Fruits for weight loss: ಚಳಿಗಾಲ ಬಂದಿದ್ದು, ಈ ಸೀಸನ್‍ನಲ್ಲಿ ಸೋಮಾರಿಯಾಗುವುದು ಸಾಮಾನ್ಯ. ಚಳಿಯಿಂದ ಅನೇಕರು ಹಾಸಿಗೆಯಿಂದ ಎದ್ದೇಳಲು ಸಹ ಬಯಸುವುದಿಲ್ಲ. ಈ ಸೀಸನ್‍ನಲ್ಲಿ ನೆಗಡಿ, ಕೆಮ್ಮು ಬರುವುದು ಸರ್ವೇ ಸಾಮಾನ್ಯ, ಅಷ್ಟೇ ಅಲ್ಲ ಚಳಿಗಾಲದಲ್ಲಿ ಕೀಲು ನೋವು ಕೂಡ ಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ ತೂಕ ಕಳೆದುಕೊಳ್ಳುವಲ್ಲಿ ಗಮನಹರಿಸುವುದು ತುಂಬಾ ಕಷ್ಟ. ನಿಮ್ಮ ಆಹಾರ ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ದಿನಚರಿಯಲ್ಲಿ ಕೆಲವು ಹಣ್ಣುಗಳನ್ನು ಸೇವಿಸುವ ಮೂಲಕ, ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಜೊತೆಗೆ ನಿಮ್ಮ ಶಕ್ತಿಯ ಮಟ್ಟವನ್ನು ಸಹ ಕಾಪಾಡಿಕೊಳ್ಳಬಹುದು.


COMMERCIAL BREAK
SCROLL TO CONTINUE READING

ನಿಮ್ಮ ದಿನಚರಿಯಲ್ಲಿ ಉತ್ತಮ ಆಹಾರ ಪದಾರ್ಥಗಳನ್ನು ಸೇರಿಸುವ ಮೂಲಕ ಚಳಿಗಾಲದಲ್ಲಿ ನೀವು ಚೈತನ್ಯಯುತವಾಗಿರಬಹುದು. ಆಹಾರದಲ್ಲಿ ಅಗತ್ಯವಾದ ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಸೇರಿಸಲು ಹಣ್ಣುಗಳು ಅತ್ಯುತ್ತಮ ಆಯ್ಕೆಯಾಗಿದೆ. ಚಳಿಗಾಲದಲ್ಲಿ ಸುಲಭವಾಗಿ ಸಿಗುವ ಕೆಲವು ಹಣ್ಣುಗಳನ್ನು ಸೇವಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.


ಕಿತ್ತಳೆ: ಕಿತ್ತಳೆ ವಿಟಮಿನ್ ‘ಸಿ’ ಯ ಅತ್ಯುತ್ತಮ ಮೂಲವಾಗಿದೆ. ದೇಹವನ್ನು ನಿರ್ವಿಷಗೊಳಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಇದು ತುಂಬಾ ಒಳ್ಳೆಯ ಹಣ್ಣು. ಕಿತ್ತಳೆಗಳು ಹೆಚ್ಚಿನ ಪ್ರಮಾಣದ ಫೈಬರ್, ಪೊಟ್ಯಾಸಿಯಮ್ ಮತ್ತು ಖನಿಜಗಳನ್ನು ಹೊಂದಿರುತ್ತವೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಕಿತ್ತಳೆ ಹಣ್ಣಿನಲ್ಲಿರುವ ಹೆಚ್ಚಿನ ಫೈಬರ್ ಅಂಶದಿಂದ ಈ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ದೀರ್ಘಕಾಲದವರೆಗೆ ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ.


