ವಿಶ್ವ ಹೃದಯ ದಿನ: ಹೃದ್ರೋಗಿಗಳೇ ಎಚ್ಚರ! ನೀವು ಇವುಗಳನ್ನು ತಿನ್ನಬೇಡಿ
ಇಂದು ವಿಶ್ವ ಹೃದಯ ದಿನ ಆದ್ದರಿಂದ ನಮ್ಮ ಹೃದಯವನ್ನು ಖಾಯಿಲೆಗಳಿಂದ ದೂರವಿಡಬೇಕಾದಲ್ಲಿ ನಾವು ಕೆಲವು ಆಹಾರ ಪದಾರ್ಥಗಳನ್ನು ತ್ಯಜಿಸಬೇಕು.ಹಾಗಾದರೆ ಹೃದ್ರೋಗಿಗಳು ತ್ಯಜಿಸಬೇಕಾದ ಆಹಾರ ಪದಾರ್ಥಗಳು ಇಲ್ಲಿವೆ.
ನವದೆಹಲಿ: ಇಂದು ವಿಶ್ವ ಹೃದಯ ದಿನ ಆದ್ದರಿಂದ ನಮ್ಮ ಹೃದಯವನ್ನು ಖಾಯಿಲೆಗಳಿಂದ ದೂರವಿಡಬೇಕಾದಲ್ಲಿ ನಾವು ಕೆಲವು ಆಹಾರ ಪದಾರ್ಥಗಳನ್ನು ತ್ಯಜಿಸಬೇಕು.ಹಾಗಾದರೆ ಹೃದ್ರೋಗಿಗಳು ತ್ಯಜಿಸಬೇಕಾದ ಆಹಾರ ಪದಾರ್ಥಗಳು ಇಲ್ಲಿವೆ.
1. ಸಂಸ್ಕರಿಸಿದ ಧಾನ್ಯಗಳು ಮತ್ತು ಕಾರ್ಬೋಹೈಡ್ರೇಟ್ಗಳು: ನಿಮ್ಮ ಆರೋಗ್ಯಕ್ಕೆ ಎಲ್ಲ ಕ್ಯಾರೆಬ್ಗಳು ಕೆಟ್ಟದ್ದಲ್ಲ. ಆದರೆ ಸಂಸ್ಕರಿಸಿದ ಧಾನ್ಯಗಳು ನಿಮ್ಮ ಹೃದಯಕ್ಕೆ ಹಾನಿಕಾರಕವಾಗಿವೆ.ಅವುಗಳನ್ನು ಸಂಸ್ಕರಿಸಿದರಿಂದಾಗಿ ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತದೆ. ಟ್ರಾನ್ಸ್ ಕೊಬ್ಬುಗಳು, ಸೋಡಿಯಂ ಮತ್ತು ಸಕ್ಕರೆಗಳಂತಹ ಹಾನಿಕಾರಕ ಪದಾರ್ಥಗಳನ್ನು ಇವು ಒಳಗೊಂಡಿರುತ್ತದೆ. ಆದ್ದರಿಂದ ಪಿಜ್ಜಾಗಳು, ಪಾಸ್ಟಾಗಳು ಮತ್ತು ಬಿಳಿ ಬ್ರೆಡ್, ಆಲೂಗಡ್ಡೆ, ಬಿಳಿ ಅಕ್ಕಿ ಮೊದಲಾದ ಪಿಷ್ಟ ಆಹಾರಗಳನ್ನು ದೂರವಿಡಿ.
