ನವದೆಹಲಿ: ಚಳಿಗಾಲದಲ್ಲಿ ಕಾಡುವ ಬಹುದೊಡ್ಡ ಆರೋಗ್ಯ ಸಮಸ್ಯೆ ಎಂದರೆ ಕೆಮ್ಮು ಮತ್ತು ಗಂಟಲು ನೋವು. ಆದರೆ, ಈ ಸಮಸ್ಯೆ ನಿವಾರಣೆಗೆ ವೈದ್ಯರ ಬಳಿಯೇ ಹೋಗಬೇಕೆಂದಿಲ್ಲ. ಮನೆಯಲ್ಲೇ ಇರುವ ಕೆಲವು ಸಾಮಗ್ರಿಗಳನ್ನು ಬಳಸಿ ನೈಸರ್ಗಿಕವಾಗಿ ಔಷಧಿ ತಯಾರಿಸಿ ಕುಡಿದರೆ ಕೆಮ್ಮು, ಗಂಟಲು ನೋವು ಬೇಗ ನಿವಾರಣೆಯಾಗುತ್ತದೆ. 


COMMERCIAL BREAK
SCROLL TO CONTINUE READING

ಅರಿಶಿಣ
ಉರಿಯೂತ ವಿರೋಧಿ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಅರಿಶಿನದಲ್ಲಿರುವುದರಿಂದ ಪ್ರತಿನಿತ್ಯ ನೀವು ಸೇವಿಸುವ ಟೀ ಗೆ ಅರಿಶಿನ ಸೇರಿಸಿ ಕುದಿಸಿ ಕುಡಿಯಿರಿ. ಅರಿಶಿನ ದೇಹದಲ್ಲಿ ಶಾಖವನ್ನು ಹೆಚ್ಚಿಸುವ ಮೂಲಕ ಚಳಿಗಾಲದಲ್ಲಿ ಉಂಟಾಗುವ ಕೆಮ್ಮು, ಗಂಟಲುನೋವು ಸಮಸ್ಯೆಗಳನ್ನು ನಿವಾರಿಸುತ್ತದೆ.  


ಮುಲೇಠಿ
ಚಳಿಗಾಲದಲ್ಲಿ ಪ್ರತಿನಿತ್ಯ ಬೆಳಿಗ್ಗೆ ನೀವು ಕುಡಿಯುವ ಚಹಾದಲ್ಲಿ ಮುಲೇಠಿ ಸೇರಿಸಿ ಕುಡಿಯಬಹುದು. ಇದು ನೈಸರ್ಗಿಕ ಸಿಹಿಕಾರಕಗಳಿಂದ ಕೂಡಿದ್ದು, ಚಹಾದಲ್ಲಿ ಮಸಾಲೆ ಸ್ವಾದ ನೀಡುತ್ತದೆ. ಇದರಲ್ಲಿರುವ ಮಧುಮೇಹ ವಿರೋಧಿ ಮತ್ತು ಆ್ಯಂಟಿ ಆ್ಯಕ್ಸಿಡೆಂಟ್ ಗುಣಗಳು ಚಯಾಪಚಯ ಕ್ರಿಯೆಗೂ ಸಹಕಾರಿ. ಅಷ್ಟೇ ಅಲ್ಲದೆ, ದೇಹದ ತೂಕ ಕಡಿಮೆ ಮಾಡಿಕೊಳ್ಳಲೂ ಸಹಾಯ ಮಾಡುತ್ತದೆ.  


ಶುಂಠಿ
ಚಳಿಗಾಲದಲ್ಲಿ ಶುಂಠಿ ಚಹಾ ಎಂದರೆ ಎಲ್ಲರಿಗೂ ಪ್ರಿಯ. ಸಾಧಾರಣ ಟೀ ಪುಡಿ ಜೊತೆ ಹಾಲಿಗೆ ಶುಂಠಿ ಜಜ್ಜಿ ಹಾಕಿ, ಕುದಿಸಿದರೆ ಮಸಾಲೆ ಚಹಾ ಅಥವಾ ಶುಂಠಿ ಚಹಾ ಸಿದ್ಧವಾಗುತ್ತದೆ. ಆ್ಯಂಟಿ ಆ್ಯಕ್ಸಿಡೆಂಟ್ ಅಂಶವಿರುವ ಶುಂಠಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕೆಮ್ಮು, ಕಫ, ಗಂಟಲಲ್ಲಿ ಕಿರಿಕಿರಿ ಮುಂತಾದ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳು ನಿವಾರಣೆಯಾಗುತ್ತವೆ. 


ಕರಿಮೆಣಸು
ಬಹಳ ಹಿಂದಿನಿಂದಲೂ ಕೆಮ್ಮು, ಗಂಟಲು ಕಿರಿಕಿರಿಗೆ ಮನೆಮದ್ದಾಗಿ ಕರಿಮೆಣಸನ್ನು ಬಳಸಲಾಗುತ್ತದೆ. ಇದರಲ್ಲಿ ಪೊಟ್ಯಾಶಿಯಂ, ಮೆಗ್ನೇಶೀಯಂ, ಐರನ್‌, ವಿಟಮಿನ್‌ ಕೆ ಮತ್ತು ವಿಟಮಿನ್‌ ಸಿ ಅಂಶಗಳಿದ್ದು, ನೈಸರ್ಗಿಕ ಆ್ಯಂಟಿಬಯೋಟಿಕ್‌ ಆಗಿ ಕೆಲಸ ಮಾಡುತ್ತದೆ. ನೀವು ಕುಡಿಯುವ ಟೀಗೆ ಸ್ವಲ್ಪ ಕರಿಮೆಣಸು ಬೆರೆಸಿ ಅಥವಾ ಹಾಲಿಗೆ ಕರಿಮೆಣಸಿನ ಪುಡಿ ಹಾಕಿ ಕುಡಿಸಿ ಪ್ರತಿನಿತ್ಯ ಕುಡಿದರೆ ಕೆಮ್ಮು ನಿವಾರಣೆಯಾಗುತ್ತದೆ.