ಇದನ್ನೂ ಓದಿ: Anjeer Benefits: ಅಂಜೂರ ಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳು


ದಾಳಿಂಬೆ: ದಾಳಿಂಬೆಯು ಅಧಿಕ ಉತ್ಕರ್ಷಣ ನಿರೋಧಕಗಳು, ಖನಿಜಗಳು ಮತ್ತು ಫೈಬರ್ ಹೊಂದಿರುವ ಹಣ್ಣು. ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ದಾಳಿಂಬೆ ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ವ್ಯಾಯಾಮದ ಮೊದಲು ನೀವು ಉಪಾಹಾರಕ್ಕಾಗಿ ಈ ಹಣ್ಣು ತಿನ್ನಬಹುದು. ದಾಳಿಂಬೆಯನ್ನು ಪ್ರತಿದಿನ ತಿನ್ನುವುದರಿಂದ ದೇಹದಲ್ಲಿ ಟ್ರೈಗ್ಲಿಸರೈಡ್‌ಗಳನ್ನು (ಒಂದು ರೀತಿಯ ಕೊಬ್ಬು) ಕಡಿಮೆ ಮಾಡುತ್ತದೆ.


ಸೇಬು ಹಣ್ಣು: ಸೇಬು ಹಣ್ಣು ಬಹುತೇಕ ಎಲ್ಲಾ ಋತುವಿನಲ್ಲಿ ತಿನ್ನಬಹುದಾದ ಹಣ್ಣು. ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಶೀತದ ದಿನಗಳಲ್ಲಿ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಬೆಳಗಿನ ಉಪಾಹಾರಕ್ಕೆ ಸೇಬು ಉತ್ತಮ ಆಯ್ಕೆಯಾಗಿದೆ. ಇದನ್ನು ಸಲಾಡ್‌ನಂತೆ ಆಹಾರದೊಂದಿಗೆ ಸೇವಿಸಬಹುದು.


ಕಿವಿ ಹಣ್ಣು: ಕಿವಿ ಹಣ್ಣು ವಿಶ್ವದ ಅತ್ಯಂತ ಪೌಷ್ಟಿಕ ಹಣ್ಣುಗಳಲ್ಲಿ ಒಂದಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ‘ಸಿ’, ವಿಟಮಿನ್ ‘ಕೆ’ ಮತ್ತು ಹೆಚ್ಚಿನ ನಾರಿನಂಶವಿದೆ. ಕಿವಿ ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ತೂಕವನ್ನು ಕಳೆದುಕೊಳ್ಳಲು ನೀವು ದೈನಂದಿನ ಜೀವನದಲ್ಲಿ ಈ ಹಣ್ಣನ್ನು ಸೇರಿಸಿಕೊಳ್ಳಬಹುದು.


ಪೇರಲ ಹಣ್ಣು: ಪೇರಲದಲ್ಲಿ ಪ್ರೋಟೀನ್ ಮತ್ತು ಫೈಬರ್ ಹೇರಳವಾಗಿ ಕಂಡುಬರುತ್ತದೆ. ಅತಿಯಾಗಿ ತಿನ್ನುವುದು ದೇಹದ ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಪೇರಲ ಅತಿಯಾಗಿ ತಿನ್ನುವುದನ್ನು ನಿಯಂತ್ರಿಸುವ ಹಣ್ಣು. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾ ಸಹಾಯ ಮಾಡುತ್ತದೆ. ಇದರಿಂದಾಗಿ ತೂಕ ಇಳಿಸುವುದು ಸುಲಭವಾಗುತ್ತದೆ.


ಇದನ್ನೂ ಓದಿ: ದಾಸವಾಳ ಹೂವಿನ ಟೀ ಸೇವಿಸಿದರೆ ಸಿಗುವ ಆರೋಗ್ಯ ಪ್ರಯೋಜನಗಳಿವು


ಸೀತಾಫಲ: ಸೀತಾಫಲ ಹಣ್ಣು ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಇದು ದೇಹದ ಚಯಾಪಚಯ ಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ವಿಟಮಿನ್ ‘ಎ’ ಮತ್ತು ‘ಸಿ’ ಜೊತೆಗೆ, ಇದು ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ತಾಮ್ರವನ್ನು ಹೇರಳವಾಗಿ ಹೊಂದಿರುತ್ತದೆ. ಈ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.