Hubli Dharwad Bandh: ರಾಜ್ಯ ಸರ್ಕಾರದ ಜನಪ್ರಿಯ ಶಕ್ತಿ ಯೋಜನೆ ರದ್ದತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ಚಾಲಕರ ಮಾಲೀಕರ ಸಂಘ ಇಂದು  ಕರೆ ನೀಡಲಾಗಿದ್ದ ಹುಬ್ಬಳ್ಳಿ ಧಾರವಾಡ ಅವಳಿನಗರ ಬಂದ್ ಯಶಸ್ವಿಯಾಗಿದೆ. 


COMMERCIAL BREAK
SCROLL TO CONTINUE READING

ರಾಜ್ಯ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಜನರಿಗೆ ಅನಗತ್ಯವಾಗಿ ಶಕ್ತಿ ಯೋಜನೆ ಅಡಿ ಸಾರಿಗೆ ಬಸ್ ನಲ್ಲಿ ಉಚಿತವಾಗಿ ಪ್ರಯಾಣದ ಆಶ್ವಾಸನೆ ನೀಡಿ ಈಗ ಜಾರಿ ಮಾಡಿದ್ದರಿಂದ  ಆಟೋ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಮಾಲೀಕರಿಗೆ ಬದುಕಿಗೆ ತೊಂದರೆ ಆಗಿದೆ.‌ ಆದ್ದರಿಂದ ಕೂಡಲೇ ರಾಜ್ಯ ಸರ್ಕಾರದ ಶಕ್ತಿ ಯೋಜನೆ ರದ್ದು ಮಾಡಬೇಕು. ಶಕ್ತಿ ಯೋಜನೆ ರದ್ದು ಮಾಡಿ ಬೇಕಾದರೆ ಪರ್ಯಾಯ ಯೋಜನೆ ಘೋಷಣೆ ಮಾಡಲಿ  ಎಂದು ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕ ಆಟೋ ಚಾಲಕರ ಮಾಲೀಕರ‌ ಸಂಘ ಹಾಗೂ ಹುಬ್ಬಳ್ಳಿ ಅಟೋ ರೀಕ್ಷಾ ಚಾಲಕರ ಸಂಘದ ವತಿಯಿಂದ ನೀಡಿದ ಹುಬ್ಬಳ್ಳಿ ಧಾರವಾಡ ಬಂದ್ ಗೆ ಒಳ್ಳೆಯ ಬೆಂಬಲ ಸಿಕ್ಕಿದೆ.  


ಉತ್ತರ ಕರ್ನಾಟಕ ಅಟೋ ಚಾಲಕರ ಮಾಲೀಕರ‌ ಸಂಘ ಅಧ್ಯಕ್ಷ ಶೇಖರಯ್ಯಾ ಮಠಪತಿ,  ಮ್ಯಾಕ್ಸಿ ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ ಅಮೃತಪ್ಪ ಚಲವಾದಿ ಸೇರಿದಂತೆ ಅನೇಕ ಮುಖಂಡರು ಬಂದ್ ನೇತೃತ್ವ ವಹಿಸಿದ್ದಾರೆ. 


ಇದನ್ನೂ ಓದಿ- Milk Price Hike: ನಾಳೆಯಿಂದ 3 ರೂ. ಹೆಚ್ಚಾಗಲಿದೆ ಹಾಲಿನ ದರ! ಯಾವ ಹಾಲಿನ ದರ ಎಷ್ಟು?


ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸರ್ಕಾರದಿಂದ ಜಾರಿಯಾಗಿರುವ ಶಕ್ತಿ ಯೋಜನೆ ರದ್ದತಿ ಮಾತ್ರವಲ್ಲದೆ, ಆಟೋ ಚಾಲಕರ ಹಾಗೂ ಮ್ಯಾಕ್ಸಿ ಕ್ಯಾಬ್  ಚಾಲಕರ  ವಿವಿಧ ಬೇಡಿಕೆಗಳು ಇವೆ. ತಮ್ಮ ನ್ಯಾಯಯುತವಾದ ಬೇಡಿಕೆ ಈಡೇರಿಸಲು ಸರಕಾರ ಮುಂದಾಗಬೇಕು. ಇಲ್ಲದಿದ್ದರೆ ಮುಂದೆ ಬೆಂಗಳೂರು ಚಲೋ ನಂತರ ಉಗ್ರ ಸ್ವರೂಪದ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. 


ಹುಬ್ಬಳ್ಳಿ - ಧಾರವಾಡ ಆಟೋ ಬಂದ್ ಗೆ ಕರೆ ನೀಡಿದ ಹಿನ್ನಲೆಯಲ್ಲಿ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿನ ಸುಮಾರು 45 ಸಾವಿರ ಆಟೋ ರೀಕ್ಷಾ ರಸ್ತೆಗೆ ಇಳಿದಿಲ್ಲ. ಇದರಿಂದಾಗಿ ಅಟೋಗಳನ್ನೇ ಅವಲಂಬಿಸಿದವರು ಹಾಗೂ ಕೆಲ  ಶಾಲೆಗಳ ಮಕ್ಕಳು ತೊಂದರೆ ಅನುಭವಿಸುವಂತಾಯಿತು. ಬಂದ್ ಕರೆಗೆ ವಿವಿಧ ಆಟೋ ಸಂಘಟನೆಗಳಿಂದಲೂ ಬೆಂಬಲ ನೀಡಿದ್ದು ಇನ್ನು ಹೆಚ್ಚು ಸಂಘಟನೆಗಳ ಬೆಂಬಲ ನೀಡುವ ನೀರಿಕ್ಷೆ ಇದೆ.  


