ಕಾಯಿಲೆಯಿಂದ ಮಗುವನ್ನು ಕಾಪಾಡಬೇಕಿದೆ ತಾಯಿ; ಕುಟುಂಬಕ್ಕೆ ಬೇಕಿದೆ ನೆರವಿನ ಹಸ್ತ
Thalassemia Disease: ಈ ಮಗು ಒಮ್ಮೆ ನೋಡಿ ಬಿಡಿ, ಮುಗ್ಧ ಕಂದ ಮುದ್ದು ಮುದ್ದಾದ ಕೈಗಳಿಂದ ಆಟವಾಡುತ್ತ ತಾಯಿಯ ನೋವನ್ನು ಮರೆಸುತ್ತಿರುವ ಪುಟ್ಟ ಬಾಲಕ. ಮಗನ ಜೀವನವೇ ತನ್ನ ಬದುಕು ಎಂದುಕೊಂಡಿರುವ ತಾಯಿ.
Thalassemia Disease: ಅದು ಎರಡು ಕಣ್ಣುಗಳಂತಿದ್ದ ಅವಳಿ ಮಕ್ಕಳ ಚಂದದ ಕುಟುಂಬ. ಆದರೆ ಕುಟುಂಬಕ್ಕೆ ಈಗ ಬರಸಿಡಿಲು ಬಡೆದಂತಾಗಿದೆ. ಘನಘೋರ ಕಾಯಿಲೆಯ ನೋವು ಒಂದು ಕಡೆಯಾದರೇ ಮತ್ತೊಂದು ಕಡೆಯಲ್ಲಿ ಕುಟುಂಬದ ನಿರ್ವಹಣೆಯ ಸಮಸ್ಯೆ. ಇದ್ದೊಬ್ಬ ಮಗನನ್ನು ಕೂಡ ಬದುಕಿಸಿಕೊಳ್ಳಲು ಆಗದಂತ ಬಡತನ ಈ ಕುಟುಂಬಕ್ಕೆ ಬಂದೊದಗಿದೆ. ಅಷ್ಟಕ್ಕೂ ಏನಿದು ಈ ಸ್ಟೋರಿ? ಏನಿದು ಕಣ್ಣಂಚಿನಲ್ಲಿ ಜಿನಗುವ ಕಣ್ಣೀರ ಕಹಾನಿ...
ಈ ಮಗು ಒಮ್ಮೆ ನೋಡಿ ಬಿಡಿ, ಮುಗ್ಧ ಕಂದ ಮುದ್ದು ಮುದ್ದಾದ ಕೈಗಳಿಂದ ಆಟವಾಡುತ್ತ ತಾಯಿಯ ನೋವನ್ನು ಮರೆಸುತ್ತಿರುವ ಪುಟ್ಟ ಬಾಲಕ. ಮಗನ ಜೀವನವೇ ತನ್ನ ಬದುಕು ಎಂದುಕೊಂಡಿರುವ ತಾಯಿ. ಇದೆಲ್ಲ ಮನಕಲಕುವ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಅಶೋಕನಗರದ ಡಾ.ಡಿ.ಎಸ್.ಕರ್ಕಿ ಕನ್ನಡ ಭವನ. ಹೌದು.. ಅನುವಂಶಿಕವಾಗಿ ಬಂದ ಥಲಸ್ಸೆಮಿಯಾ(ಮೇಜರ್)ಕಾಯಿಲೆಗೆ ತುತ್ತಾದ ಅವಳಿ ಜವಳಿ ಜನಿಸಿದ ಒಂದು ಮಗುವನ್ನು ಕಳೆದುಕೊಂಡ ತಾಯಿ, ಈಗ ಬದುಕುಳಿದ ಇನ್ನೊಂದು ಮಗುವಿನ ಪ್ರಾಣ ಭಿಕ್ಷೆ ಬೇಡುತ್ತಿದ್ದಾಳೆ. ಈ ಮಗುವಿನ ಶಸ್ತ್ರ ಚಿಕಿತ್ಸೆಗೆ ಕನಿಷ್ಠ 40 ಲಕ್ಷ ರೂ. ಹೊಂದಿಸಲು ತಾಯಿ ಅಕ್ಷರಶಃ ಹೆಣಗಾಡುತ್ತಿದ್ದಾಳೆ.
ಇದನ್ನೂ ಓದಿ- ಮಾಜಿ ಸಿಎಂ ಕುಮಾರಸ್ವಾಮಿಗೆ ಕಾಡುತ್ತಿದೆ ‘ಆಪರೇಷನ್ ಹಸ್ತ’ದ ಭಯ!
ಇಲ್ಲಿನ ಅಶೋಕ ನಗರದ ಶಾಹೀನ್ ಬೇಗಮ್ ಎಂಬುವರ 16 ತಿಂಗಳ (ರಿಯಾಜ್‌ನ)ಗಂಡು ಮಗು ಈ ಸಮಸ್ಯೆ ಎದುರಿಸುತ್ತಿದ್ದು, ಮಾಜಿ ಸಿಎಂ ಬೊಮ್ಮಾಯಿ ಸೇರಿದಂತೆ ಸ್ಥಳೀಯ ಜನಪ್ರತಿನಿಗಳು ಮಗುವಿನ ಶಸ್ತ್ರಚಿಕಿತ್ಸೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಅದಾವ ಭರವಸೆಯೂ ಈಡೇರುವ ಸೂಚನೆ ಕಾಣುತ್ತಿಲ್ಲ.
