ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಇಡೀ ಜಿಲ್ಲೆಗೆ ಇನ್ನು ಒಂದೂವರೆ ವರ್ಷದೊಳಗೆ ಮಲಪ್ರಭಾ ನೀರು (Malaprabha water) ಕೊಟ್ಟೇ ಕೊಡುವೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ (Union Parliamentary Minister Prahlada Joshi)  ಭರವಸೆ ನೀಡಿದರು. 


COMMERCIAL BREAK
SCROLL TO CONTINUE READING

ಕುಂದಗೋಳ ವಿಧಾನಸಭೆ ಕ್ಷೇತ್ರ( Kundagola Assembly Constituency0ದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಲಪ್ರಭಾ ಕುಡಿಯುವ ನೀರು ಯೋಜನೆ (Malaprabha Drinking Water Project) ಕೈಗೊಳ್ಳಲು ಆಗಲೇ ಟೆಂಡರ್ ಕರೆಯಲಾಗಿದೆ. ಇನ್ನು, ಒಂದು ಅಥವಾ ಒಂದೂವರೆ ವರ್ಷದಲ್ಲಿ ಇಡೀ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗೂ ಮಲಪ್ರಭೆ ನೀರು ಹರಿಯಲಿದೆ ಎಂದು ಹೇಳಿದರು.


ಜಲಜೀವನ್ ಯೋಜನೆ (Jaljeevan Yojana)ಯಡಿ 1200 ಕೋಟಿ ರು.ವೆಚ್ಚದಲ್ಲಿ ಮಲಪ್ರಭಾ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಮನೆಗೂ ಈ ನೀರು ಕೊಟ್ಟೇ ಕೊಡುತ್ತೇನೆ ಎಂದು ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.


ಇದನ್ನೂ ಓದಿ- "ನಮ್ಮ ಸಂವಿಧಾನ ಬದಲಾವಣೆಗೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರಲ್ಲ"-ಸಿ.ಎಂ.ಸಿದ್ದರಾಮಯ್ಯ


ಎಂ.ಆರ್.ಪಾಟೀಲ್ (M.R. Patil) ಅವರು ಕಾಳಜಿ ತೋರಿ ಏನಾದರು ಮಾಡಿ ನಮ್ಮ ಜಿಲ್ಲೆಗೂ ಜಲಜೀವನ್ ಯೋಜನೆ ತನ್ನಿ ಎಂದು ಪ್ರಸ್ತಾಪ ಮುಂದಿಟ್ಟರು. ಕೊನೆಗೆ ಪ್ರಧಾನಿ ಮುಂದೆ ಪ್ರಾಜೆಕ್ಟ್ ರಿಪೋರ್ಟ್ ಇರಿಸಿ ಮನವಿ ಮಾಡಿದೆ. ಮೋದಿ ಅವರು ಕ್ಷಣಾರ್ಧದಲ್ಲೇ ಒಪ್ಪಿಗೆ ಸೂಚಿಸಿದರು ಎಂದವರು ತಿಳಿಸಿದರು. 


ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಮೊದಲ ಹಂತದ ಜಲಜೀವನ್ ಯೋಜನೆ (First Phase Jaljeevan Project) ಯಲ್ಲೇ ನಮ್ಮ ಧಾರವಾಡ ಜಿಲ್ಲೆಯನ್ನು ಸೇರ್ಪಡೆ ಮಾಡಿದರು. ಅದರ ಪರಿಣಾಮ ಇಂದು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನೀಗುತ್ತಿದೆ ಎಂದು ತಿಳಿಸಿದರು.


ತಾಯಂದಿರ ಮೇಲೆ ಮೋದಿಜಿಗೆ ಅಪಾರ ಪ್ರೀತಿ: 
ಪ್ರಧಾನಿ ಮೋದಿ ಅವರು ಬಾವಿಯಿಂದ ನೀರು ಸೇದು ತಂದು ಕಷ್ಟಪಟ್ಟು ತಮ್ಮನ್ನು ಬೆಳೆಸಿದ ದೃಶ್ಯವನ್ನು ಒಮ್ಮೆ ಕಣ್ತುಂಬಿಕೊಂಡು ತಾಯಂದಿರು ಎದುರಿಸುತ್ತಿರುವ ನಿರೀನ ಬವಣೆ ನೀಗಿಸಲೆಂದೇ ಜಲ ಜೀವನ್ ಅನುಷ್ಠಾನಗೊಳಿಸಿದರು ಎಂದು ಜೋಶಿ ಸ್ಮರಿಸಿದರು.


ಇದನ್ನೂ ಓದಿ- ಡಿ.ಕೆ.ಸುರೇಶ್ ನೆನಪಿಸಿಕೊಂಡಿದ್ದಕ್ಕೆ ಮೋದಿಗೆ ಅಭಿನಂದನೆ ಹೇಳಿದ ಡಿಕೆ ಶಿವಕುಮಾರ್


ಸರ್ಕಾರೇತರ ಸಂಸ್ಥೆಗಳನ್ನೂ ಅಭಿವೃದ್ಧಿಯಲ್ಲಿ ತೊಡಗಿಸಿದೆ:
ಕಲ್ಲಿದ್ದಲು ಗಣಿಗಾರಿಕೆ ಕಂಪನಿಗಳನ್ನು ಸಹ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿದ್ದೇನೆ. ಪ್ರಧಾನಿ ಮೋದಿ ಅವರ ಆಶಯ, ಅಣತಿಯಂತೆ ನಯಾ ಪೈಸೆ ಭ್ರಷ್ಟಾಚಾರಕ್ಕೆ ಇಳಿಯದೆ ಹಣ ಕೊಡಲು ಬಂದ ಗಣಿ ಕಂಪನಿಗಳನ್ನು ಶಾಲೆ, ಆಸ್ಪತ್ರೆ ಅಭಿವೃದ್ಧಿಯಂತಹ ಸೇವೆಗೆ ಪ್ರೇರೇಪಿಸಿ ಕೋಟ್ಯಂತರ ರೂಪಾಯಿ ಅನುದಾನ ಕೊಡಿಸಿದ್ದೇನೆ ಎಂದು ಜೋಶಿ ತಿಳಿಸಿದರು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.