ಕಾಂಗ್ರೆಸ್‌ನವರು ನಿಜವಾದ ಹಿಂದುಗಳು- ಸಚಿವ ರಾಮಲಿಂಗರೆಡ್ಡಿ
ನಾವು ಶ್ರದ್ಧೆ, ಭಕ್ತಿಯಿಂದ ರಾಮನನ್ನ ಪೂಜೆ ಮಾಡ್ತೇವಿ. ಕಾಂಗ್ರೆಸ್‌ನವರು ನಿಜವಾದ ಹಿಂದುಗಳು. ನಾವು ಯಾವತ್ತೂ ಕೂಡ ರಾಜಕಾರಣಕ್ಕೆ ಹಿಂದುತ್ವ ಮತ್ತು ಶ್ರೀರಾಮನನ್ನ ತೆಗೆದುಕೊಂಡು ಬಂದಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ: ಬಿಜೆಪಿಯವರು ಚುನಾವಣೆಗಾಗಿ ರಾಮನನ್ನು ಬಳಸಿಕೊಳ್ಳುತ್ತಾರೆ. ಆದರೆ, ನಾವು ಶ್ರದ್ಧೆ, ಭಕ್ತಿಯಿಂದ ರಾಮನನ್ನು ಪೂಜಿಸುತ್ತೇವೆ. ನಾವೇ(ಕಾಂಗ್ರೆಸ್‌ನವರು) ನಿಜವಾದ ಹಿಂದುಗಳು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಾವು ಶ್ರದ್ಧೆ, ಭಕ್ತಿಯಿಂದ ರಾಮನನ್ನ ಪೂಜೆ ಮಾಡ್ತೇವಿ. ಕಾಂಗ್ರೆಸ್‌ನವರು ನಿಜವಾದ ಹಿಂದುಗಳು. ನಾವು ಯಾವತ್ತೂ ಕೂಡ ರಾಜಕಾರಣಕ್ಕೆ ಹಿಂದುತ್ವ ಮತ್ತು ಶ್ರೀರಾಮನನ್ನ ತೆಗೆದುಕೊಂಡು ಬಂದಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ- ರೈತರಿಗೆ ವರವಾಗದೆ ಶಾಪವಾದ ಉಗಾರ ಶುಗರ್ ಪ್ಯಾಕ್ಟರಿ
ದೇಶದಲ್ಲಿ ಲಕ್ಷಾಂತರ ರಾಮನ ದೇವಸ್ಥಾನಗಳಿವೆ. ಬಿಜೆಪಿಯವರು ಮತಕ್ಕಾಗಿ ಶ್ರೀರಾಮನನ್ನ ನೆನಪು ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನವರು ಯಾವತ್ತಿಗೂ ದೇವರನ್ನ ಹಿಂದುತ್ವವನ್ನ ರಾಜಕಾರಣದಲ್ಲಿ ತರೋಲ್ಲ ಎಂದ ಅವರು
ಇವರಿಗೆ ಏನೂ ಬಂಡವಾಳ ಇಲ್ಲ, ಈಗಾಗಿ ಧರ್ಮವನ್ನ ತರುತ್ತಾರೆ, ರಾಮನನ್ನು ತರ್ತಾರೆ ಎಂದು ಹರಿಹಾಯ್ದರು.
ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಗಿಮ್ಮಿಕ್ಕ ಮಾಡ್ತಾ ಇದ್ದಾರೆ. ಅವರು ಅಂಕಿ ಅಂಶ ಇಟ್ಟುಕೊಂಡು ಮಾತನಾಡಬೇಕು. ಬಿಜೆಪಿಯವರು ರಾಜಕಾರಣಕ್ಕೆ ಏನ್ ಏನೋ ಮಾತನಾಡುತ್ತಾರೆ, ಅದಕ್ಕೆ ತಲೆ ಕೆಡಿಸಿಕೊಳ್ಳುವುದು ಅವಶ್ಯಕತೆ ಇಲ್ಲ. ಬಿಜೆಪಿಯವರು ಪುಕ್ಸಟ್ಟೆಯಾಗಿ ಅಧಿಕಾರಕ್ಕೆ ಬಂದವರು, ಪುಕ್ಸಟ್ಟೆಯಾಗಿ ಏನೂ ಕೊಡಲಿಲ್ಲ ಎಂದು ಸಚಿವರು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಇದನ್ನೂ ಓದಿ- "ಕಾಂಗ್ರೆಸ್ ಗ್ಯಾರಂಟಿಯಿಂದ ಆರ್ಥಿಕ ಬಲ; ಅಂಕಿ-ಅಂಶ ಬೇಕಿದ್ದರೆ ಕೇಳಿ ಪಡೆಯಿರಿ"
ಬಿಜೆಪಿಯವರು ಕೆಲಸ ಮಾಡಲ್ಲ, ಕೆಲಸ ಮಾಡುವವರಿಗೂ ಬಿಡಲ್ಲ ಎಂದ ಅವರು ಆಗೋದಕ್ಕೆ ಹರಕತ್ತು, ಆಗದಿದ್ದಕ್ಕೆ ಕುಮ್ಮಕ್ಕು ಎನ್ನುವುದು ಬಿಜೆಪಿಯವರ ಕಥೆ ಆಗಿದೆ. ಬಿಜೆಪಿಯವರ ಮಾತಿಗೆ ಕಿಮ್ಮತ್ತಿಲ್ಲ, ಜನರು ಅವರನ್ನ ಏಕೆ ಮನೆಗೆ ಕಳುಹಿಸಿದರು. ಈಗ ನಾವು ಕೆಲಸ ಮಾಡ್ತಾ ಇದ್ದೀವಿ. ಪ್ರತಿದಿನ 60 ಲಕ್ಷ ಮಹಿಳೆಯರು ಫ್ರೀಯಾಗಿ ಸಂಚಾರ ಮಾಡ್ತಾರೆ .ಅವರ ಶಾಪ ಬಿಜೆಪಿಗರಿಗೆ ತಟ್ಟುತ್ತೆ ಎಂದರಲ್ಲದೆ ಕಾಂಗ್ರೆಸ್‌ನ ಶಕ್ತಿ ಯೋಜನೆಗೆ ನಿರೀಕ್ಷೆಗೂ ಮೀರಿ ಜನ ಸ್ಪಂದಿಸುತ್ತಿದ್ದಾರೆ. 84 ಲಕ್ಷದಿಂದ 1 ಕೋಟಿ 10 ಲಕ್ಷ ಜನರೂ ಸಂಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.