Winter foods: ಚಳಿಗಾಲದ ರೋಗಗಳಿಂದ ದೂರವಿರಲು ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ
Winter Season Foods: ಸಂಧಿವಾತ ರೋಗಿಗಳು ಚಳಿಗಾಲದಲ್ಲಿ ತುಂಬಾ ತೊಂದರೆ ಅನುಭವಿಸುತ್ತಾರೆ. ಹೀಗಾಗಿ ಅವರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ನೀವು ಕೆಲವು ಆಹಾರಗಳಿಂದ ದೂರವಿದ್ದರೆ ಇದಕ್ಕೆ ಪರಿಹಾರ ದೊರೆಯುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ನವದೆಹಲಿ: ಯೂರಿಕ್ ಆಸಿಡ್ ಸಮಸ್ಯೆ ಇರುವವರು ಚಳಿಗಾಲದಲ್ಲಿ ತುಂಬಾ ಚಿಂತಿತರಾಗುತ್ತಾರೆ. ಏಕೆಂದರೆ ಪ್ರತಿದಿನ ದೇಹದಲ್ಲಿ ಎಲ್ಲೋ ಒಂದು ಕಡೆ ನೋವು ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ,ನೀವು ಚಳಿಗಾಲದಲ್ಲಿ ಕೆಲ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಈ ಋತುವಿನಲ್ಲಿ ನೀವು ಕೆಲವು ಆಹಾರಗಳಿಂದ ದೂರವಿದ್ದರೆ ಇದಕ್ಕೆ ಪರಿಹಾರ ಪಡೆಯಬಹುದು. ದೇಹದಲ್ಲಿ ಯೂರಿಕ್ ಆಸಿಡ್ ಅಧಿಕವಾಗಿದ್ದರೆ ನಿಮಗೆ ತೊಂದರೆ ತಪ್ಪಿದಲ್ಲ. ಇದರಿಂದ ನೀವು ಮೂತ್ರಪಿಂಡ ಮತ್ತು ಹೃದಯದ ಸಮಸ್ಯೆಗೆ ತುತ್ತಾಗಬಹುದು. ಹೀಗಾಗಿಯೇ ನೀವು ಕೆಲವು ಆಹಾರಗಳಿಂದ ದೂರವಿರಬೇಕು.
ಯೂರಿಕ್ ಆಮ್ಲದಿಂದಾಗುವ ಸಮಸ್ಯೆಗಳು
ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದರೆ ನಿಮಗೆ ಅನೇಕ ರೀತಿಯ ಅಪಾಯವುಂಟಾಗುತ್ತದೆ. ಯೂರಿಕ್ ಆಮ್ಲವು ಕೀಲುಗಳ ಸುತ್ತಲೂ ಸಂಗ್ರಹವಾಗುವ ಸ್ಥಿತಿಯಾಗಿದೆ. ಇದು ತೀವ್ರ ತರಹದ ನೋವನ್ನು ಉಂಟುಮಾಡುತ್ತದೆ. ಏಕೆಂದರೆ ಯೂರಿಕ್ ಆಮ್ಲದಿಂದ ಸಣ್ಣ ಹರಳುಗಳು ರೂಪುಗೊಳ್ಳುತ್ತವೆ, ಇದು ಕೀಲುಗಳ ಸುತ್ತಲೂ ತೀವ್ರವಾದ ಬಿಗಿತವನ್ನು ಉಂಟುಮಾಡುತ್ತದೆ. ಈ ಹರಳುಗಳು ಕೆಲವೊಮ್ಮೆ ಮೂತ್ರಪಿಂಡ ಮತ್ತು ಹೃದಯವನ್ನು ತಲುಪಬಹುದು, ಇದು ಗಂಭೀರ ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತದೆ.
ಇದನ್ನೂ ಓದಿ: Men Health : ಪುರುಷರ ಈ ಸಮಸ್ಯೆಗೆ ಹಾಲು ಮತ್ತು ಖರ್ಜೂರದಲ್ಲಿದೆ ಮದ್ದು
ಸಕ್ಕರೆ ಪಾನೀಯಗಳಿಂದ ದೂರವಿರಿ
ಚಳಿಗಾಲದಲ್ಲಿ ಹೆಚ್ಚು ಸಿಹಿ ಪಾನೀಯಗಳನ್ನು ಸೇವಿಸಬೇಡಿ. ಏಕೆಂದರೆ ಇವುಗಳಲ್ಲಿ ಫ್ರಕ್ಟೋಸ್ ಅಧಿಕವಾಗಿರುತ್ತದೆ. ಇದು ನಿಮಗೆ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿಯೇ ನೀವು ಶೀತ ವಾತಾವರಣದಲ್ಲಿ ಸಕ್ಕರೆಯ ಎಲ್ಲಾ ರೀತಿಯ ಪಾನೀಯಗಳಿಂದ ದೂರವಿರಬೇಕು.
