ಅರ್ಜೆಂಟೀನಾದ ಕಂಪನಿಯೊಂದು ಹೊಸ ರೀತಿಯ ಕಾಂಡೋಮ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರ ವಿಶೇಷತೆ ಏನೆಂದರೆ ಈ ಕಂಪನಿ ತಯಾರಿಸಿರುವ ಹೊಸ ಕಾಂಡೋಮ್ ಓಪನ್ ಮಾಡಲು ಒಂದಲ್ಲ, ಎರಡಲ್ಲ, ನಾಲ್ಕು ಕೈಗಳು ಬೇಕಂತೆ!!!


COMMERCIAL BREAK
SCROLL TO CONTINUE READING

ಹೌದು, ಸೆಕ್ಸ್ ಆಟಿಕೆಗಳು ಮತ್ತು ಕಾಂಡೋಮ್ ಗಳ ತಯಾರಕ ಕಂಪನಿ ಟುಲಿಪಾನ್ ನೂತನ ಕಾಂಡೋಮ್ ಗಳನ್ನು ತಯಾರಿಸಿದ್ದು, ಇದಕ್ಕೆ ಜಾಹಿರಾತು ವಿನ್ಯಾಸಗೊಳಿಸಿರುವ BBDA ಅರ್ಜೆಂಟೀನಾ ಸಂಸ್ಥೆ, ಲೈಂಗಿಕ ಕ್ರಿಯೆಗೆ ಸಂಗಾತಿಯ ಸಮ್ಮತಿ ಇದ್ದರೆ ಮಾತ್ರ ಸಂತೋಷ ಸಿಗಲು ಸಾಧ್ಯ ಎಂಬುದನ್ನು ಜನತೆಗೆ ತಿಳಿಸುವ ಉದ್ದೇಶದಿಂದ ನಾಲ್ಕು ಕೈಗಳಿಂದ ಓಪನ್ ಮಾಡುವಂತಹ ಕಾಂಡೋಮ್ ಪ್ಯಾಕ್ಗಳನ್ನು ಸಿದ್ಧಪಡಿಸಿದೆ. ಇದಕ್ಕೆ 'ಸಮ್ಮತಿ ಇಲ್ಲದಿದ್ದರೆ ಸುಖವಿಲ್ಲ' ಎಂಬ ಟ್ಯಾಗ್ ಲೈನ್ ಇರುವ ಪ್ರಮೋಷನಲ್ ವೀಡಿಯೋ ಬಿಡುಗಡೆ ಮಾಡಿದೆ. ಕಾಂಡೋಮ್ ಪ್ಯಾಕ್ ಮೇಲೆ ನಾಲ್ಕು ಬಟನ್ ಗಳನ್ನು ಅಳವಡಿಸಲಾಗಿದ್ದು, ಇದನ್ನು ಓಪನ್ ಮಾಡಲು ಇಬ್ಬರು ಬೇಕಾಗುತ್ತದೆ. 



ಈ ಬಗ್ಗೆ ಸಿಎನ್ಎನ್ ಗೆ ಹೇಳಿಕೆ ನೀಡಿರುವ ಬಿಬಿಡಿಓ ಅರ್ಜೆಂಟೈನಾದ ಕಾರ್ಯನಿರ್ವಾಹಕ ಸೃಜನಾತ್ಮಕ ನಿರ್ದೇಶಕರಾದ ಜೋಕ್ವಿನ್ ಕ್ಯಾಂಪಿನ್ಸ್ ಮತ್ತು ಕ್ರಿಶ್ಚಿಯನ್ ರೋಸ್ಲಿ ಅವರು, ಟುಲಿಪಾನ್ ಯಾವಾಗಲೂ ಸುರಕ್ಷಿತ ಸುಖಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಆದರೆ ಈ ಕ್ಯಾಂಪೇನ್ ನಲ್ಲಿ ಪ್ರತಿ ಲೈಂಗಿಕ ಸಂಬಂಧದಲ್ಲೂ ಪ್ರಮುಖ ವಿಷಯದ ಬಗ್ಗೆ ಮಾತನಾಡುವ ಅಗತ್ಯವಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡು, ಸಂಗಾತಿಗಳಿಬ್ಬರ ಸಮ್ಮತಿ ಇದ್ದಾಗ ಮಾತ್ರ ಲೈಂಗಿಕ ಸುಖ ಸಾಧ್ಯ ಎಂಬುದನ್ನು ಈ ಮೂಲಕ ಜನತೆಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ ಎಂದಿದ್ದಾರೆ. 


ಮುಂದಿನ ದಿನಗಳಲ್ಲಿ ಕಂಪನಿಯು ಈ ಹೊಸ ಕಾಂಡೋಮ್ ಅನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಿದೆ.