ನವದೆಹಲಿ: ಬದಲಾಗುತ್ತಿರುವ ಜೀವನ ಶೈಲಿ ಮತ್ತು ಕಾರ್ಯದೊತ್ತಡದ ಕಾರಣದಿಂದಾಗಿ ಯಾವುದೇ ಯೋಚನೆಯಿಲ್ಲದೆ ಆರಾಮವಾಗಿ ನಿದ್ದೆ ಮಾಡುವುದು ನಿಜಕ್ಕೂ ಕನಸಿನ ಮಾತೇ ಸರಿ. ಮೊಬೈಲ್, ಟಿವಿ, ಕಂಪ್ಯೂಟರ್ ಗಳೂ ಸಹ ನಿದ್ರೆಯನ್ನು ಕಸಿದುಕೊಳ್ಳುತ್ತವೆ. ಹೀಗಾಗಿ ದೇಹಕ್ಕೆ ಅಗತ್ಯವಾದ ನಿದ್ರೆ ಮಾಡದ ಕಾರಣ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ? ಮಾರ್ಚ್ 15ರ  'ವರ್ಲ್ಡ್ ಸ್ಲೀಪ್ ಡೇ' ಸಂದರ್ಭದಲ್ಲಿ ನಿದ್ರೆಯಿಂದಾಗುವ ಪ್ರಯೋಜನಗಳು, ನಿದ್ರಾಹೀನತೆಯಿಂದಾಗುವ ಪರಿಣಾಮಗಳ ಬಗ್ಗೆ ಗಮನಹರಿಸೋಣ.


COMMERCIAL BREAK
SCROLL TO CONTINUE READING

ವಿಶ್ವ ನಿದ್ರಾ ದಿನದ ಪ್ರಯುಕ್ತ ಇತ್ತೀಚೆಗೆ GOQII ಇಂಡಿಯಾ ಸಮೀಕ್ಷೆ ನಡೆಸಿ ವರದಿಯನ್ನು ಪ್ರಕಟಿಸಿದೆ. ಅದರಂತೆ, "ನಿದ್ರಾಹೀನತೆ ಮತ್ತು ಅನಿಯಮಿತ ಜೀವನಶೈಲಿಯು ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಂತಹ ಅಪಾಯಕಾರಿ ರೋಗಗಳಿಗೆ ಕಾರಣವಾಗಬಹುದು" ಎಂದು ಹೇಳಿದೆ.


GOQii India ಅಧ್ಯಯನದ ಪ್ರಕಾರ, ಪೋಷಣೆ, ನೀರು, ಒತ್ತಡ, ನಿದ್ರೆ, ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯ ಆಧಾರದ ಮೇಲೆ ಪ್ರಮುಖ ನಗರಗಳಲ್ಲಿ ಗುಂಪುಗಳನ್ನು ಮಾಡಿ ಮಹಿಳೆಯರು ಮತ್ತು ಪುರುಷರನ್ನು ಸಂದರ್ಶಿಸಿ ಅವರ ನಿದ್ರಾ ಶೈಲಿಯನ್ನು ವಿಶ್ಲೇಷಿಸಲಾಗಿದೆ. ಫಿಟ್ ಇಂಡಿಯಾ ನಡೆಸಿದ ಈ ಅಧ್ಯಯನ ಆಘಾತಕಾರಿ ಅಂಶವೊಂದನ್ನು ಬಹಿರಂಗಪಡಿಸಿದ್ದು, ಪುರುಷರಿಗಿಂತ ಮಹಿಳೆಯರು ಕಡಿಮೆ ನಿದ್ರಿಸುತ್ತಾರೆ ಮತ್ತು ಪುರುಷರಿಗಿಂತ ಹೆಚ್ಚು ಆರಾಮದಾಯಕರಾಗುತ್ತಾರೆ ಎಂದು ಹೇಳಿದೆ. ಈ ವರದಿಯಲ್ಲಿ ನಿದ್ರೆ ಬಗ್ಗೆ ಮತ್ತಷ್ಟು ವಿಚಾರಗಳನ್ನು ತಿಳಿಸಲಾಗಿದೆ...


- ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ನಿದ್ರೆ 6.54 ರಿಂದ 6.85 ಗಂಟೆಗಳವರೆಗೆ ಹೆಚ್ಚಾಗಿದೆ.
- ನಿದ್ರೆಯ ವಿಚಾರದಲ್ಲಿ ಈ ವರ್ಷ ಕೊಲ್ಕತ್ತಾವನ್ನು ಹಿಂದಿಕ್ಕಿರುವ ಚೆನ್ನೈ ಮೊದಲ ಸ್ಥಾನದಲ್ಲಿದೆ. ಈ ಭಾಗದ ಜನರ ಒಟ್ಟು ನಿದ್ರಾ ಸಮಯ 6.31 ಗಂಟೆಯಿಂದ 6.93 ಗಂಟೆಗಳವರೆಗೆ ಹೆಚ್ಚಾಗಿದೆ.
- ಕೇವಲ 19% ಜನರು ಎದ್ದ ಬಳಿಕವೂ ವಿಶ್ರಾಂತಿಯಿಂದ ಮತ್ತು ರಿಫ್ರೆಶ್ ಆಗಿರುತ್ತಾರೆ. ಶೇ.24 ರಷ್ಟು ಜನರು ನಿದ್ರೆಯಿಂದ ಎದ್ದ ಬಳಿಕವೂ ಮತ್ತೆ ನಿದ್ರಿಸುತ್ತಾರೆ ಎನ್ನಲಾಗಿದೆ. 
- ಪುರುಷರು ಮಹಿಳೆಯರಿಗಿಂತ ಸ್ವಲ್ಪ ಹೆಚ್ಚು ನಿದ್ರೆ ಮಾಡುತ್ತಾರೆ.
- ಯುವಜನಾಂಗ ಹೆಚ್ಚು ನಿದ್ದೆ ಮಾಡುತ್ತದೆ. 
- ಹಿರಿಯರು (60+) ಮತ್ತು ಹಿರಿಯ ವಯಸ್ಕರು (45-60) ಕನಿಷ್ಠ ನಿದ್ರೆ ಮಾಡುತ್ತಾರೆ.
- ಶೇ.55 ನಷ್ಟು ಹದಿಹರೆಯದವರು ಗಾಢವಾದ ನಿದ್ರೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಹಿರಿಯರಲ್ಲಿ ಕೇವಲ ಶೇ.21ರಷ್ಟು ಮಂದಿ ಮಾತ್ರ ಗಾಢ ನಿದ್ರೆ ಮಾಡುವುದಾಗಿ ಹೇಳಿದ್ದಾರೆ. 
- ಹಿರಿಯಲ್ಲಿ ಶೇ. 45 ಮಂದಿ ನಿದ್ರೆ ಮಧ್ಯದಲ್ಲಿ ಎಚ್ಚರಗೊಳ್ಳುತ್ತಾರೆ. ಆದರೆ ಕೂಡಲೇ ಮತ್ತೆ ನಿದ್ರೆಗೆ ಜಾರುತ್ತಾರೆ ಎಂದು ವರದಿ ಹೇಳಿದೆ.