World Milk Day 2021: ಹೆಚ್ಚುತ್ತಿರುವ ಕರೋನದ ಪ್ರಕರಣಗಳ ನಡುವೆ ನಿಮ್ಮ ಕುಟುಂಬವನ್ನು ರಕ್ಷಿಸಲು ನೀವು ಬಯಸಿದರೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಇದಕ್ಕಾಗಿ ಪ್ರತಿದಿನ ಪೌಷ್ಠಿಕ ಆಹಾರ ಮತ್ತು ಹಾಲು ಕುಡಿಯುವ ಅವಶ್ಯಕತೆಯಿದೆ. ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಹಾಲಿನೊಂದಿಗೆ ಅರಿಶಿನ ಬೆರೆಸಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅರಿಶಿನವನ್ನು ಹೊರತುಪಡಿಸಿ ಇತರ ಕೆಲವು ಪದಾರ್ಥಗಳನ್ನು ಕೂಡ ಹಾಲಿನಲ್ಲಿ ಬೆರೆಸಿ ಕುಡಿಯಬಹುದು. ಇದೂ ಕೂಡ ನಿಮ್ಮ ರೋಗ ನಿರೋಧಕ  (Immunity) ಶಕ್ತಿಯನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ - ರಾತ್ರಿ ವೇಳೆ ಅರಿಶಿನದ ಹಾಲನ್ನು ಸೇವಿಸಿ, ಈ ಅದ್ಭುತ ಪ್ರಯೋಜನಗಳನ್ನು ಪಡೆಯಿರಿ


ಹಾಲಿನೊಂದಿಗೆ ಇವುಗಳನ್ನು ಬೆರೆಸಿ ಕುಡಿಯಿರಿ ಉತ್ತಮ ಆರೋಗ್ಯ ನಿಮ್ಮದಾಗಿಸಿ:
* ಕರ್ಜೂರದೊಂದಿಗೆ ಹಾಲು ಸೇವನೆ (Drink with dates):
ಕರ್ಜೂರದಲ್ಲಿ ಆಂಟಿ-ಆಕ್ಸಿಡೆಂಟ್‌ಗಳು, ಆಂಟಿ-ವೈರಲ್‌ಗಳು ಮತ್ತು ಜೀವಸತ್ವಗಳು ಮತ್ತು ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಕರ್ಜೂರವನ್ನು ಹಾಲಿನಲ್ಲಿ ಕುದಿಸಿ ಕುಡಿಯಬೇಕು.


* ಕುಂಬಳಕಾಯಿ, ಸೂರ್ಯಕಾಂತಿ, ಚಿಯಾ ಮತ್ತು ಲಿನ್ಸೆಡ್ ಬೀಜಗಳೊಂದಿಗೆ ಕುಡಿಯಿರಿ (Drink with pumpkin, sunflower, chia and linseed seeds):
ಕುಂಬಳಕಾಯಿ, ಸೂರ್ಯಕಾಂತಿ, ಚಿಯಾ ಮತ್ತು ಲಿನ್ಸೆಡ್ ಬೀಜ ಇವುಗಳು ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ. ವಿಶೇಷವಾಗಿ ಇದು ಶೀತ-ಕೆಮ್ಮು ಮತ್ತು ಕಾಲೋಚಿತ ಕಾಯಿಲೆಗಳಿಂದ ರಕ್ಷಿಸುತ್ತದೆ. ಹಾಗಾಗಿ ಇದನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.


ಇದನ್ನೂ ಓದಿ - Health Tips: ನಿತ್ಯ ರಾತ್ರಿ ಹಾಲಿನೊಂದಿಗೆ ಈ ಹಣ್ಣನ್ನು ಸೇವಿಸಿ, ದೂರವಾಗುತ್ತೆ ಈ ಎಲ್ಲಾ ಸಮಸ್ಯೆ


* ಒಣ ಹಣ್ಣುಗಳನ್ನು ಹಾಲಿನೊಂದಿಗೆ ಸೇವಿಸಿ (Drink dry fruits with milk):
ಒಣ ಹಣ್ಣುಗಳನ್ನು ಅಂದರೆ ಡ್ರೈ ಫ್ರೂಟ್ಸ್ ಅನ್ನು ಹಾಲಿನೊಂದಿಗೆ (Milk with Dry Fruits) ಸೇವಿಸಿ. ಇದು ಅವರ ಪೌಷ್ಠಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ. ಕಾಲೋಚಿತ ಕಾಯಿಲೆಗಳ ಹೊರತಾಗಿ, ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿರಲಿದೆ.


* ಅರಿಶಿನ ಹಾಲು ಕುಡಿಯಿರಿ (Drink turmeric milk): 
ಅರಿಶಿನದಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ, ಕ್ಯಾನ್ಸರ್ ವಿರೋಧಿ ಗುಣಗಳು ದೇಹವನ್ನು ರಕ್ಷಿಸುತ್ತವೆ.


* ಶುಂಠಿಯನ್ನು ಬೆರೆಸಿ ಕುಡಿಯಿರಿ (Mix and drink milk with ginger):
ಶುಂಠಿಯಲ್ಲಿ ವಿಟಮಿನ್, ಕಬ್ಬಿಣ, ಕ್ಯಾಲ್ಸಿಯಂ, ಆಂಟಿ-ಆಕ್ಸಿಡೆಂಟ್, ಆಂಟಿ-ವೈರಲ್ ಗುಣಗಳಿವೆ. ಇದನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.