ನವ ದೆಹಲಿ: ದೇಹಕ್ಕೆ ವಯಸ್ಸಾದ ಮೇಲೆ ಬದುಕಿರುವುದು ಮರಣದಂಡನೆಗೆ ಸಮ ಎಂದು ಅದೆಷ್ಟೋ ಮಂದಿ ಹೇಳುತ್ತಾರೆ. ಆದರೆ, ಸುಖ, ಸಂತೋಷ, ನೆಮ್ಮದಿ ವಿಚಾರಕ್ಕೆ ಬಂದರೆ ಮಹಿಳೆಯರು ತಮ್ಮ 85ನೇ ವಯಸ್ಸಿನಲ್ಲಿ ಅತಿ ಹೆಚ್ಚು ಸಂತೋಷದಿಂದಿರುತ್ತಾರಂತೆ ! ಆ ಸಂದರ್ಭದಲ್ಲಿ ಅವರು ವಿಧವೆಯರೂ ಆಗಿರುತ್ತಾರೆ ಎಂದು ಮನೋಶಾಸ್ತ್ರಜ್ಞರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಡಿ ಇಂಡಿಪೆಂಡೆಂಟ್ ವರದಿಯ ಪ್ರಕಾರ, ಈ ಕುರಿತು 8 ಸಾವಿರ ಬ್ರಿಟಿಷ್ ವಯಸ್ಕರಿಗೆ 12 ಪ್ರಶ್ನೆಗಳ ಸಮೀಕ್ಷೆಯನ್ನು ಮಾಡಲಾಯಿತು. ಇದರಲ್ಲಿ ಅಭ್ಯರ್ಥಿಗಳು ತಮ್ಮ ಆತ್ಮ ವಿಶ್ವಾಸ, ಆತಂಕ, ನಿದ್ರಾ ಭಂಗಕ್ಕೆ ಸಂಬಂಧಿಸಿದಂತೆ ಅವರು ಯಾವ ಹಂತದಲ್ಲಿದ್ದಾರೆ ಎಂಬುದನ್ನು ರೇಟ್ ಮಾಡುವಂತೆ ತಿಳಿಸಲಾಗಿತ್ತು.


ಹಾಗೆಯೇ ಎನ್ಎಚ್ಎಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಪುರುಷರಿಗಿಂತ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದು ತಿಳಿದುಬಂದಿತ್ತು. 


ಇದು ನಿರ್ದಿಷ್ಟವಾಗಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ 16-24 ವಯಸ್ಸಿನ ಪುರುಷರಲ್ಲಿ ಕೇವಲ ಶೇ.16 ಸಮಸ್ಯೆ ಕಂಡುಬಂದರೆ, ಮಹಿಳೆಯರಲ್ಲಿ ಶೇ.28 ಸಮಸ್ಯೆ ಇರುವುದಾಗಿ ವರದಿ ಮಾಡಿದೆ. 


ಮಧ್ಯಮ ವಯಸ್ಸಿನಲ್ಲಿ (45 -54) ಮಹಿಳೆಯರ ಸಂತೋಷವು ಕಡಿಮೆಯಾಗಿದ್ದು, ಶೇ.24 ರಷ್ಟು ಮಾನಸಿಕ ಅನಾರೋಗ್ಯಕ್ಕೆ ಒಳಪಡುತ್ತಾರೆ ಎಂದು ಹೇಳಲಾಗಿದೆ. 


ಮನೆಯ ಅತಿಯಾದ ಜವಾಬ್ದಾರಿಗಳು ಪುರುಷರಿಗಿಂತ ಮಹಿಳೆಯರು ಅಸಂತೋಷದಿಂದ ಇರಲು ಪ್ರಮುಖ ಕಾರಣ ಎಂದು  ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ನ ಡೀಯೆವ್ ಲೊವೆಟ್ರನ್ನು ಹೇಳಿರುವುದಾಗಿ ಡಿ ಇಂಡಿಪೆಂಡೆಂಟ್ ವರದಿ ಮಾಡಿದೆ. 


ಏನೇ ಆಗಲಿ, ಮಹಿಳೆಯರು ಅತಿ ಹೆಚ್ಚು ಖಿನ್ನತೆಗೆ ಒಳಗಾಗುವ ಪ್ರವೃತ್ತಿ ಹೊಂದಿದ್ದರೆ, ಪುರುಷರು ಮಾನಸಿಕ ಆರೋಗ್ಯ ವಿಷಯದಲ್ಲಿ ಹೆಚ್ಚು ದುರ್ಬಲರಾಗಿರುತ್ತಾರೆ ಎಂದು ಲೊವೆಟ್ ವಿವರಿಸಿದ್ದಾರೆ. ಹಾಗಾಗಿಯೇ ಅವರು ತಮ್ಮ 80ನೇ ವಯಸ್ಸಿನಲ್ಲಿ ಸಂಗಾತಿ ಇಲ್ಲದಿದ್ದರೂ ಸಂತೋಷವಾಗಿರುತ್ತಾರೆ ಎಂದು ತಿಳಿದುಬಂದಿದೆ.