ತೂಕ ಇಳಿಕೆಗೆ ತುಂಬಾ ಪರಿಣಾಮಕಾರಿಯಾಗಿದೆ ಮನೆಯಲ್ಲಿನ ಈ ಸಾಂಬಾರ ಪದಾರ್ಥ
Weight Loss Tips: ತೂಕ ಇಳಿಕೆ ಮಾಡಿಕೊಳ್ಳಲು ಹಸಿರು ಚಹಾವನ್ನು ನೀವು ಹಲವಾರು ಬಾರಿ ಸೇವಿಸಿರಬಹುದು. ಆದರೆ, ಒಂದು ವಿಶೇಷ ರೀತಿಯ ಹರ್ಬಲ್ ಟೀ ಕುಡಿದು ಕೂಡ ನೀವು ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು. ಅದರ ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.
Bay Leaf For Weight Loss: ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಲು ಬಯಸುವ ಹಲವು ಜನರಿದ್ದಾರೆ ಮತ್ತು ಅದಕ್ಕಾಗಿ ಅವರು ಜಿಮ್ ನಲ್ಲಿ ಹಲವು ಗಂಟೆಗಳ ಕಾಲ ಬೆವರು ಸುರಿಸುತ್ತಾರೆ. ಆದರೆ, ಕೆಲವೊಮ್ಮೆ ಎಷ್ಟೆಲ್ಲಾ ಕಷ್ಟಪಟ್ಟರೂ ಕೂಡ ತೂಕ ಇಳಿಕೆ ಕಷ್ಟಸಾಧ್ಯ ಎನಿಸಲಾರಂಭಿಸುತ್ತದೆ. ಮೊದಲನೆಯದಾಗಿ ಸ್ಥೂಲಕಾಯ ಒಂದು ರೋಗವಲ್ಲ. ಆದರೆ, ಇದು ಖಂಡಿತವಾಗಿಯೂ ಹಲವು ರೋಗಗಳಿಗೆ ದಾರಿಮಾಡಿಕೊಡುತ್ತದೆ. ಸ್ಥೂಲಕಾಯ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತದೆ, ಹೃದಯಾಘಾತ, ಮಧುಮೇಹ, ಪರಿಧಮನಿಯ ಕಾಯಿಲೆ ಹಾಗೂ ಟ್ರಿಪ್ಪಲ್ ವೆಸ್ಸೆಲ್ ಡಿಸೀಜ್ ನಂತಹ ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಒಂದು ವಿಶೇಷ ಎಲೆಯನ್ನು ಸೇವಿಸುವುದು ತುಂಬಾ ಮುಖ್ಯ,
ತಮಾಲ ಪತ್ರದಲ್ಲಿ ಕಂಡುಬರುವ ಪೋಷಕಾಂಶಗಳು
ಈ ಲೇಖನದಲ್ಲಿ ನಾವು ತಮಾಲ ಪತ್ರದ ಕುರಿತು ಚರ್ಚೆಯನ್ನು ನಡೆಸುತ್ತಿದ್ದೇವೆ. ಸಾಮಾನ್ಯವಾಗಿ ಮನೆಯ ಅಡುಗೆ ಮನೆಯಲ್ಲಿ ಈ ಎಲೆ ಸಾಂಬಾರ ಪದಾರ್ಥದ ರೂಪದಲ್ಲಿ ಬಳಕೆಯಾಗುತ್ತದೆ. ಹಲವು ಪಾಕವಿಧಾನಗಳಲ್ಲಿ ಪರಿಮಳವನ್ನು ಹೆಚ್ಚಿಸಲು ಈ ಎಲೆಯನ್ನು ಬಳಕೆ ಮಾಡಲಾಗುತ್ತದೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ6, ರೈಬೋಫ್ಲಾವಿನ್, ಸತು, ಫೈಬರ್, ಪ್ರೋಟೀನ್, ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಇದರಲ್ಲಿ ಕಂಡುಬರುತ್ತದೆ. ಇದು ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ಹೊಂದಿದ್ದರೂ, ವಿಶೇಷವಾಗಿ ತೂಕ ಇಳಿಕೆಗೆ ಇದನ್ನು ನೀವು ಬಳಸಬಹುದು.
