ನವದೆಹಲಿ: ಐದು ತಿಂಗಳ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ತಮ್ಮ ಮೊದಲ ಮಗುವಿಗೆ ಸ್ತನ್ಯಪಾನ ಉಣಿಸುವ ಮಹಿಳೆಯರಿಗೆ ಹೆಚ್ಚು ಮಕ್ಕಳನ್ನು ಹೊಂದುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಹಾರ್ನೆ ಕಾಲೇಜ್ ಪ್ರಾಧ್ಯಾಪಕ ಸ್ಯಾಮ್ಯುಯೆಲ್ ಸ್ಟ್ಯಾಬ್ಲರ್ ಮತ್ತು ಅವರ ಸಹೋದ್ಯೋಗಿಗಳಾದ ಕಾರ್ನಾಲ್ ಯುನಿವರ್ಸಿಟಿ ಪ್ರಾಧ್ಯಾಪಕ ವಿದಾ ಮರಾಲಾನಿ ನಡೆಸಿರುವ ಅಧ್ಯಯನದ ಮೂಲಕ ಅಂಶ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಅಧ್ಯಯನದಲ್ಲಿ ಕಂಡು ಬಂದಿರುವ ಸಂಗತಿ ಪ್ರಕಾರ ಕಡಿಮೆ ಅವಧಿಯವರೆಗೆ ಸ್ತನ್ಯಪಾನ ಉಣಿಸುವ ಮಹಿಳೆಯರಿಗೆ ತಾವು ನಿರೀಕ್ಷಿಸಿದಕ್ಕಿಂತ ಕಡಿಮೆ ಮಕ್ಕಳು ಹುಟ್ಟಲಿದ್ದಾರೆ. ಆದರೆ ಹೆಚ್ಚು ಮಕ್ಕಳಿಗೆ ಸ್ತನ್ಯಪಾನ ಮಾಡುವ ಮಹಿಳೆಯರು ತಮ್ಮ ನಿರೀಕ್ಷೆಗಳನ್ನು ಅವರು ತಲುಪಬಹುದು ಎಂದು ತಿಳಿದುಬಂದಿದೆ. ಸ್ತನ್ಯಪಾನ ಅವಧಿಯು ಮಹಿಳೆಯರಿಗೆ ಹೆಚ್ಚಿನ ಕುಟುಂಬಗಳನ್ನು ಹೊಂದಲು ಕಾರಣವೆಂದು ಸಂಶೋಧಕರು ತಿಳಿಸಿದ್ದಾರೆ. 


ಸಂಶೋದಕರು ಹೇಳುವಂತೆ "ಮೊದಲ ವರ್ಷದಲ್ಲಿ ಮಹಿಳೆಯರು ತಮ್ಮ ಶಿಶುಗಳನ್ನು ಸ್ತನ್ಯಪಾನ ಮಾಡಬೇಕೆಂದು ಕೇಳಲ್ಪಟ್ಟಿರುತ್ತಾರೆ, ಆದರೂ ಆಚರಣೆಯಲ್ಲಿ ತರುವುದು ಕಷ್ಟ ಎಂದು ತಿಳಿಸಿದ್ದಾರೆ. ಅಧ್ಯಯನದಲ್ಲಿ ಪ್ರಮುಖವಾಗಿ 1979 ರಿಂದ 2012 ರವರೆಗೆ ರಾಷ್ಟ್ರೀಯ ಪ್ರತಿನಿಧಿ ದತ್ತಾಂಶದಲ್ಲಿ ಸುಮಾರು 3,700 ತಾಯಂದಿರ ಅಧ್ಯಯನದ ಮೂಲಕ ಈ ಫಲಿತಾಂಶವನ್ನು ಕಂಡುಹಿಡಿಯಲಾಗಿದೆ. ಈ ದತ್ತಾಂಶದಲ್ಲಿ ಶಿಕ್ಷಣ, ವಯಸ್ಸು, ವೈವಾಹಿಕ ಸ್ಥಿತಿ, ಕುಟುಂಬದ ಆದಾಯ, ಮತ್ತು  ಅವರ ಕೆಲಸದ ಕಾರ್ಯ ಮೂಲಕ ಹಾಲುಣಿಸುವ ಮತ್ತು ಫಲವತ್ತತೆಗೆ ಸಂಬಂಧಿಸಿದ ವ್ಯತ್ಯಾಸಗಳನ್ನು ಡೇಟಾ ಮೂಲಕ ಕಂಡುಕೊಂಡಿದ್ದಾರೆ ಎಂದು ತಿಳಿದುಬಂದಿದೆ.