World Kidney Day 2024: ಮೂತ್ರಪಿಂಡಗಳು ಎಂದರೆ ಕಿಡ್ನಿಗಳು ದೇಹದ ಪ್ರಮುಖ ಅಂಗವಾಗಿದೆ. ಕಿಡ್ನಿ ಆರೋಗ್ಯದಲ್ಲಿ ಒಂದೇ ಒಂದು ಸಣ್ಣ ವ್ಯತ್ಯಾಸ ಕಂಡು ಬಂದರೂ ಕೂಡ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಮೂತ್ರಪಿಂಡಗಳ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ 14 ಮಾರ್ಚ್ 
ರಂದು ವಿಶ್ವ ಕಿಡ್ನಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮೂತ್ರಪಿಂಡಗಳನ್ನು ನಿರ್ವಿಷಗೊಳಿಸಲು ಪ್ರಯೋಜನಕಾರಿ ಆದ ಹಣ್ಣುಗಳ ಬಗ್ಗೆ ತಿಳಿಯೋಣ... 


COMMERCIAL BREAK
SCROLL TO CONTINUE READING

ಆರೋಗ್ಯ ತಜ್ಞರ ಪ್ರಕಾರ, ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ ಇದಕ್ಕಾಗಿ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಬೇಕು. ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸಲು ಸಹಾಯಕವಾದ ಐದು ಅತ್ಯುತ್ತಮ ಹಣ್ಣುಗಳ ಬಗ್ಗೆ ತಿಳಿಯೋಣ... 


ಮೂತ್ರಪಿಂಡಗಳನ್ನು ನಿರ್ವಿಷಗೊಳಿಸಲು ತುಂಬಾ ಪ್ರಯೋಜನಕಾರಿ ಹಣ್ಣುಗಳಿವು: 
ದಾಳಿಂಬೆ: 

ದಾಳಿಂಬೆ ಹಣ್ಣು ಉತ್ಕರ್ಷಣ ನಿರೋಧಕಗಳಲ್ಲಿ ಹೇರಳವಾಗಿದ್ದು ಇದು ದೇಹದಲ್ಲಿ ಉರಿಯೂತದ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ ಆಗಿದೆ. ಮಾತ್ರವಲ್ಲ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಪ್ರಯೋಜನಕಾರಿ ಆಗಿರುವ ದಾಳಿಂಬೆ ಮೂತ್ರಪಿಂಡದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- World Kidney Day: ದೇಶದ ಸುಮಾರು 17% ಜನರಲ್ಲಿ ಮೂತ್ರಪಿಂಡ ಸಮಸ್ಯೆ, ಕಿಡ್ನಿ ಆರೋಗ್ಯಕ್ಕೆ ಸರಳ ಸಲಹೆಗಳಿವು


ಜಾಮೂನ್: 
ಜಾಮೂನ್/ಬೆರ್ರಿ ಹಣ್ಣುಗಳನ್ನು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇವು ಕಡಿಮೆ ರಂಜಕ ಮತ್ತು ಉಪ್ಪನ್ನು ಹೊಂದಿವೆ. ಉತ್ಕರ್ಷಣ ನಿರೋಧಕಗಳು, ಮ್ಯಾಂಗನೀಸ್, ಫೋಲೇಟ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಸ್ಟ್ರಾಬೆರಿಗಳು, ಬ್ಲ್ಯಾಕ್‌ಬೆರಿಗಳು ಮೂತ್ರಪಿಂಡದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ. 


ಸೇಬು: 
ನಿತ್ಯ ಒಂದು ಸೇಬು ತಿಂದರೆ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು ಎಂದು ವೈದ್ಯರು ಹೇಳುತ್ತಾರೆ. ಸೇಬು ಕಡಿಮೆ ಪ್ರಮಾಣದ ರಂಜಕ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ.  ಇದು ಪೆಕ್ಟಿನ್ ಎಂಬ ಸಂಯುಕ್ತವನ್ನು ಹೊಂದಿದ್ದು, ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗಾಗಿ, ಕಿಡ್ನಿಗಳನ್ನು ಆರೋಗ್ಯವಾಗಿರಿಸಲು ಸೇಬು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 


ನಿಂಬೆ ಹಣ್ಣು: 
ವಿಟಮಿನ್ ಸಿ ನಲ್ಲಿ ಸಮೃದ್ಧವಾಗಿರುವ ನಿಂಬೆ ಹಣ್ಣು  ಕಿಡ್ನಿ ಸ್ಟೋನ್ ಸಮಸ್ಯೆಗೆ ಅತ್ಯುತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ. ಇದು ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ- Kidney Health :ಅಡುಗೆಗೆ ಬಳಸುವ ಈ ಮೂರು ವಸ್ತುಗಳೇ ಕಿಡ್ನಿ ಸ್ಟೋನ್ ಗೆ ಕಾರಣವಾಗುವುದು !


ಸಿಟ್ರಸ್ ಹಣ್ಣುಗಳು: 
ಆರೋಗ್ಯ ತಜ್ಞರ ಪ್ರಕಾರ, ಕಿತ್ತಳೆ ಹಣ್ಣು, ನಿಂಬೆ ಹಣ್ಣು, ದ್ರಾಕ್ಷಿ ಹಣ್ಣು ಸೇರಿದನೇ ಎಲ್ಲಾ ರೀತಿಯ ಸಿಟ್ರಸ್ ಹಣ್ಣುಗಳನ್ನು ಮೂತ್ರಪಿಂಡದ ಆರೋಗ್ಯಕ್ಕೆ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.