Diabetes Tips: ಇಂದಿನ ಹಾಳಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ನಮ್ಮ ದೇಹವು ಅನೇಕ ರೋಗಗಳ ಹಿಡಿತಕ್ಕೆ ಸಿಲುಕಿದೆ. ಅಂತಹ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಹೆಚ್ಚಳದಿಂದ ಉಂಟಾಗುತ್ತದೆ. ಒಮ್ಮೆ ನೀವು ಮಧುಮೇಹಕ್ಕೆ ಬಲಿಯಾದರೆ, ಅದನ್ನು ನಿಯಂತ್ರಿಸಲು ನೀವು ಔಷಧಿಗಳ ಆಜೀವ ಬೆಂಬಲ ಪಡೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಕೆಲವು ಮನೆಮದ್ದುಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ನೀವು ಒಂದೇ ರಾತ್ರಿಯಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು, ಹಾಗಾದರೆ ಬನ್ನಿ ರಾತ್ರೋರಾತ್ರಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೇಗೆ ನಿಯಂತ್ರಿಸಬೇಕು ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸುವುದು ಹೇಗೆ
ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು 400 mg/dL ಗಿಂತ ಹೆಚ್ಚಿದ್ದರೆ ನೀವು ಹರದ್, ಆಮ್ಲಾ ಮತ್ತು ಬಹೇದ (ಅಳಲೆಕಾಯಿ, ನೆಲ್ಲಿಕಾಯಿ ಹಾಗೂ ತಾರೆಕಾಯಿ) ಚೂರ್ಣವನ್ನು ಸೇವಿಸಬಹುದು. ಇದರಿಂದ ನೀವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.  ಅಷ್ಟೇ ಅಲ್ಲ, ಈ ಚೂರ್ಣವನ್ನು ಸೇವಿಸುವುದರಿಂದ ನಿಮ್ಮ ವಾತ, ಪಿತ್ತ ಮತ್ತು ಕಫವೂ ಸಹ ನಿವಾರಣೆಯಾಗುತ್ತವೆ. ಇದರೊಂದಿಗೆ ಆಟೋಇಮ್ಯೂನ್ ರೋಗಗಳೂ ನಿಯಂತ್ರಣದಲ್ಲಿರುತ್ತವೆ.


ನೀವು ಆಮ್ಲಾ ಪುಡಿಯನ್ನು ಸೇವಿಸಿದರೆ, ನಿಮ್ಮ ಜೀರ್ಣಕ್ರಿಯೆಯು ಸುಧಾರಿಸುತ್ತದೆ. ಆಮ್ಲಾದಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿವೆ, ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ನೀವು ರಕ್ತದಲ್ಲಿನ ಸಕ್ಕರೆಯ ರೋಗಿಗಳಾಗಿದ್ದರೆ, ತ್ರಿಫಲಾ ಪುಡಿಯನ್ನು ಸೇವಿಸುವುದರಿಂದ ಅದು ನಿಮ್ಮ ಪಾಲಿಗೆ ರಾಮಬಾಣವೆಂದು ಸಾಬೀತಾಗಬಹುದು.


ಇದನ್ನೂ ಓದಿ-Monsoon Tips: ಮಳೆಗಾಲದ ಋತುವಿನಲ್ಲಿ ಕಾಮಾಲೆ ರೋಗ ನಿಯಂತ್ರಣಕ್ಕೆ ಇಂದಿನಿಂದಲೇ ಅನುಸರಿಸಿ ಈ ಆಹಾರ ಕ್ರಮ!


ನೀವು ಮಧುಮೇಹಿಗಳಾಗಿದ್ದರೆ, ಪ್ರತಿದಿನ ಬೆಳಿಗ್ಗೆ ಕರಿಬೇವಿನ ಎಲೆಗಳನ್ನು ಜಗಿಯುವುದು ಪ್ರಯೋಜನಕಾರಿಯಾಗಿದೆ. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಣದಲ್ಲಿರುತ್ತದೆ. ಅದೇ ಪ್ರಭಾವ ಮೆಂತ್ಯ ಬೀಜಗಳಲ್ಲಿ ಕಂಡುಬರುತ್ತದೆ, ಇದು ಟೈಪ್ 2 ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ವಾಸ್ತವದಲ್ಲಿ, ಮೆಂತ್ಯ ಬೀಜಗಳಲ್ಲಿ ಇರುವ ಫೈಬರ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುವುದಿಲ್ಲ.


ಇದನ್ನೂ ಓದಿ-Health Tips: ಮಧುಮೇಹ ನಿಯಂತ್ರಣದ ಜೊತೆಗೆ ಹೃದ್ರೋಗದಿಂದ ಕೂಡ ರಕ್ಷಿಸುತ್ತದೆ ಈ ತರಕಾರಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.