ಇದನ್ನೂ ಓದಿ-ನೈಸರ್ಗಿಕ ಪದ್ಧತಿಯಿಂದ ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಬೇಕೇ? ಇಂದಿನಿಂದಲೇ ಈ ಸೂಪ್ ಸೇವನೆ ಆರಂಭಿಸಿ
ತಮಾಲ ಪತ್ರ ಚಹಾವನ್ನು ತಯಾರಿಸುವುದು ಹೇಗೆ?
ತಮಾಲ ಪತ್ರದ ಚಹಾವನ್ನು ತಯಾರಿಸುವುದು ತುಂಬಾ ಸುಲಭ, ಇದು ಯಾವುದೇ ಆಯುರ್ವೇದ ಔಷಧಿಗಿಂತ ಕಡಿಮೆಯಿಲ್ಲ. ಇದಕ್ಕಾಗಿ, ಒಂದು ಬಾಣಲೆಯಲ್ಲಿ ಚಿಟಿಕೆ ದಾಲ್ಚಿನ್ನಿ ಪುಡಿ, ತಮಾಲ ಪತ್ರ, ನಿಂಬೆ, ಜೇನುತುಪ್ಪ ಮತ್ತು 2 ಕಪ್ ನೀರು ತೆಗೆದುಕೊಂಡು ಎಲ್ಲವನ್ನೂ ಮಿಶ್ರಣ ಮಾಡಿ. ಗ್ಯಾಸ್ ಸ್ಟವ್ ಮೇಲೆ ಇರಿಸಿ, ಅದನ್ನು 10 ನಿಮಿಷ ಬೇಯಿಸಿ. ಈಗ ಈ ಚಹಾವನ್ನು ಫಿಲ್ಟರ್ ಮಾಡಿ ಮತ್ತು ನಿಧಾನವಾಗಿ ಕುಡಿಯಿರಿ. ಇದಕ್ಕೆ ಉಪ್ಪು ಮತ್ತು ನಿಂಬೆ ಸೇರಿಸಲಾಗುತ್ತದೆ ಇದರಿಂದ ಟೇಸ್ಟ್ ಉತ್ತಮವಾಗಿರುತ್ತದೆ. ನೀವು ನಿಯಮಿತವಾಗಿ ಈ ಚಹಾವನ್ನು ಸೇವಿಸಿದರೆ, ಇದು ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-ಪುರುಷ ಅಥವಾ ಮಹಿಳೆ, ಯಾರಿಗೆ ಕ್ಯಾನ್ಸರ್ ಅಪಾಯ ಹೆಚ್ಚು?
ತೂಕ ಇಳಿಕೆಗೆ ತಮಾಲ ಪತ್ರ ಹೇಗೆ ಸಹಾಯ ಮಾಡುತ್ತದೆ?
>> ಇಂಗ್ಲಿಷ್ ನಲ್ಲಿ ಬೇ ಲೀಫ್ ಎಂದೇ ಕರೆಯಲಾಗುವ ಈ ಎಲೆ ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ.
>> ಬೇ ಲೀಫ್ ಚಹಾವು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.
>> ಈ ಚಹಾ ಕುಡಿಯುವುದರಿಂದ ದೇಹದಲ್ಲಿನ ಹೆಚ್ಚುವರಿ ಕೊಬ್ಬು ಸುಡುತ್ತದೆ.
>> ತಮಾಲ ಪತ್ರ ಚಹಾವನ್ನು ಕುಡಿಯುವುದರಿಂದ ದೇಹ ನಿರ್ವಿಷಗೊಳ್ಳುತ್ತದೆ.
ಇದನ್ನೂ ಓದಿ- ಬಿಳಿ ಕೂದಲು, ಕೂದಲುದುರುವಿಕೆ ಸಮಸ್ಯೆಗೆ ರಾಮಬಾಣ ಉಪಾಯ ಈ ಗಿಡದ ಎಲೆಗಳು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್