ನವದೆಹಲಿ: ಭಾರತದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಇರುವ 100 ರೂ. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ನಾಣ್ಯದ ಒಂದು ಭಾದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಇರಲಿದ್ದು, ದೇವನಾಗರಿ ಲಿಪಿಯಲ್ಲಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅವರ ಹೆಸರು ಬರೆಯಲಾಗುವುದು. ಈ ನಾಣ್ಯ 35 ಗ್ರಾಂ ತೂಕ ಇರಲಿದ್ದು, ಭಾವಚಿತ್ರದ ಕೆಳಗೆ ಅವರ ಜನ್ಮ ದಿನಾಂಕ ಹಾಗೂ ನಿಧನರಾದ ದಿನಾಂಕ 1924ರಿಂದ 2018 ಎಂದು ಅಚ್ಚಾಗಲಿದೆ. 


ನಾಣ್ಯದ ಮತ್ತೊಂದು ಭಾಗದಲ್ಲಿ ಅಶೋಕ ಸ್ಥಂಭದ ಸಿಂಹದ ಲಾಂಛನ ಮತ್ತು ಮಧ್ಯಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ 'ಸತ್ಯಮೇವ ಜಯತೇ' ಸಾಲು ಇರಲಿದೆ. ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ 'ಭಾರತ್' ಮತ್ತು ಬಲಭಾಗದಲ್ಲಿ ಇಂಗ್ಲಿಷ್‌ನಲ್ಲಿ 'ಇಂಡಿಯಾ' ಎಂದು ಬರೆದಿರುತ್ತದೆ. ಸಿಂಹದ ಲಾಂಛನದ ಕೆಳಗೆ ರೂಪಾಯಿ ಚಿಹ್ನೆ ಹಾಗೂ 100 ರೂ. ಎಂದು ಅಚ್ಚಾಗಲಿದೆ. 


ದೇಶಕಂಡ ಅತ್ಯುತ್ತಮ ನಾಯಕ, ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಳೆದ ಆಗಸ್ಟ್​ 16ರಂದು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು.