Tips To Tame Acidity: ತುಳಸಿ ಗಿಡ ಬಹುತೇಕ ಮನೆಗಳಲ್ಲಿ ಸುಲಭವಾಗಿ ಕಂಡುಬರುವ ಒಂದು ಸಸ್ಯವಾಗಿದೆ. ಇನ್ನೊಂದೆಡೆ, ತುಳಸಿ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಈ ಕಾಯಿಲೆಗಳಲ್ಲಿ ಅಸಿಡಿಟಿ ಸಮಸ್ಯೆಯೂ ಕೂಡ ಒಂದಾಗಿದೆ. ತುಳಸಿ ಸೇವನೆಯು ಆಮ್ಲೀಯತೆಯನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ತುಳಸಿ ಸೇವನೆ ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹೀಗಾಗಿ, ನೀವು ಅಪಚನ ಸಮಸ್ಯೆ ಹೊಂದಿದ್ದರೂ ಕೂಡ ತುಳಸಿಯನ್ನು ಬಳಕೆ ಮಾಡಬಹುದು. ಅಸಿಡಿಟಿ ಸಮಸ್ಯೆಯಲ್ಲಿ ತುಳಸಿ ಬಳಕೆಯನ್ನು ಹೇಗೆ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ಅಸಿಡಿಟಿ ಹೋಗಲಾಡಿಸಲು ತುಳಸಿಯನ್ನು ಈ ರೀತಿ ಬಳಸಿ
ತುಳಸಿ ಎಲೆಗಳು

ಅಸಿಡಿಟಿ ಸಮಸ್ಯೆ ಇರುವುವರು ತುಳಸಿ ಎಲೆಗಳನ್ನು ಸೇವಿಸಬಹುದು. ನೀವು 5 ತುಳಸಿ ಎಲೆಗಳನ್ನು ಸೇವಿಸಿ ನೀರು ಕುಡಿಯಬೇಕು. ನೀವು ತುಳಸಿ ಎಲೆಗಳನ್ನು ಜಗಿದು ಕೂಡ ತಿನ್ನಬೇಕು. ಅಸಿಡಿಟಿ ಸಮಸ್ಯೆ ಇದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಹೆಚ್ಚು ಪ್ರಯೋಜನಕಾರಿ ಸಾಬೀತಾಗುತ್ತದೆ.

ತುಳಸಿ ಕಷಾಯ
ಅಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸಲು ತುಳಸಿಯಿಂದ ತಯಾರಿಸಿದ ಕಷಾಯವನ್ನು ಕೂಡ ನೀವು ಸೇವಿಸಬಹುದು. ಇನ್ನೊಂದೆಡೆ, ತುಳಸಿಯ ಕಷಾಯ ಹೊಟ್ಟೆಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ತುಳಸಿ ಕಷಾಯವನ್ನು ತಯಾರಿಸಲು ಅಜ್ವಾಯಿನ್, ಲವಂಗ ಮತ್ತು ತುಳಸಿ ಎಲೆಗಳನ್ನು ಪುಡಿಮಾಡಿ ಬಿಸಿನೀರಿನಲ್ಲಿ ಹಾಕಿ ಕುದಿಯಲು ಬಿಡಿ. ಈಗ ಅದು ಗಟ್ಟಿಯಾದ ನಂತರ, ಮಿಶ್ರಣವನ್ನು ಫಿಲ್ಟರ್ ಮಾಡಿ ಮತ್ತು ಕುಡಿಯಿರಿ.

ತುಳಸಿ ಚೂರ್ಣ
ಅಸಿಡಿಟಿ ಸಮಸ್ಯೆ ನಿವಾರಣೆಗೆ ನೀವು ತುಳಸಿ ಚೂರ್ಣವನ್ನು ಕೂಡ ಸೇವಿಸಬಹುದು. ಇದಕ್ಕಾಗಿ ನೀವು 1 ರಿಂದ 3 ಗ್ರಾಂ ತುಳಸಿ ಚೂರ್ಣವನ್ನು ಕೂಡ ಸೇವಿಸಬಹುದು. ತುಳಸಿ ಬೀಜಗಳು ಹಾಗೂ ಒಣ ಎಲೆಗಳ ಜೊತೆಗೆ ಅಜ್ವಾಯಿನ್, ಸೌಂಪ್ಹ್ ಹಾಗೂ ಲವಂಗವನ್ನು ಬೆರೆಸಿ ಚೂರ್ಣ ತಯಾರಿಸಿ ಅದನ್ನು ಸೇವಿಸಬಹುದು.  


ಇದನ್ನೂ ಓದಿ-ಆರೋಗ್ಯವಂತ-ದಟ್ಟವಾದ ಕಪ್ಪುಕೂದಲು ಪಡೆಯಬೇಕೆ? ಈ ಎಲೆಗಳ ಮಾಸ್ಕ್ ರಾಮಬಾಣ!

ತುಳಸಿ ನೀರು 
ಅಸಿಡಿಟಿ ಇರುವ ಸಂದರ್ಭದಲ್ಲಿ ನೀವು ತುಳಸಿ ನೀರನ್ನು ಕೂಡ ಸೇವಿಸಬಹುದು. ಅನೇಕ ಜನರು ತುಳಸಿ ಎಲೆಗಳನ್ನು ಅಗೆಯುವಾಗ ಕಹಿಯನ್ನು ಅನುಭವಿಸುತ್ತಾರೆ, ಆದ್ದರಿಂದ ನೀವು ತುಳಸಿಯನ್ನು ನೀರಿನೊಂದಿಗೂ ಕೂಡಸೇವಿಸಬಹುದು. ಇದಕ್ಕಾಗಿ, ನೀವು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ, ನಂತರ ನೀರನ್ನು ಫಿಲ್ಟರ್ ಮಾಡಿ ಸೇವಿಸಬಹುದು.


ಇದನ್ನೂ ಓದಿ-ಹೃದಯಾಘಾತ ಬರುವ ಒಂದು ತಿಂಗಳು ಮುನ್ನ ಶೇ.95 ರಷ್ಟು ಮಹಿಳೆಯರಲ್ಲಿ ಈ ಲಕ್ಷಣಗಳು ಕಾಣಿಸುತ್ತವೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.