ರಾಜಕೀಯದಲ್ಲಿ ಯತೀಂದ್ರ ಸಿದ್ದರಾಮಯ್ಯ ಲಿಸ್ಟ್ ವಿಡಿಯೋ ಸಂಚಲನ!
ಧಾರವಾಡ ಜಿಲ್ಲೆಯ ಅಣ್ಣೀಗೇರಿ ತಾಲೂಕಿನ ಭದ್ರಾಪೂರದ ನಿವಾಸಿ ಪೀರ್‌ಸಾಬ್ ಎಂಬವರ ಮಗಳಾದ ಶಾಹೀನ್‌ಳನ್ನು ಸೈದಾಪೂರದ ಖಾಜಾಸಾಬ್ ಅಬ್ಬಿಗೇರಿ ಜತೆ ವಿವಾಹ ಮಾಡಲಾಗಿತ್ತು. ವಿವಾಹದ ನಂತರ ಜನಿಸಿದ ಅವಳಿ ಮಕ್ಕಳು ಥಲಸ್ಸೆಮಿಯಾ ಕಾಯಿಲೆಯಿಂದ ಬಳಲಿದವು. ಎರಡು ಮಗುವಿಗೂ ಪ್ರತಿ ತಿಂಗಳು ರಕ್ತದಾನಿಗಳು ಸಿಗದೆ ಸವಾಲಾಯಿತು. ರಕ್ತದ ಮಾದರಿಯಲ್ಲಿ ಕೊಂಚ ವ್ಯತ್ಯಾಸಗಿದ್ದರಿಂದ ಒಂದು ಗಂಡು ಮಗು ಸಾವನ್ನಪ್ಪಿದೆ. ಈ ಘಟನೆಯಿಂದ ಜರ್ಜರಿತಳಾದ ಶಾಹೀನ್‌ಗೆ ಅವರ ಗಂಡನ ಮನೆಯವರು ಸಹ ಆಶ್ರಯ ನೀಡದೇ, ಹೊರಹಾಕುವ ಮೂಲಕ ಮತ್ತೊಂದು ಆಘಾತ ನೀಡಿದ್ದಾರೆ. ಮಗುವಿಗೆ 5ವರ್ಷ ತುಂಬುವುದರೊಳಗೆ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ. ಅದಕ್ಕಾಗಿ ದಾನಿಗಳ ಸಹಾಯ ಹಸ್ತಕ್ಕಾಗಿ ಕಾಯುತ್ತಿದೆ ತಾಯಿ ಜೀವ.
ಒಟ್ಟಿನಲ್ಲಿ ಮಗುವಿಗೆ ಪ್ರತಿ ತಿಂಗಳು ಕಡ್ಡಾಯವಾಗಿ ಓ ಪಾಸಿಟಿವ್ ರಕ್ತ ಹಾಕಿಸುತ್ತಲೇ ಇರಬೇಕಿದೆ. ಕೆಲವೊಮ್ಮೆ ರಕ್ತವನ್ನು ಹಣ ಭರಿಸಿಯೇ ತಂದು ಹಾಕಿಸಿದ ಉದಾಹರಣೆ ಸಾಕಷ್ಟಿವೆ. ಹುಬ್ಬಳ್ಳಿ ಅಶೋಕ ನಗರದ ಡಾ.ಡಿ.ಎಸ್.ಕರ್ಕಿ ಕನ್ನಡ ಭವನದ ಸೆಕ್ಯೂರಿಟಿ ಆಗಿರುವ ತಂದೆ ಫೀರ್‌ಸಾಬ್‌ನ ಆಶ್ರಯದಲ್ಲಿ ಒಂದು ಚಿಕ್ಕ ಶೇಡ್‌ನಲ್ಲಿ ಶಾಹೀನ್ ಜೀವನ ಸಾಗಿಸುತ್ತಿದ್ದಾಳೆ. ಸಹೃದಯಿ ದಾನಿಗಳು ಆರ್ಥಿಕ ಸಹಾಯ ಮಾಡಿ ಮಗುವಿನ ಜೀವ ಉಳಿಸಬೇಕಿದೆ.
ಸಹಾಯ ಮಾಡುವವರು..
6362702015,9964595527 ದೂರವಾಣಿ ಸಂಪರ್ಕಿಸಬಹುದು.
ಕೆನರಾ ಬ್ಯಾಂಕ್ ಅಕೌಂಟ್ ನಂಬರ್- 0501108028402
ಐಎಫ್‌ಎಸ್‌ಸಿ ನಂ.: ಸಿಎನ್‌ಆರ್‌ಬಿ 0000501 ಅಣ್ಣಿಗೇರಿ ಶಾಖೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.