ನವ ದೆಹಲಿ: ಪುರುಷರಿಗಿಂತ ಮಹಿಳೆಯರು ಹೆಚ್ಚು ಕ್ರೀಡಾಸಕ್ತರಂತೆ ! ಆಶ್ಚರ್ಯ ಆಗ್ತಿದೆಯಾ? ಆದರೆ ಇದು ಸತ್ಯ. ಹೀಗಂತ ಅಧ್ಯಯನವೊಂದು ಹೇಳಿದ್ದು, ಪುರುಷರು ಮಹಿಳೆಯರಿಗಿಂತ ಹೆಚ್ಚು ಕ್ರೀಡಾಸಕ್ತರು(ಅಥ್ಲೆಟಿಕ್) ಎಂಬ ಅಭಿಪ್ರಾಯವನ್ನು ಹಿಮ್ಮೆಟ್ಟಿದೆ.


COMMERCIAL BREAK
SCROLL TO CONTINUE READING

ಮಹಿಳೆಯರು ವ್ಯಾಯಾಮ ಮಾಡಲು ಆರಂಭಿಸಿದಾಗ ಪುರುಷರಿಗಿಂತ ಹೆಚ್ಚು ವೇಗವಾಗಿ ಆಮ್ಲಜನಕವನ್ನು ಪ್ರಕ್ರಿಯೆಗೊಳಿಸುವುದರಿಂದ ಹೆಣ್ಣು ಮಕ್ಕಳು ನೈಸರ್ಗಿಕವಾಗಿ ಹೆಚ್ಚು ಸದೃಢರಾಗಿರುತ್ತಾರೆ ಎಂಬುದು ಅಧ್ಯಯನದಿಂದ  ತಿಳಿದು ಬಂದಿದೆ. 


ವಾಟರ್ಲೂ ವಿಶ್ವವಿದ್ಯಾಲಯದ ಸಂಶೋಧನೆ ಪ್ರಕಾರ, ಮಹಿಳೆಯರು ವ್ಯಾಯಾಮ ಮಾಡಲು ಆರಂಭಿಸಿದಾಗ ಪುರುಷರಿಗಿಂತ ವೇಗವಾಗಿ ಆಮ್ಲಜನಕವನ್ನು ಎಳೆದುಕೊಳ್ಳುತ್ತಾರಂತೆ. ತ್ವರಿತ ಆಮ್ಲಜನಕದ ಪಡೆಯುವಿಕೆಯು ದೇಹದ ಜೀವಕೋಶಗಳಲ್ಲಿ ಕಡಿಮೆ ಒತ್ತಡವನ್ನು ಉಂಟುಮಾಡುವ ಮೂಲಕ ಏರೋಬಿಕ್ ಫಿಟ್ನೆಸ್ಗೆ ಉತ್ತಮ ಕ್ರಮವಾಗಿದೆ. 


ಪುರುಷರ ದೇಹವು ನೈಸರ್ಗಿಕವಾಗಿ ಅಥ್ಲೆಟಿಕ್ ಗುಣ ಹೊಂದಿವೆ ಎಂಡು ಹಲವರು ಹೇಳಿದರೂ, ಅದು ವ್ಯತಿರಿಕ್ತವಾಗಿದೆ ಎಂದು ಲೀಡ್ ಲೇಖಕ ಥಾಮಸ್ ಬೆಲ್ಟ್ರೇಮ್ ಹೇಳಿದ್ದಾರೆ. 18ರ ವಯಸ್ಸಿನ ಪುರುಷರು ಮತ್ತು ಮಹಿಳೆಯರಿಗೆ ಟ್ರೆಡ್ ಮಿಲ್ ವ್ಯಾಯಾಮದ ಸಮಯದಲ್ಲಿ ಅವರ ವಯಸ್ಸು ಮತ್ತು ತೂಕದ ಆಧಾರದ ಮೇಲೆ ಆಮ್ಲಜನಕವನ್ನು ಎಳೆದುಕೊಳ್ಳುವ ಮತ್ತು ಸ್ನಾಯುವಿನ ಆಮ್ಲಜನಕದ ಹೊರತೆಗೆತವನ್ನು ಹೋಲಿಸಲಾಯಿತು. 


ಅದರಲ್ಲಿ ಪುರುಷರಿಗಿಂತ ಮಹಿಳೆಯರು ದೇಹಾದ್ಯಂತ ಸತತವಾಗಿ ಶೇಕಡಾ 30 ರಷ್ಟು ವೇಗವಾಗಿ ಆಮ್ಲಜನಕವನ್ನು ನಿರ್ವಹಿಸುವ ಶಕ್ತಿ ಹೊಂದಿರುವುದು ತಿಳಿದು ಬಂದಿದೆ. 


ಮತ್ತೋರ್ವ ಸಂಶೋಧಕ ರಿಚರ್ಡ್ ಹಗ್ಸನ್ ಪ್ರಕಾರ, ಮಹಿಳೆಯರ ಸ್ನಾಯುಗಳು ರಕ್ತದಿಂದ ವೇಗವಾಗಿ ಆಮ್ಲಜನಕವನ್ನು ಹೊರತೆಗೆಯುತ್ತವೆ ಎಂದು ಎಂದಿದ್ದಾರೆ. ವೈಜ್ಞಾನಿಕವಾಗಿ ಹೇಳುವುದಾದರೆ, ಇದು ಉನ್ನತ ಏರೋಬಿಕ್ ವ್ಯವಸ್ಥೆಯನ್ನು ಸೂಚಿಸುತ್ತದೆ. ವೇಗವಾಗಿ ಆಮ್ಲಜನಕವನ್ನು ಸಂಸ್ಕರಿಸುವ ಮೂಲಕ, ಮಹಿಳೆಯರು ಸ್ನಾಯುವಿನ ಆಯಾಸ ಕಡಿಮೆ ಮಾಡುವುದರೊಂದಿಗೆ ಕೊಬ್ಬಿನಂಶಗಳು ಶೇಖರಣೆಗೊಳ್ಳುವುದನ್ನು ತಡೆಯುತ್ತದೆ ಎನ್ನಲಾಗಿದೆ.