ಉತ್ತರ ಕರ್ನಾಟಕ ಆಟೋ ಚಾಲಕರ ಮಾಲೀಕರ ಸಂಘದ ಬೇಡಿಕೆಗಳೇನು? 
* ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಪ್ರತಿಕೂಲ ಪರಿಣಾಮ ಉಂಟಾಗಿದ್ದು ಆಟೋ ಚಾಲಕರ ಜೀವನ ನಿರ್ವಹಣೆ ಕಷ್ಟವಾಗಿದೆ. ಕೂಡಲೇ ಶಕ್ತಿ ಯೋಜನೆ ರದ್ದುಗೊಳಿಸಬೇಕು  ಇಲ್ಲವೇ ಆಟೋ ಚಾಲಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. 
* ಹುಬ್ಬಳ್ಳಿ ಧಾರವಾಡ ಸುತ್ತಮುತ್ತಲಿನ 10 ಕೀಲೋ ಮೀಟರ್ ಬಿಟ್ಟು ಶಕ್ತಿ ಯೋಜನೆ ಜಾರಿ ಮಾಡಬಹುದು.
* ಯಾವುದೇ ಕಾರಣಕ್ಕೂ ಅಟೋ ಚಾಲಕರ, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ ಚಾಲಕರ ಬದುಕಿಗೆ ತೊಂದರೆ ಬೇಡಾ.
* ಇನ್ನೂ ಹುಬ್ಬಳ್ಳಿ ಧಾರವಾಡದಲ್ಲಿ ಆಟೋ ನಿಲ್ದಾಣ ನಿರ್ಮಾಣ, ಅನಗತ್ಯವಾಗಿ ಪೊಲೀಸರಿಂದ‌ ಕಿರುಕುಳ ನಿಲ್ಲಿಸಬೇಕು. 
* ಆಟೋ ಚಾಲಕರಿಗೆ ಗುಂಪು ವಿಮೆ ಯೋಜನೆ ಜಾರಿ ಆಗಲಿ.
* ಇದರ ಜೊತೆಗೆ ಬಿಆರ್ ಟಿಎಸ್ ಕಾರಿಡಾರ್ ಉದ್ದಕ್ಕೂ ಆಟೋ ನಿಲುಗಡೆಗೆ ಅವಕಾಶ ಕೊಡಬೇಕು.
* ಇದಕ್ಕಾಗಿ ಸಾರಿಗೆ ಇಲಾಖೆಯಿಂದ‌ ಫರ್ಮಿಟ್ ಕೊಡುವುದರ ಜೊತೆಗೆ ಕಡ್ಡಾಯವಾಗಿ ಮೀಟರ್ ಅಳವಡಿಕೆ ತಕ್ಷಣ ಆದೇಶ ವಾಪಾಸಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹ ಮಾಡಿದ್ದಾರೆ.


ಇದನ್ನೂ ಓದಿ- ಗೃಹಲಕ್ಷ್ಮಿ-ಶಕ್ತಿ ಯೋಜನೆಯಿಂದ ಅತ್ತೆ-ಸೊಸೆ ನಡುವೆ ಕಂದಕ ಸೃಷ್ಟಿಯಾಗಿದೆ: ಬಿಜೆಪಿ


ಈ ಕುರಿತು ಈಗಾಗಲೇ ಮುಖ್ಯಮಂತ್ರಿ  ಸಿದ್ದರಾಮಯ್ಯನವರಿಗೆ ಹುಬ್ಬಳ್ಳಿ ಧಾರವಾಡದ ಕ್ಷೇತ್ರದ ಶಾಸಕರಿಗೆ ಹಾಗೂ ಧಾರವಾಡ ಉಸ್ತುವಾರಿ  ಸಚಿವರಿಗೆ ‌ಮನವಿ ಕೊಡಲಾಗಿದೆ. ಆದಾಗ್ಯೂ, ಆಟೋ ಚಾಲಕರ ಮನವಿಗೆ ಯಾರೂ ಕೂಡ ಇದುವರೆಗೂ ಯಾವುದೇ ರೀತಿಯ ಸ್ಪಂದನೆ ಮಾಡಿಲ್ಲ. ಹಾಗಾಗಿ ನಮಗೆ ಹೋರಾಟ ಅನಿವಾರ್ಯವಾಗಿದೆ.  ಇನ್ನೊಂದು ಬೇಸರದ ಸಂಗತಿ ಇಂದು ಬೆಂಗಳೂರಿನಲ್ಲಿ ಸಾರಿಗೆ ಸಚಿವರು ಹಾಗೂ ಸಾರಿಗೆ ಆಯುಕ್ತರು ಅಟೋ ಚಾಲಕರು ಸಂಘ ಸೇರಿದಂತೆ ಖಾಸಗಿ ವಾಹನಗಳ ಮಾಲೀಕರ ಸಂಘದ ಸಭೆ ಕರೆದಿದ್ದು ಉತ್ತರ ಕರ್ನಾಟಕ ಆಟೋ ಚಾಲಕರು ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರ ಹಾಗೂ ಮಾಲೀಕರ ಸಂಘಟನೆಯವರನ್ನ ಸಭೆಗೆ ಕರೆದಿಲ್ಲ. ಆದ್ದರಿಂದ ಇದೊಂದು ಮಲತಾಯಿ ಧೋರಣೆ ಆಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಉತ್ತರ ಕರ್ನಾಟಕ ಮ್ಯಾಕ್ಸಿ ಕ್ಯಾಬ್ ಚಾಲಕರ ಮಾಲೀಕರ ಸಂಘದ ಮುಖಂಡ  ಅಮೃತಪ್ಪ ಚಲವಾದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.