ಅಬ್ಬಾ ..! 99,999 ರೂಪಾಯಿಗೆ ಮಾರಾಟವಾಯಿತು ಒಂದು ಕಿಲೋ ಚಹಾ ಪುಡಿ..!
ಸಗಟು ವ್ಯಾಪಾರಿ ಸೌರಭ್ ಟೀ ಟ್ರೇಡರ್ಸ್ ಈ ಚಹಾವನ್ನು ಖರೀದಿಸಿದ್ದಾರೆ. ಅಸ್ಸಾಂನ ದಿಬ್ರುಗಢ್ ಜಿಲ್ಲೆಯಲ್ಲಿರುವ ಮನೋಹರಿ ಟೀ ಎಸ್ಟೇಟ್ ಈ ಚಹಾವನ್ನು ಉತ್ಪಾದಿಸುತ್ತದೆ. ಈ ಚಹಾವು ವಿಶ್ವಾದ್ಯಂತ `ಮನೋಹರಿ ಗೋಲ್ಡ್` ಎಂದು ಪ್ರಸಿದ್ಧವಾಗಿದೆ.
ನವದೆಹಲಿ : Most Expensive Tea: ಅಸ್ಸಾಂನ ಗುವಾಹಟಿಯಲ್ಲಿ ಹರಾಜಾದ ಚಹಾ, ಪ್ರಪಂಚದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅಸ್ಸಾಂನ ತೋಟವೊಂದರ ಈ ಚಹಾ (Tea) ಕೆಜಿಗೆ 99,999 ರೂ.ಗೆ ಹರಾಜಾಗಿದೆ. 1 ಕೆಜಿಯ ಆರ್ಥೊಡಾಕ್ಸ್ ಗೋಲ್ಡನ್ ಟಿಪ್ ಟೀಯನ್ನು ಉತ್ಪಾದಿಸಿದ ಕಂಪನಿಯು 99,999 ರೂ.ಗೆ ಮಾರಾಟ ಮಾಡಿದೆ. ಈ ಚಹಾದ ಹರಾಜು ಗುವಾಹಟಿ ಟೀ ಹರಾಜು (Most Expensive Tea) ಕೇಂದ್ರದಲ್ಲಿ ನಡೆಯಿತು.
ಸಗಟು ವ್ಯಾಪಾರಿ ಸೌರಭ್ ಟೀ ಟ್ರೇಡರ್ಸ್ (Sourab tea traders) ಈ ಚಹಾವನ್ನು ಖರೀದಿಸಿದ್ದಾರೆ. ಅಸ್ಸಾಂನ ದಿಬ್ರುಗಢ್ ಜಿಲ್ಲೆಯಲ್ಲಿರುವ ಮನೋಹರಿ ಟೀ ಎಸ್ಟೇಟ್ ಈ ಚಹಾವನ್ನು ಉತ್ಪಾದಿಸುತ್ತದೆ. ಈ ಚಹಾವು ವಿಶ್ವಾದ್ಯಂತ 'ಮನೋಹರಿ ಗೋಲ್ಡ್' (Manohari gold) ಎಂದು ಪ್ರಸಿದ್ಧವಾಗಿದೆ. ಈ ಚಹಾಕ್ಕಾಗಿ ಪ್ರತಿ ವರ್ಷ ಬಿಡ್ಡಿಂಗ್ ಮಾಡಲಾಗುತ್ತದೆ. ಕಳೆದ ವರ್ಷ ಈ ಚಹಾ ಕೆಜಿಗೆ 75,000 ರೂ.ಗೆ ಮಾರಾಟವಾಗಿತ್ತು. ಅದೇ ವೇಳೆ ಅದಕ್ಕೂ ಒಂದು ವರ್ಷ ಮೊದಲು ಕೆ.ಜಿ.ಗೆ 50,000 ರೂ.ಗೆ ಚಹಾ ಮಾರಾಟವಾಗಿತ್ತು.
ಇದನ್ನೂ ಓದಿ : Bank union strike : ಬ್ಯಾಂಕ್ ಗ್ರಾಹಕರೆ ಗಮನಿಸಿ : ಎರಡು ದಿನ ಬ್ಯಾಂಕ್ ಬಂದ್!
