ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರ ಬಳಿ ಇರುವ ಸಂಭಾರ್ ಸರೋವರದಲ್ಲಿ ಸಾವಿರಾರು ಪಕ್ಷಿಗಳು ಸಾವನ್ನಪ್ಪಿವೆ. ಆದರೆ, ಇಲ್ಲಿಯವರೆಗೆ ಈ ಪಕ್ಷಿಗಳ ಸಾವಿಗೆ ಕಾರಣ ತಿಳಿದುಬಂದಿಲ್ಲ. ಮಾಹಿತಿಯ ಪ್ರಕಾರ, ಸಂಭಾರ್ ಸರೋವರದಲ್ಲಿ 1000 ಸ್ಥಳೀಯ ಮತ್ತು ವಲಸೆ ಹಕ್ಕಿಗಳು ಮೃತಪಟ್ಟಿವೆ. ಈ ಬಗ್ಗೆ ಮಾಹಿತಿ ತಿಳಿದಾಗಿನಿಂದ ಸ್ಥಳೀಯ ಆಡಳಿತ ಮತ್ತು ಜನರು ಆಘಾತಕ್ಕೊಳಗಾಗಿದ್ದಾರೆ. 


COMMERCIAL BREAK
SCROLL TO CONTINUE READING

ಜೈಪುರಕ್ಕೆ ಆಗಮಿಸಿದ ಸರ್ಕಾರಿ ಅಧಿಕಾರಿಗಳು, ಕೆಲ ಮೃತ ಪಕ್ಷಿಗಳನ್ನು ತನಿಖೆಗೆ ಕಳುಹಿಸಲಾಗಿದೆ ಎಂದು ಹೇಳಿದರು. ವರದಿ ಬಂದ ನಂತರವೇ ಪಕ್ಷಿಗಳ ಸಾವಿಗೆ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.



ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಸರೋವರದಲ್ಲಿ ಸುಮಾರು 1000 ಸ್ಥಳೀಯ ಮತ್ತು ವಲಸೆ ಹಕ್ಕಿಗಳು ಸಾವನ್ನಪ್ಪಿವೆ. ಇದರ ನಂತರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಕೌಶಿಕ್, "ನೀರು ಕಲುಷಿತವಾಗಿದೆಯೆ ಅಥವಾ ಇಲ್ಲವೇ ಎಂದು ತಿಳಿಯಲು, ನಾವು ಅದನ್ನು ಪರೀಕ್ಷಿಸುತ್ತೇವೆ, ಇಲ್ಲದಿದ್ದರೆ ಈ ಪಕ್ಷಿಗಳ ಸಾವು ಕೆಲವು ವೈರಲ್ ಕಾಯಿಲೆಯಿಂದ ಉಂಟಾಗಿರುವ ಸಾಧ್ಯತೆಯೂ ಇದೇ" ಎಂದು ಹೇಳಿದರು.


ಈ ಪಕ್ಷಿಗಳ ಸಾವು:
ನಾರ್ದರ್ನ್ ಶಾಲರ್, ಪಿಂಟೈಲ್, ಕೋನಮ್ ಟೀಲ್, ರೂಡಿ ಶೆಲ್ ಡಕ್, ಕಾಮನ್ ಕೋಡ್ ಗೆಡ್ವಾಲ್, ರಫ್, ಬ್ಲ್ಯಾಕ್ ಹೆಡೆಡ್ ಗಾಲ್, ಗ್ರೀನ್ ಬೀ ಈಟರ್, ಬ್ಲ್ಯಾಕ್ ಶೆಲ್ಲರ್ ಕೈಟ್ ಕ್ಯಾಸ್ಪಿಯನ್ ಗ್ಯಾಲ್, ಬ್ಲ್ಯಾಕ್ ವಿಂಗ್ಡ್ ಸ್ಟೀಲ್ಟ್, ಸ್ಯಾಂಡ್ ಪೈಪರ್, ಮಾರ್ಷ್ ಸ್ಯಾಂಡ್ ಪೈಪರ್, ಕಮ್ಸ್ ಸ್ಯಾಂಡ್ ಪೈಪರ್, ವುಡ್ ಸೆಂಡ್ ಪೈಪರ್ ಪೈಡ್ ಅಬ್ಸಾಯಿಟ್, ಕೆಂಟಿಸ್ ಪ್ಲೋವರ್, ಲಿಟಲ್ ರಿಂಗ್ಸ್ ಪ್ಲೋವರ್, ಲೆಸ್ಸರ್ ಸ್ಯಾಂಡ್ ಪ್ಲೋವರ್ ಮುಂತಾದ ಪಕ್ಷಿಗಳು ಪ್ರಾಣ ಕಳೆದುಕೊಂಡಿವೆ.