ವೈನ್ ಮತ್ತು ಬಿಯರ್
ಇನ್ನು ಕೆಲವೇ ದಿನಗಳಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷ ಬರಲಿದೆ. ಹೀಗಾಗಿ ಪ್ರತಿಯೊಬ್ಬರೂ ಪಾರ್ಟಿ ಮೂಡ್‍ನಲ್ಲಿರುತ್ತಾರೆ. ಆಲ್ಕೋಹಾಲ್‍ನಲ್ಲಿ ಪ್ಯೂರಿನ್ ಪ್ರಮಾಣ ಹೆಚ್ಚಿರುವ ಕಾರಣ ನೀವು ಪಾರ್ಟಿಯಲ್ಲಿ ಆಲ್ಕೋಹಾಲ್ ಮತ್ತು ಬಿಯರ್ ಸೇವಿಸುವ ಬಗ್ಗೆ ಯೋಚಿಸಿ. ನೀವು ಪ್ರತಿದಿನ ಆಲ್ಕೋಹಾಲ್ ಸೇವಿಸಿದರೆ ನಿಮ್ಮ ದೇಹದಲ್ಲಿ ಯೂರಿಕ್ ಆಮ್ಲವು ಹೆಚ್ಚಾಗುತ್ತದೆ.
ಇದನ್ನೂ ಓದಿ: Radish Side Effect: ಮೂಲಂಗಿ ತಿಂದ ಬಳಿಕ ಈ ಆಹಾರಗಳನ್ನು ತಪ್ಪಿಯೂ ಸೇವಿಸಬೇಡಿ: ವಿಷವಾಗಿ ಪರಿಣಮಿಸುತ್ತೆ ಎಚ್ಚರ
ಸೀಫುಡ್ ಮತ್ತು ಮಾಂಸ
ಈಗಾಗಲೇ ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿರುವವರು ಆರ್ಗನ್ ಮೀಟ್, ರೆಡ್ ಮೀಟ್, ಸೀಫುಡ್ ಸೇವನೆ ಮಾಡಬಾರದು. ಯೂರಿಕ್ ಆಮ್ಲದ ಅಪಾಯದಿಂದ ದೂರವಿರಬೇಕಾದ್ರೆ ಇವುಗಳನ್ನು ನೀವು ಸೇವಿಸಬಾರದು. ಏಕೆಂದರೆ ಈ ಆಹಾರಗಳಲ್ಲಿ ಪ್ಯೂರಿನ್ ಪ್ರಮಾಣವು ಅಧಿಕವಾಗಿರುತ್ತದೆ. ಹೀಗಾಗಿಯೇ ನೀವು ಅವುಗಳನ್ನು ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ತಿನ್ನದಿರುವುದು ಉತ್ತಮ.
ಚಳಿಗಾಲದಲ್ಲಿ ಈ ತರಕಾರಿಗಳಿಂದ ದೂರವಿರಿ
ಶೀತ ವಾತಾವರಣದಲ್ಲಿ ಹೆಚ್ಚು ತರಕಾರಿಗಳನ್ನು ತಿನ್ನಲಾಗುತ್ತದೆ, ಆದರೆ ಚಳಿಗಾಲದಲ್ಲಿ ಕೆಲವು ತರಕಾರಿಗಳನ್ನು ಸೇವಿಸಬಾರದು. ಹೂಕೋಸು, ಇಂಗು, ಪಾಲಕ್, ಅಣಬೆಗಳು ಮತ್ತು ಹಸಿರು ಬಟಾಣಿಗಳಂತಹ ತರಕಾರಿಗಳಿಂದ ದೂರವಿರಿ. ಇದು ಪ್ಯೂರಿನ್‌ನಿಂದ ತುಂಬಿರುತ್ತದೆ ಮತ್ತು ಇದು ನಿಮ್ಮ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಈ ಸಲಹೆ ಪಾಲಿಸುವ ಮೊದಲು ನೀವು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.