2018ರಲ್ಲಿ 39 ಸಾವಿರ ರೂ :
ಇದರಿಂದ ಪ್ರತಿ ವರ್ಷ ಚಹಾ (Tea) ಬೆಲೆ ಏರಿಕೆಯಾಗುತ್ತಿರುವುದು ಸ್ಪಷ್ಟವಾಗಿದೆ. ಈ ಚಹಾವು 2018 ರಲ್ಲಿ ಮೊದಲ ಬಾರಿಗೆ ಸುದ್ದಿ ಮಾಡಿತ್ತು. ಅದು ಕೆಜಿಗೆ 39 ಸಾವಿರಕ್ಕೆ ಮಾರಾಟವಾಗುವ ಮೂಲಕ. ಇದರ ನಂತರ ಈ ಚಹಾ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸಿತು. ಸೌರಭ್ ಟೀ ಟ್ರೇಡರ್ಸ್ ನ ಸಿಇಒ ಎಂ.ಎಲ್.ಮಹೇಶ್ವರಿ ಮಾತನಾಡಿ, ಪ್ರಪಂಚದಾದ್ಯಂತ ಈ ಟೀಗೆ ಬೇಡಿಕೆ ಹೆಚ್ಚಿದೆ. ಹೆಚ್ಚಿನ ಬೇಡಿಕೆ ಮತ್ತು ಕಡಿಮೆ ಉತ್ಪಾದನೆಯಿಂದಾಗಿ ಅದರ ಬೆಲೆ ತುಂಬಾ ಹೆಚ್ಚಾಗಿದೆ ಎಂದು ಹೇಳಿದರು.
ಈ ಚಹಾವನ್ನು ಖರೀದಿಸಲು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದುದ್ದಾಗಿ ಸೌರಭ್ ಟೀ ಟ್ರೇಡರ್ಸ್ ಸಿಇಒ ತಿಳಿಸಿದ್ದಾರೆ. ಇದಕ್ಕಾಗಿ ತೋಟದ ಮಾಲೀಕರನ್ನು ಸಂಪರ್ಕಿಸಿದಾಗ ಅವರು ಅದನ್ನು ಖಾಸಗಿಯಾಗಿ ಮಾರಾಟ ಮಾಡಲು ನಿರಾಕರಿಸಿದರು. ಈ ಚಹಾವನ್ನು ಹರಾಜಿನಲ್ಲಿಯೇ (Tea Auction) ಮಾರಾಟ ಮಾಡುವುದಾಗಿ ಚಹಾ ತೋಟದ ಮಾಲೀಕರು ಹೇಳಿದ್ದರು. ಇದಾದ ನಂತರ ನಾವು 99,999 ರೂ ಬಿಡ್‌ನಲ್ಲಿ ಚಹಾವನ್ನು ಖರೀದಿಸಿದ್ದೇವೆ. 2018ರಲ್ಲಿ ಕೆ.ಜಿ.ಗೆ ರೂ.39 ಸಾವಿರ ಹಾಗೂ 2019ರಲ್ಲಿ ರೂ.50 ಸಾವಿರಕ್ಕೆ ಬಿಡ್ ಮಾಡಿ ಈ ಚಹಾವನ್ನು ಖರೀದಿಸಿರುವುದಾಗಿಯೂ ತಿಳಿಸಿದ್ದಾರೆ. ಕಳೆದ ವರ್ಷ ಈ ಟೀಯನ್ನು ವಿಷ್ಣು ಟೀ ಕಂಪನಿ ಖರೀದಿಸಿತ್ತು.
ಇದನ್ನೂ ಓದಿ : Varun Singh : ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಇನ್ನಿಲ್ಲ
ವಿಶೇಷತೆ ಏನು ಗೊತ್ತಾ?
ಅಸ್ಸಾಂನ (Assam) ಈ ಚಹಾ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇದು ವಿಶೇಷ ರುಚಿಗೆ ಹೆಸರುವಾಸಿಯಾಗಿದೆ. ಇದರ ಸುವಾಸನೆ ಮತ್ತು ಬಣ್ಣವು ರುಚಿಯಂತೆ ಬಹಳ ಆಕರ್ಷಕವಾಗಿದೆ. ಇದನ್ನು ಮಾಡಲು ಗೋಲ್ಡನ್ ಟಿಪ್ (Golden tip) ಅನ್ನು ಚಹಾ ಎಲೆಗಳಲ್ಲಿ ಬಳಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.