ಬೆಂಗಳೂರು: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಕೂದಲಿನ ಮೇಲೆ ಅದರ ಪರಿಣಾಮಗಳು ಗೋಚರಿಸುತ್ತವೆ. ಅಮೆರಿಕದಲ್ಲಿ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಅಥವಾ ಕೂದಲು ಉದುರುವುದು ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್‌ನ ಸಂಕೇತವಾಗಿದೆ ಎಂದು ಅಧ್ಯಯನಗಳು ತೋರಿಸಿವೆ. ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು (ಎಲ್‌ಡಿಎಲ್ ಕೊಲೆಸ್ಟ್ರಾಲ್) ಅದನ್ನು ಸಮಯಕ್ಕೆ ಗುರುತಿಸುವುದು ಬಹಳ ಮುಖ್ಯ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ. ಈ ಅಧ್ಯಯನವನ್ನು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.


COMMERCIAL BREAK
SCROLL TO CONTINUE READING

ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಮೆರಿಕದ ಸಂಶೋಧಕರು ಮೊದಲು ಇಲಿಗಳ ಮೇಲೆ ಈ ಸಂಶೋಧನೆ ನಡೆಸಿದ್ದಾರೆ. ಇದಕ್ಕಾಗಿ, ಇಲಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ, ಅವುಗಳ ವಯಸ್ಸು ಸುಮಾರು 12 ವಾರಗಳಷ್ಟಗಿತ್ತು. ಒಂದು ಗುಂಪಿಗೆ ನಿಯಮಿತವಾದ ಆಹಾರವನ್ನು ನೀಡಲಾಯಿತು, ಆದರೆ ಇನ್ನೊಂದು ಗುಂಪಿಗೆ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅಧಿಕವಾಗಿರುವ ಆಹಾರವನ್ನು ನೀಡಲಾಗಿತ್ತು.


ಸಂಶೋಧನೆಯಲ್ಲಿ ಕಂಡುಬಂದಿದ್ದೇನು?
36 ವಾರಗಳ ನಂತರ, ಹೆಚ್ಚಿನ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಆಹಾರವನ್ನು ಸೇವಿಸುವ ಇಲಿಗಳು ಕೂದಲು ಉದುರಲು ಪ್ರಾರಂಭಿಸಿದವು ಮತ್ತು ಅವುಗಳ ಕೂದಲು ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭವಾಗಿದ್ದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. 75 ರಷ್ಟು ಇಲಿಗಳು ತೀವ್ರ ಕೂದಲು ಉದುರುವಿಕೆಯನ್ನು ಅನುಭವಿಸಿದ್ದವು ಎಂದು ಅಧ್ಯಯನವು ಕಂಡುಹಿಡಿದಿದೆ. 'ಹೆಚ್ಚಿನ ಕೊಲೆಸ್ಟ್ರಾಲ್ ಆಹಾರವು ಕೂದಲು ಉದುರುವಿಕೆ ಮತ್ತು ಬೂದು ಬಣ್ಣಕ್ಕೆ ಕಾರಣವಾಗುತ್ತದೆ ಎಂದು ನಮ್ಮ ಸಂಶೋಧನೆಗಳು ಸೂಚಿಸುತ್ತವೆ' ಎಂದು ಸಂಶೋಧಕರು ಹೇಳಿದ್ದಾರೆ.


ಇದನ್ನೂ ಓದಿ-ಹೃದಯದ ಆರೋಗ್ಯಕ್ಕೆ ಲಾಭಕಾರಿ ಈ ಹಸಿರು ಈರುಳ್ಳಿ, ಹೇಗೆ ಬಳಸಬೇಕು ಇಲ್ಲಿ ತಿಳಿದುಕೊಳ್ಳಿ!


ಅಧಿಕ ಕೊಲೆಸ್ಟ್ರಾಲ್‌ನ ಅನಾನುಕೂಲತೆಗಳೇನು
- ಮೆದುಳು, ಕಣ್ಣುಗಳು, ಹೃದಯ, ಮೂತ್ರಪಿಂಡಗಳು ಮತ್ತು ಕೆಳಗಿನ ದೇಹದ ಅಂಗಗಳ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಗಳು ಕಂಡುಬರುತ್ತವೆ.
- ಕೊಲೆಸ್ಟ್ರಾಲ್ ಹೃದಯಾಘಾತದ ಸಾಧ್ಯತೆಯನ್ನು ಬಹುಪಾಲು ಹೆಚ್ಚಿಸುತ್ತದೆ.
- ಕಣ್ಣುಗಳ ಕಡೆಗೆ ರಕ್ತದ ಹರಿವು ನಿಲ್ಲುತ್ತದೆ, ಇದರಿಂದಾಗಿ ದೃಷ್ಟಿ ಸಂಪೂರ್ಣವಾಗಿ ಹಾಳಾಗಬಹುದು. 


ಇದನ್ನೂ ಓದಿ-ಡೈಬಿಟೀಸ್ ಸೇರಿದಂತೆ ಈ 8 ಕಾಯಿಲೆಗಳಿಗೆ ವರದಾನಕ್ಕೆ ಸಮಾನ ಈ ನೀರು!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