ನವದೆಹಲಿ: ಅಕ್ಟೋಬರ್ 19 ರಂದು ದೆಹಲಿ-ಲಕ್ನೋ ತೇಜಸ್ ಎಕ್ಸ್‌ಪ್ರೆಸ್ ಚಾಲನೆಯಲ್ಲಿ ಮೂರು ಗಂಟೆಗಳಿಗಿಂತ ಹೆಚ್ಚಿನ ವಿಳಂಬದಿಂದಾಗಿ ಈಗ ಐಆರ್‌ಸಿಟಿಸಿಗೆ ಸುಮಾರು 1.62 ಲಕ್ಷ ರೂ. ದಂಡದ ಹೊರೆ ಬಿದ್ದಿದೆ.


COMMERCIAL BREAK
SCROLL TO CONTINUE READING

ರೈಲ್ವೆ ಅಂಗಸಂಸ್ಥೆಯು ತನ್ನ ವಿಮಾ ಕಂಪನಿಗಳ ಮೂಲಕ ಸುಮಾರು 950 ಪ್ರಯಾಣಿಕರಿಗೆ ಪರಿಹಾರವಾಗಿ ಪಾವತಿಸಲಿದೆ, ಆ ಮೂಲಕ ಇಂತಹ ಕ್ರಮ ಈಗ ಭಾರತೀಯ ಇತಿಹಾಸದಲ್ಲಿ ಮೊದಲನೆಯದು ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು. ಬೆಳಿಗ್ಗೆ 6.10 ಕ್ಕೆ ಹೊರಡುವ ಬದಲು ಲಕ್ನೋದಿಂದ ಬೆಳಿಗ್ಗೆ 9.55 ಕ್ಕೆ ಪ್ರಾರಂಭವಾದ ಈ ರೈಲು ಮಧ್ಯಾಹ್ನ 12.25 ರ ಬದಲು ಮಧ್ಯಾಹ್ನ 3.40 ಕ್ಕೆ ನವದೆಹಲಿಗೆ ತಲುಪಿತು. ಇದು ನವದೆಹಲಿಯಿಂದ ಮಧ್ಯಾಹ್ನ 3.35 ರ ಬದಲು ಸಂಜೆ 5.30 ಕ್ಕೆ ಹೊರಟು ರಾತ್ರಿ 11.30ಕ್ಕೆ ಲಕ್ನೋ ತಲುಪಿತು.


ಈಗ ಲಕ್ನೋದಿಂದ ದೆಹಲಿಗೆ ಪ್ರಯಾಣಿಸಿದ  450 ಪ್ರಯಾಣಿಕರು ತಲಾ 250 ರೂ.ಗಳನ್ನು ಪರಿಹಾರವಾಗಿ ಪಡೆಯಲಿದ್ದು, ದೆಹಲಿಯಿಂದ ಲಕ್ನೋವರೆಗೆ ಸುಮಾರು 500 ಪ್ರಯಾಣಿಕರು ಇದ್ದು, ಅವರಿಗೆ ತಲಾ 100 ರೂ.ಗಳನ್ನು ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ತೇಜಸ್ ಎಕ್ಸ್‌ಪ್ರೆಸ್‌ನ ಪ್ರತಿ ಟಿಕೆಟ್‌ನೊಂದಿಗೆ ವಿಮೆದಾರರ ಲಿಂಕ್ ಮೂಲಕ ಪ್ರತಿ ಪ್ರಯಾಣಿಕರು ಪರಿಹಾರವನ್ನು ಪಡೆಯಬಹುದು ಎಂದು ಅಧಿಕಾರಿಯೊಬ್ಬರು ಹೇಳಿದರು. ಕಾನ್ಪುರ ಬಳಿ ಹಳಿ ತಪ್ಪಿದ್ದರಿಂದ ಅಕ್ಟೋಬರ್ 19 ರಂದು ವಿಳಂಬವಾಗಿದೆ ಎಂದು ಅವರು ಹೇಳಿದರು.


ಐಆರ್‌ಸಿಟಿಸಿಯ ನೀತಿಯಡಿಯಲ್ಲಿ, ಒಂದು ಗಂಟೆಗೂ ಹೆಚ್ಚು ವಿಳಂಬವಾದರೆ 100 ರೂ ಮತ್ತು ಎರಡು ಗಂಟೆಗಳಿಗಿಂತ ಹೆಚ್ಚು ವಿಳಂಬವಾಗಿದ್ದರೆ 250 ರೂ. ಪಾವತಿಸಲಾಗುವುದು ಎಂದು ಐಆರ್‌ಸಿಟಿಸಿ ತನ್ನ ಮೊದಲ ರೈಲು ಪ್ರಾರಂಭಿಸುವ ಮುನ್ನ ಹೇಳಿತ್ತು. ಈ ಹಿನ್ನಲೆಯಲ್ಲಿ ಈಗ ಅದು ದಂಡವನ್ನು ಪಾವತಿಸಲಿದೆ ಎನ್ನಲಾಗಿದೆ.