World Pulses Day : ಬೇಳೆಕಾಳುಗಳು ಅನಾದಿ ಕಾಲದಿಂದಲೂ ನಮ್ಮ ದೈನಂದಿನ ಆಹಾರದ ಭಾಗವಾಗಿದೆ. ದ್ವಿದಳ ಧಾನ್ಯಗಳು, ಬೇಳೆಕಾಳುಗಳನ್ನು ಬೇರೆ ಬೇರೆ ರೀತಿಯಲ್ಲಿ ಅಡುಗೆಯಲ್ಲಿ ಬಳಸಬಹುದು. ಪ್ರಪಂಚದಾದ್ಯಂತದ ಪ್ರತಿಯೊಂದು ಪಾಕಪದ್ಧತಿಯಲ್ಲಿ ಬೇಳೆಕಾಳುಗಳನ್ನು ಬಳಸಬಹುದು. ಒಂದು ಬೌಲ್ ದಾಲ್, ಅನ್ನ ಅಥವಾ  ಚಪಾತಿ ಸೇವನೆ ಆರೋಗ್ಯಕರ ಊಟದ ಪಟ್ಟಿಯಲ್ಲಿ ಬರುತ್ತದೆ. ಬೇಳೆಕಾಳುಗಳು ಪೌಷ್ಠಿಕಾಂಶವನ್ನು ಹೊಂದಿವೆ. ಇದು ಫೈಬರ್, ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಆದ್ದರಿಂದ, ಬೇಳೆಕಾಳುಗಳು ಪ್ರಬಲವಾದ ಸೂಪರ್‌ಫುಡ್  ಎಂದರೆ ಅತಿಶಯೋಕ್ತಿಯಲ್ಲ. ಪ್ರತಿ ವರ್ಷ ಫೆಬ್ರವರಿ 10 ಅನ್ನು ವಿಶ್ವ ದ್ವಿದಳ ಧಾನ್ಯಗಳ ದಿನವನ್ನಾಗಿ  ಆಚರಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ದ್ವಿದಳ ಧಾನ್ಯಗಳ 5 ಆರೋಗ್ಯ ಪ್ರಯೋಜನಗಳು:
ಆರೋಗ್ಯಕರ ಪೋಷಣೆ: 
ಮೊದಲೇ ಹೇಳಿದಂತೆ, ಬೇಳೆಕಾಳುಗಳು ಸೂಪರ್‌ಫುಡ್‌ ಲಿಸ್ಟ್ ನಲ್ಲಿ ಬರುತ್ತವೆ. ಇದು ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳು, ಉತ್ಕರ್ಷಣ ನಿರೋಧಕಗಳು ಮತ್ತು ವಿವಿಧ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ  ಸಮೃದ್ದವಾಗಿವೆ. ನಿತ್ಯದ ಆಹಾರದಲ್ಲಿ ಒಂದು ಹಿಡಿ ದಾಲ್, ರಾಜ್ಮಾ ಅಥವಾ  ಕಡಲೆಕಾಳನ್ನು ಸೇರಿಸಿದರೆ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶವನ್ನು ಒದಗಿಸುತ್ತದೆ. 


ಇದನ್ನೂ ಓದಿ : ಬೋಳು ತಲೆಯಲ್ಲಿಯೂ ಕೂದಲು ಬೆಳೆಯುವಂತೆ ಮಾಡುತ್ತದೆ ಈ ಮನೆ ಮದ್ದು


2. ತೂಕ ನಷ್ಟಕ್ಕೆ ಸಹಕಾರಿ : 
ತೂಕ ಇಳಿಸಲು ಬಯಸುವವರಿಗೆ ತಮ್ಮ ಆಹಾರದಲ್ಲಿ ಬೇಳೆ ಕಾಳುಗಳನ್ನು ಸೇವಿಸುವಂತೆ ಸಲಹೆ ಮಾಡಲಾಗುತ್ತದೆ. ಬೇಳೆ ಕಾಳುಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕ ಪ್ರಮಾಣದಲ್ಲಿ ಇರುತ್ತವೆ. ಫೈಬರ್ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಬೇಳೆ ಕಾಳುಗಳಲ್ಲಿರುವ ಪ್ರೋಟೀನ್ ದೀರ್ಘಕಾಲದವರೆಗೆ  ಹೊಟ್ಟೆ ತುಂಬಿರುವಂತೆ ಮಾಡುತ್ತದೆ.  ಈ ರೀತಿಯಾಗಿ ತೂಕ ನಷ್ಟಕ್ಕೆ  ಸಹಾಯ ಮಾಡುತ್ತದೆ.  


3. ಹಿಮೋಗ್ಲೋಬಿನ್ ಮಟ್ಟ ಕಾಪಾಡಲು :
ದಾಲ್ ಕಬ್ಬಿಣ ಮತ್ತು ಅಮೈನೋ ಆಮ್ಲಗಳ ಸಮೃದ್ಧ ಮೂಲವಾಗಿದೆ.  ಇದರ ಸೇವನೆ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳನ್ನು  ನಿಯಂತ್ರಿಸುತ್ತದೆ. 


ಇದನ್ನೂ ಓದಿ : ನೀವೂ ಕೂಡ ಕೇವಲ ಟೇಸ್ಟ್ ನೋಡಿ ಟೂತ್‌ಪೇಸ್ಟ್ ಖರೀದಿಸುತ್ತೀರಾ?


4. ಮಧುಮೇಹವನ್ನು ನಿಯಂತ್ರಿಸುತ್ತದೆ :
ದ್ವಿದಳ ಧಾನ್ಯಗಳಲ್ಲಿ  ಪ್ರೋಟೀನ್‌ ಅಧಿಕ ಪ್ರಮಾಣದಲ್ಲಿರುತ್ತದೆ.  ಇದು  ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತವೆ. ಹೀಗಾಗಿ  ಮಧುಮೇಹದಿಂದ ಬಳಲುತ್ತಿರುವವರಿಗೆ ಇದು ಬೆಸ್ಟ್ ಆಹಾರ.   ಬೇಳೆಕಾಳುಗಳಲ್ಲಿರುವ ಫೈಬರ್ ಕಾರ್ಬೋಹೈಡ್ರೇಟ್‌ಗಳನ್ನು ರಕ್ತದಲ್ಲಿನ ಗ್ಲೂಕೋಸ್ ಆಗಿ ವಿಭಜಿಸುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹಠಾತ್ ಏರಿಕೆಯಾಗುವುದಿಲ್ಲ. 


5. ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ :


ಕಾಳುಗಳು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಅದು ದೇಹದಿಂದ ವಿಷವನ್ನು ಹೊರಹಾಕಲು ಮತ್ತು ದೇಹದಲ್ಲಿ ರಕ್ತ ಮತ್ತು ಆಮ್ಲಜನಕದ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಕೂದಲಿನ ಆರೋಗ್ಯ ಚರ್ಮದ ಪೋಷಣೆಗೆ ಅತ್ಯುತ್ತಮವಾಗಿದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.