2. ಮೃದು ಪಾನೀಯಗಳು ಅಥವಾ ಸಕ್ಕರೆ ಪಾನೀಯಗಳು: ಎನರ್ಜಿ ಡ್ರಿಂಕ್ಸ್ ಗಳು ಸಾಮಾನ್ಯವಾಗಿ ಹೆಚ್ಚಿನ ಮಟ್ಟದ ಸಕ್ಕರೆ ಅಂಶವನ್ನು ಒಳಗೊಂಡಿರುತ್ತದೆ, ಇದು ಯಾವುದೇ ಹೃದಯ ಖಾಯಿಲೆ ಇರುವವರಿಗೆ ಇದು ಹಾನಿಕಾರಕವೆಂದು ಹೇಳಬಹುದು.ಈ ಮೃದು ಪಾನೀಯಗಳು ಹೆಚ್ಚು ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುತ್ತವೆ, ಆದ್ದರಿಂದ ಇದು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ರಕ್ತದೊತ್ತಡಕ್ಕೆ ಕಾರಣವಾಗುತ್ತವೆ. ಈ ಪಾನೀಯಗಳು ನಿಮ್ಮ ತೂಕವನ್ನು ಸಹ ಹೆಚ್ಚಿಸುತ್ತವೆ. ಆದ್ದರಿಂದ ನಿಮಗೆ ಬಾಯಾರಿಕೆಗೆ ಆದಾಗ ನೀರು ಅಥವಾ ಇತರ ನೈಸರ್ಗಿಕವಾಗಿರುವ ತೆಂಗಿನ ನೀರಿನಂತಹ ಪಾನೀಯಗಳನ್ನು ಆರಿಸಿಕೊಳ್ಳಿ ಮತ್ತು ಸೋಡಾವನ್ನು ಬಿಟ್ಟುಬಿಡಿ. ಅದರಲ್ಲೂ ಹೃದಯ ಖಾಯಿಲೆ ಹೊಂದಿದವರು ಇದನ್ನು ಪಾಲಿಸಲೇಬೇಕು.
3. ಮಾಂಸ: ಹೃದಯಖಾಯಿಲೆ ಹೊಂದಿದವರು ಎಲ್ಲಾ ರೀತಿಯ ಮಾಂಸವನ್ನು ತಿನ್ನುವುದನ್ನು ಬಿಡಬೇಕು.ಮಾಂಸವು ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ಗಳ (ಎಲ್ಡಿಎಲ್) ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುತ್ತದೆಯಾದ್ದರಿಂದ ಇದು ಹಾನಿಕಾರಕವಾಗಿದೆ. ಕೆಂಪು ಮಾಂಸದ ಸಾಮಾನ್ಯ ಮೂಲಗಳು ಕುರಿ, ಹಂದಿ ಮತ್ತು ಗೋಮಾಂಸವನ್ನು ಒಳಗೊಂಡಿರುತ್ತವೆ.
4. ಉಪ್ಪು ಆಹಾರಗಳು: ಚಿಪ್ಸ್ ಮತ್ತು ಕ್ರಿಸ್ಪ್ಸ್ನಂತಹ ಸಾಮಾನ್ಯ ಪ್ಯಾಕ್ ನಿಂದ ಮಾಡಲಾದ ತಿಂಡಿಗಳು ಹೆಚ್ಚಿನ ಪ್ರಮಾಣದ ಉಪ್ಪನ್ನು ಹೊಂದಿರುತ್ತವೆ, ಇದು ಹೃದಯ ರೋಗಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ದೇಹದಲ್ಲಿನ ಸೋಡಿಯಂ ಸೇವನೆಯು ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ.
5.ಟ್ರಾನ್ಸ್ ಕೊಬ್ಬುಗಳು: ಹೆಚ್ಚಿನ ಪ್ಯಾಕ್ ಮಾಡಲಾದ ತಿಂಡಿಗಳು, ಜೊತೆಗೆ ಜಂಕ್ ಫುಡ್ಗಳು ಈ ಹಾನಿಕಾರಕ ಅಂಶಗಳನ್ನು ಹೊಂದಿರುತ್ತವೆ. ಟ್ರಾನ್ಸ್ ಕೊಬ್ಬುಗಳು,ಕೆಲವೊಮ್ಮೆ ಸಂಸ್ಕರಿಸಿದ ಆಹಾರಗಳಲ್ಲಿ ಹೈಡ್ರೋಜನೀಕರಿಸಿದ ಎಣ್ಣೆಗಳೆಂದು ಲೇಬಲ್ ಮಾಡಲ್ಪಟ್ಟಿವೆ.ಆದ್ದರಿಂದ ಚಾಕೊಲೇಟ್ಗಳು, ಕುಕೀಸ್,ಚಿಪ್ಸ್ ಟ್ರಾನ್ಸ್ ಕೊಬ್ಬನ್ನು ಒಳಗೊಂಡಿರುತ್ತವೆ ಮತ್ತು ಹೀಗಾಗಿ,ಹೃದಯ ರೋಗಿಗಳು ಇದನ್ನು ತ್ಯಜಿಸಬೇಕು.