚಳಿಗಾಲದಲ್ಲಿ ಆರಾಮ ಸಿಗುತ್ತದೆ
ರಮ್-ಬ್ರಾಂಡಿ ಸೇವನೆಯು ದೇಹವನ್ನು ಬೆಚ್ಚಗಾಗಿಸುತ್ತದೆ. ಆದರೆ, ಅದು ಸ್ವಲ್ಪ ಸಮಯದವರೆಗೆ ಮಾತ್ರ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. ಬ್ರಾಂಡಿ ಆಂಟಿಇನ್ಫ್ಲಾಮೇಟರಿ ಗುಣಗಳನ್ನು ಹೊಂದಿದ್ದು, ಇದು ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ. ಇದರ ಬಳಕೆಯು ನೆಗಡಿಯ ಸಾಮಾನ್ಯ ಸಮಸ್ಯೆಯನ್ನು ನಿವಾರಿಸುತ್ತದೆ.


ಬ್ರಾಂಡಿಯ ಲಾಭಗಳು
ಅನೇಕ ಬಾರಿ, ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ಅಥವಾ ಹುಳುಕಾದ ಹಲ್ಲುಗಳ ಕಾರಣ  ಹಲ್ಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬ್ರಾಂಡಿ ಬಹಳ ಸಹಕಾರಿಯಾಗಿದೆ ಎನ್ನಲಾಗಿದೆ. ಹಲ್ಲುನೋವು ಬಂದಾಗಲೆಲ್ಲಾ ಹತ್ತಿಯನ್ನು ಬ್ರಾಂಡಿಯಲ್ಲಿ ನೆನೆಸಿ ನೋವು ಉಂಟು ಮಾಡುತ್ತಿರುವ ಹಲ್ಲಿಗೆ ಹಚ್ಚಿ. ಬ್ರಾಂಡಿ ಬಾಯಿಗೆ ಸಂಬಂಧಿಸಿದ ಹಲವು ಕಾಯಿಲೆಗಳನ್ನು ಸಹ ಗುಣಪಡಿಸುತ್ತದೆ. ಇದು ಬಾಯಿಯಲ್ಲಿ ಕಂಡುಬರುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ, ಇದು ಬಾಯಿಯ ವಾಸನೆ, ಹಲ್ಲುನೋವು ಮತ್ತು ಕೊಳೆತವನ್ನು ನಿವಾರಿಸುತ್ತದೆ.