ನೀವು ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತೀರಾ..? ತಕ್ಷಣ ನಿಲ್ಲಿಸಿದರೆ ನಿಮಗೆ ಒಳ್ಳೆಯದು..
Winter skin care : ರಾಜ್ಯದಲ್ಲಿ ಚಳಿಗಾಲ ಆರಂಭವಾಗಿದ್ದು, ಕೆಲ ಜನರು ತ್ವಚೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವ ಟಿಪ್ಸ್ಗಾಗಿ ಇಂಟರ್ನೆಟ್ನಲ್ಲಿ ಹುಡುಕಾಡುತ್ತಿದ್ದಾರೆ.. ಇನ್ನೂ ಕೆಲವರು ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಒಳ್ಳೆಯದಾ ಅಥವಾ ತಣ್ಣೀರು ಒಳ್ಳೆಯದಾ ಅಂತ ತಲೆಕೆಡಿಸಿಕೊಂಡು ಕುಳಿತಿದ್ದಾರೆ.. ಬನ್ನಿ ಈ ಬಗ್ಗೆ ತಿಳಿದುಕೊಳ್ಳೋಣ..
Winter health care : ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚಳಿ ಹೆಚ್ಚಾಗಿದೆ. ಜನರು ತ್ವಚೆ ರಕ್ಷಣೆ ಮತ್ತು ಕಾಳಜಿ ಮಾಡುವುದು ಹೇಗೆ ಎಂದು ತಿಳಿಯಲು ಗೂಗಲ್ ಮೊರೆ ಹೋಗುತ್ತಿದ್ದಾರೆ.. ಬನ್ನಿ ಸರಳ ವಿಧಾನದಲ್ಲಿ ತ್ವಚೆ ರಕ್ಷಿಸಿಕೊಳ್ಳುವ ಸಿಂಪಲ್ ಸಲಹೆಗಳನ್ನು ನಾವು ಹೇಳ್ತೀವಿ..
ಚಳಿಗಾಲದಲ್ಲಿ ಮುಖ ಶುಷ್ಕವಾಗಿ ಕಾಣಲು ಕಾರಣವೇನೆಂದರೆ ಚರ್ಮದಲ್ಲಿನ ಎಣ್ಣೆಯು ಒಣಗಿ ಕೊಬ್ಬಿನ ದ್ರವಗಳು ಹೆಪ್ಪುಗಟ್ಟುತ್ತವೆ. ಅದಕ್ಕಾಗಿಯೇ ಚರ್ಮವು ಶುಷ್ಕವಾಗಿ ಕಾಣುತ್ತದೆ. ಇದನ್ನು ತಪ್ಪಿಸಲು, ನೀವು ಮೊದಲು ಬಿಸಿ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಕೋಶಗಳು ಹಿಗ್ಗುತ್ತವೆ ಮತ್ತು ನೀವು ಹೊರಬಂದಾಗ ಚರ್ಮದ ಜೀವಕೋಶಗಳು ಕುಗ್ಗಲು ಪ್ರಾರಂಭಿಸುತ್ತವೆ ... ಆದ್ದರಿಂದ 98.4% ನಷ್ಟು ತಾಪಮಾನವಿರುವ ಸಾಮಾನ್ಯ ನೀರಿನಲ್ಲಿ ಸ್ನಾನ ಮಾಡಿ.
ಇದನ್ನೂ ಓದಿ:ನಿಮಗೆ ಕೂದಲು ಉದುರುವ ಸಮಸ್ಯೆಯೇ? ಈ ಎಣ್ಣೆಯಿಂದ ಮಸಾಜ್ ಮಾಡಿ, ಕ್ಷಣಾರ್ಧದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ..!
ಬೇಳೆ ಮತ್ತು ಕಡಲೆ ಹಿಟ್ಟು ಸೇರಿಸಿ ಹಚ್ಚಿಕೊಂಡು ಸ್ನಾನ ಮಾಡಿದರೆ ಚರ್ಮ ಒಣಗಿ ಮೃದುವಾಗುತ್ತದೆ. ವಿಶೇಷವಾಗಿ ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಕುದಿಸಿ, ನಂತರ ಅದಕ್ಕೆ ಕಡಲೆಹಿಟ್ಟು ಮಿಕ್ಸ್ ಮಾಡಿಕೊಂಡು ಮುಖಕ್ಕೆ ಹಚ್ಚಿದರೆ ಚರ್ಮವು ಕಾಂತಿಯುತವಾಗುತ್ತದೆ.. ಆಲಿವ್ ಎಣ್ಣೆಯನ್ನೂ ಸಹ ಬಳಸಬಹುದು.
ವಿಶೇಷವಾಗಿ ಚಳಿಗಾಲದಲ್ಲಿ ತುಟಿಗಳು ಒಡೆಯುವುದು ಸಾಮಾನ್ಯ ಸಮಸ್ಯೆ. ಇದನ್ನು ಸರಿಪಡಿಸಲು ಮನೆಯಲ್ಲಿ ಸುಲಭವಾಗಿ ಸಿಗುವ ಹಸುವಿನ ಬೆಣ್ಣೆ ಅಥವಾ ತುಪ್ಪವನ್ನು ಬೆಳಗ್ಗೆ ಮತ್ತು ರಾತ್ರಿ ಹಚ್ಚಿದರೆ ತುಟಿಗಳು ಮತ್ತು ಸುಲಿದ ತುಟಿಯ ಚರ್ಮವು ಗುಣವಾಗುತ್ತದೆ.
ಇದನ್ನೂ ಓದಿ:ಈ ಸೊಪ್ಪನ್ನು ಮೂಸಿ ನೋಡುವುದರಿಂದಲೇ ಪರಿಹಾರವಾಗುತ್ತದೆ ಶೀತ ಕೆಮ್ಮು...! ಕಫ, ತಲೆನೋವು ಜ್ವರಕ್ಕೂ ಇದೇ ಮದ್ದು
ಚಳಿಗಾಲದಲ್ಲಿ ವಾಲ್‌ನಟ್ಸ್, ಬಾದಾಮಿ, ಪಪ್ಪಾಯಿ ಹಣ್ಣು, ಕ್ಯಾರೆಟ್, ಮೀನು ತಿಂದರೆ ಚರ್ಮಕ್ಕೆ ಅಗತ್ಯವಿರುವ ವಿಟಮಿನ್ಗಳು ನೈಸರ್ಗಿಕವಾಗಿ ದೇಹಕ್ಕೆ ಲಭ್ಯವಾಗುತ್ತವೆ. ಅದೇ ರೀತಿ ನೈಸರ್ಗಿಕವಾಗಿ ದೊರೆಯುವ ಮತ್ತು ಹೆಚ್ಚು ಬಳಕೆಗೆ ಯೋಗ್ಯವಾಗಿರುವ ತೆಂಗಿನ ಹಾಲನ್ನು ಸ್ನಾನ ಮಾಡುವಾಗ ಚರ್ಮಕ್ಕೆ ಹಚ್ಚಿದರೆ ತ್ವಚೆಯು ಮೃದುವಾಗಿರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