Wrapping Towel Around The Body : ನಾವು ಆರೋಗ್ಯವಾಗಿರಬೇಕಾದರೆ ಆಹಾರ ಸೇವನೆ ಎಷ್ಟು ಮುಖ್ಯವೋ ಶುಚಿತ್ವ ಕಾಪಾಡಿಕೊಂಡಿರುವುದು ಕೂಡಾ ಅಷ್ಟೇ ಮುಖ್ಯ. ಅಂದರೆ ನಿತ್ಯ ಸ್ನಾನ ಮಾಡುವುದು ಅತೀ ಅವಶ್ಯಕ. ದೇಹದ ಶುಚಿತ್ವ ಕಾಪಾಡುವ ಸಲುವಾಗಿ ಕೆಲವರು ದಿನಕ್ಕೆ ಒಮ್ಮೆ ಸ್ನಾನ ಮಾಡಿದರೆ ಇನ್ನು ಕೆಲವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದೂ ಇದೆ.  ರೋಗಗಳ ಅಪಾಯವನ್ನು ತಪ್ಪಿಸುವ  ಉದ್ದೇಶದಿಂದಲೇ  ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಹಾಗಿದ್ದರೆ ಶುಚಿತ್ವ ಎಂದರೆ ಬರೀ ಸ್ನಾನಕ್ಕೆ ಮಾತ್ರ ಸೀಮಿತಾನಾ ? ನಾವು ಸ್ನಾನಕ್ಕೆ ಹೋಗುವಾಗ ಟವಲ್ ತೆಗೆದುಕೊಂಡು ಹೋಗುತ್ತೇವೆ. ಸ್ನಾನ ಮುಗಿದ ನಂತರ ಟವಲ್ ಅನ್ನು ಸುತ್ತಿಕೊಂಡು ಹೊರ ಬರುವ ಅಭ್ಯಾಸ ನಮ್ಮಲ್ಲಿ ಬಹುತೇಕ ಮಂದಿಗೆ ಇದೆ. ಆದರೆ ಈ ಅಭ್ಯಾಸ ಎಷ್ಟು ಅಪಾಯಕಾರಿ ಅನ್ನುವ ಮಾಹಿತಿ ಮಾತ್ರ ಹೆಚ್ಚಿನವರಿಗೆ ಇರಲಿಕ್ಕಿಲ್ಲ. ಹೌದು, ರೋಗಗಳನ್ನು ದೂರತಳ್ಳುವ ಸಲುವಾಗಿ ನಿತ್ಯ ಸ್ನಾನ ಮಾಡುವ ನಮ್ಮನ್ನು ಈ ಟವಲ್ ರೋಗಗಳ ಬಾಯಿಗೆ ದೂಡಿ ಬಿಡಬಹುದು. 


COMMERCIAL BREAK
SCROLL TO CONTINUE READING

ಟವೆಲ್ ಅನ್ನು ಹೇಗೆ ಬಳಸಬೇಕು ಎನ್ನುವುದು ತಿಳಿದಿರಲಿ : 
ಟವೆಲ್ ಅನ್ನು ಸರಿಯಾಗಿ ಬಳಸದಿದ್ದರೆ ಅದು ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಸ್ನಾನ ಮುಗಿಸಿಕೊಂಡು ಹೊರ ಬರುವಾಗ ಟವಲ್ ಅನ್ನು ದೇಹಕ್ಕೆ ಅಥವಾ ಕೂದಲಿಗೆ ಸುತ್ತಿಕೊಂಡು ಬರುವ ಅಭ್ಯಾಸ ಪ್ರತಿಯೊಬ್ಬರಿಗೂ ಇರಬಹುದು. ಆದರೆ ಇದು ಬಹಳ ಅಪಾಯಕಾರಿ ಎನ್ನುವುದು ಸಂಶೋಧನೆಗಳಿಂದ ತಿಳಿದು ಬಂದಿರುವ್ಚಾ ಸತ್ಯ. ಯಾಕೆಂದರೆ ಒದ್ದೆ ಟವಲ್ ಗಳು ಹಲವಾರು ಬ್ಯಾಕ್ಟೀರಿಯಾಗಳ ತಾಣವಾಗಿರಬಹುದು. 


ಇದನ್ನೂ ಓದಿ : ಈ ನಾಲ್ಕು ಸಮಸ್ಯೆ ಇದ್ದವರಿಗೆ ವಿಷವಾಗಿ ಪರಿಣಮಿಸಬಹುದು ನೆಲ್ಲಿಕಾಯಿ.!


ಸ್ನಾನಕ್ಕೆ ಬಳಸುವ ಬಳಸುವ ಟವಲ್ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಟವಲ್ ಗಳ ಬಗ್ಗೆ ನಿರ್ಲಕ್ಷ್ಯ ವಹಿಸುವವರೇ ಹೆಚ್ಚು. ನಿತ್ಯ ಧರಿಸುವ ಬಟ್ಟೆಗಳನ್ನು ಅದೇ ದಿನ ತೊಳೆಯುವಂತೆ ಸಾಮಾನ್ಯವಾಗಿ ಟವಲ್ ಗಳನ್ನು ಪ್ರತಿ ದಿನ ಒಗೆಯುವುದಿಲ್ಲ. ಇದರಿಂದಾಗಿ ಟವಲ್ ನಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಈ ಬ್ಯಾಕ್ಟೀರಿಯಾಗಳು ರೋಗಗಳನ್ನು ಹರಡುತ್ತದೆ. ಈ ಬ್ಯಾಕ್ಟೀರಿಯಾಗಳು ಅತಿಸಾರ ಮತ್ತು ಫುಡ್ ಪೋಯಿಸನ್ ನಂಥಹ ಕಾಯಿಲೆಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು . 


ಟವೆಲ್‌ನಲ್ಲಿ  ಬ್ಯಾಕ್ಟೀರಿಯಾ ಹೇಗೆ ಬೆಳೆಯುತ್ತದೆ ? : 
ಸ್ನಾನ ಮಾಡುವಾಗಲೆಲ್ಲಾ ದೇಹವನ್ನು ಒರೆಸಿದ ನಂತರ ಟವೆಲ್ ಒದ್ದೆಯಾಗುತ್ತದೆ. ಹಾಗಾಗಿ ಟವಲ್ ನಲ್ಲಿ ತೇವಾಂಶವು ದೀರ್ಘಕಾಲದವರೆಗೆ ಉಳಿಯುತ್ತದೆ. ಇದು ಟವಲ್ ನಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಮತ್ತೆ ಅದೇ ಟವಲ್ ಅನ್ನು ಬಳಸಿದಾಗ, ಈ  ಬ್ಯಾಕ್ಟೀರಿಯಾಗಳು ನಿಮ್ಮ ದೇಹವನ್ನು ಪ್ರವೇಶಿಸಿ ರೋಗಗಳು ಹರಡಲು ಕಾರಣವಾಗುತ್ತವೆ. 


ಇದನ್ನೂ ಓದಿ : Diabetes : ಮಧುಮೇಹಿಗಳೆ ಬೆಳಗಿನ ಉಪಾಹಾರದಲ್ಲಿ ಮಾಡಬೇಡಿ ಈ ತಪ್ಪುಗಳನ್ನು!


ಹಾಗಿದ್ದರೆ ರೋಗ ಹರಡದಂತೆ ಏನು ಮಾಡಬೇಕು ? 
ಟವೆಲ್ ಮೂಲಕ ಹರಡುವ ರೋಗಗಳನ್ನು ತಪ್ಪಿಸಬೇಕಾದರೆ ಅದನ್ನು  ಆಗಾಗ ಡಿಟರ್ಜೆಂಟ್ ನಿಂದ ಸರಿಯಾಗಿ ಒಗೆಯಬೇಕು. ಹೀಗೆ ಮಾಡಿದಾಗ ಅದರಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಇದಲ್ಲದೇ ಪ್ರತಿ ಬಾರಿ ಸ್ನಾನದ ನಂತರ ಟವೆಲ್ ನಿಂದ ಮೈ ಅಥವಾ ಕೂದಲು ಒರೆಸಿದ ನಂತರ ಟವಲ್ ಅನ್ನು ಬಿಸಿಲಿನಲ್ಲಿ ಒಣಗಲು ಹಾಕಿ. ಹೀಗೆ ಮಾದಿದಾಗ ಸೂರ್ಯನ ಶಾಖಕ್ಕೆ ಟವಲ್ ನಲ್ಲಿರುವ ತೇವಾಂಶ ಒಣಗಿ ಹೋಗುತ್ತದೆ. ರೋಗಾಣುಗಳು ಉತ್ಪತ್ತಿಯಾಗುವುದಿಲ್ಲ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.